ಸುದ್ದಿಗಳು

ಬೆಳದಿಂಗಳಾಗಿ ಬಾ ನೀನು.. ಒಲವೇ…!!!

ಡಾ. ರಾಜ್ ಕುಮಾರ್ ಹಾಗೂ ಜಯಪ್ರದಾ ಅಭಿನಯದ “ಹುಲಿಯ ಹಾಲಿನ ಮೇವು” ಚಿತ್ರದಲ್ಲಿ ಮೂಡಿ ಬರುವ “ಬೆಳದಿಂಗಳಾಗಿ ಬಾ ನೀನು.. ತಂಗಾಳಿಯಾಗಿ ನಾನು…” ಹಾಡು ನೋಡುಗರ ಮನ ಸೆಳೆದು ತನ್ನಯತೆಯಿಂದ, ಪ್ರೀತಿಯ ಗುಂಗಿನಲ್ಲಿ ಮೈ ಮರೆಸುವಂತೆ ಮಾಡುತ್ತದೆ. ನಾಯಕ, ತನ್ನ ಪ್ರಿಯತಮೆಯನ್ನು ಬೆಳದಿಂಗಳಿಗೆ ಹೋಲಿಸಿ, ಈ ಹಾಡನ್ನು ಹಾಡುತ್ತಾನೆ.

ಕಣ‍್ಣಲ್ಲಿ ತುಂಬಿ ಒಲವಾ, ಎದೆಯಲ್ಲಿ ತುಂಬಿ ಒಲವಾ, ಬಾಳಲ್ಲಿ ತುಂಬಿದೆ, ಉಲ್ಲಾಸವ..

ನನ್ನೆದೆಯ ತಾಳ ನೀನು.. ನನ್ನುಸಿರ ರಾಗ ನೀನು. ನನ್ನೊಡಲ ಜೀವ ನೀನು..

ನೀನಿಲ್ಲವಾದರೆ ಈ ಪ್ರಾಣ ನಿಲ್ಲದೆ…

ಈ ನಮ್ಮ ಪ್ರೇಮಕೆ, ನಾ ಕೊಡಲೆ ಕಾಣಿಕೆ..

ಹೀಗೆ ನಾಯಕ ತನ್ಮಯತೆಯಿಂದ , ನಾಯಕಿ ತನ್ನ ಬದುಕಿನಲ್ಲಿ ಬಂದಿರುವುದರ ಕುರಿತಂತೆ ಮನ ದುಂಬಿ ಹಾಡುವುದನ್ನು ಕೇಳಿದಾಗ ನಮ್ಮ ಮನಸ್ಸು ಸಹ ಮೈ ತುಂಬಿ ಕುಣಿಯಲು ಪ್ರಾರಂಭಿಸುತ್ತದೆ.

ಈ ಹಾಡು ನಿಮಗಾಗಿ

Tags