ಸುದ್ದಿಗಳು

‘ಬೆಲ್ ಬಾಟಂ’ಗೆ ‘ಸಿಂಪಲ್ ಸ್ಟಾರ್’ ಸಾಥ್

ನಾಳೆ ‘ಬೆಲ್ ಬಾಟಂ’ ಚಿತ್ರದ ಟೀಸರ್ ಬಿಡುಗಡೆ ಮಾಡಲಿರುವ ರಕ್ಷಿತ್ ಶೆಟ್ಟಿ

ಬೆಂಗಳೂರು, ಡಿ.6: ಈಗಾಗಲೇ ‘ಕಿರಿಕ್ ಪಾರ್ಟಿ’, ‘ಸ.ಹಿ.ಪ್ರಾ.ಶಾಲೆ ಕಾಸರಗೋಡು’ ಮೂಲಕ ಗಮನ ಸೆಳೆದಿದ್ದ ನಿರ್ದೇಶಕ ರಿಷಬ್ ಶೆಟ್ಟಿ ‘ಬೆಲ್ ಬಾಟಂ’ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕನಟರಾಗುತ್ತಿದ್ದಾರೆ.

ಡಿಟೆಕ್ಟಿವ್ ದಿವಾಕರನ ಪರಿಚಯ

ಇನ್ನು ಮೊನ್ನೆಯಷ್ಟೇ ಚಿತ್ರತಂಡದವರು ಈ ಚಿತ್ರದಲ್ಲಿನ ನಾಯಕ ದಿವಾಕರನನ್ನು ಪರಿಚಯ ಮಾಡಿಕೊಡುವ ಒಂದು ಸಣ್ಣ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದರು. ಈ ವಿಡಿಯೋ ಎಲ್ಲರಿಗೂ ಮೆಚ್ಚುಗೆಯಾಗಿದೆ. ಇದೀಗ ಚಿತ್ರದ ಟೀಸರ್ ನಾಳೆ ಬೆಳಿಗ್ಗೆ ಸರಿಯಾಗಿ 10 ಗಂಟೆಗೆ ’ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.

ಬಾಂಡ್ ಸಿನಿಮಾ

ಈ ಚಿತ್ರದ ಮೂಲಕ 80 ರ ಕಾಲಘಟ್ಟದ ಜೀವನಶೈಲಿ, ಡ್ರೆಸ್ಕೋಡ್, ನೇಟಿವಿಟಿಯನ್ನು ತಿಳಿಸಿ ಕೊಡಲಾಗುತ್ತಿದೆ. ಈಗಾಗಲೇ ತಿಳಿದಿರುವಂತೆ ಈ ಚಿತ್ರದಲ್ಲಿ ನಾಯಕನಿಗೆ ಪತ್ತೇದಾರಿ ಪಾತ್ರವಿದ್ದು, ಈ ಕಿರು ಟೀಸರ್ ನಲ್ಲಿ ಜೇಮ್ಸ್ ಬಾಂಡ್ ರೀತಿಯೇ ನಡೆದು ಬರುವ ರಿಷಬ್ ಹಾಸ್ಯದ ಸ್ಪರ್ಶ ನೀಡಿದ್ದರು.

80ರ ದಶಕದ ಕಾಲಘಟ್ಟಕ್ಕೆ ತಕ್ಕಂತೆಯೇ ಸಿನಿಮಾ ರೂಪಿಸುವ ಸವಾಲು ನಿರ್ದೇಶಕರಿಗಿರುವುದರಿಂದ ಕೇಶವಿನ್ಯಾಸ, ವಸ್ತ್ರವಿನ್ಯಾಸ, ಪಾತ್ರಗಳನ್ನು ಕೂಡ ಅದೇ ರೀತಿ ತಯಾರು ಮಾಡುವುದು ಚಾಲೆಂಜಿಂಗ್ ಆಗಿದೆ. ಇದನ್ನು ನಿಭಾಯಿಸುತ್ತಿದ್ದಾರೆ ನಿರ್ದೇಶಕ ಜಯತೀರ್ಥ.. ಇನ್ನು ಈ ಚಿತ್ರಕ್ಕೆ ಹರಿಪ್ರಿಯಾ ನಾಯಕಿಯಾಗಿದ್ದು, ಮುಂದಿನ ವರ್ಷ ಸಿನಿಮಾ ತೆರೆಗೆ ಬರಲಿದೆ.

Tags