ಸುದ್ದಿಗಳು

ಫೆ.15 ಕ್ಕೆ ರಿಷಬ್ ಶೆಟ್ಟಿ ನಟಿಸಿರುವ ‘ಬೆಲ್ ಬಾಟಂ’ ರಿಲೀಸ್

ಸಾಕಷ್ಟು ಕುತೂಹಲ ಮೂಡಿಸಿರುವ ಸಿನಿಮಾ

ಬೆಂಗಳೂರು.ಜ.24:

ಸೃಜನಶೀಲ ನಿರ್ದೇಶಕ ಜಯತೀರ್ಥ ನಿರ್ದೇಶಿಸಿರುವ ‘ಬೆಲ್ ಬಾಟಂ’ ಚಿತ್ರದ ಬಿಡುಗಡೆಯ ದಿನಾಂಕ ಫಿಕ್ಸ್ ಆಗಿದೆ. ಮುಂದಿನ ತಿಂಗಳ 15 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ಕುತೂಹಲ ಮೂಡಿಸಿರುವ ಸಿನಿಮಾ

ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಹಾಡುಗಳು ಹಿಟ್ ಆಗಿದ್ದು, ಚಿತ್ರವು ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇನ್ನು ‘ರಿಕ್ಕಿ’, ‘ಕಿರಿಕ್ ಪಾರ್ಟಿ’ ಹಾಗೂ ‘ಸ.ಹಿ.ಪ್ರಾ,ಶಾಲೆ. ಕಾಸರಗೋಡು’ ಚಿತ್ರಗಳ ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕನಟರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ.

ಚಿತ್ರದ ಬಗ್ಗೆ

ಚಿತ್ರದಲ್ಲಿ ಕಾನ್ ಸ್ಟೇಬಲ್ ದಿವಾಕರನ ಪಾತ್ರದಲ್ಲಿ ರಿಷಬ್ ಮಿಂಚಿದ್ದು, ಅಚ್ಯುತ್ ಕುಮಾರ್ ದಿವಾಕರನ ತಂದೆಯ ಪಾತ್ರದಲ್ಲಿ ಕಾಣಿಸಿಲಿದ್ದಾರೆ. ಉಳಿದಂತೆ ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಇದೊಂದು 80 ರ ದಶಕದ ಡಿಟೆಕ್ಟಿವ್ ಸ್ಟೋರಿಯನ್ನು ಹೊತ್ತು ತರುತ್ತಿದೆ.

ಇನ್ನು ಈ ಚಿತ್ರದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಶಿವಮಣಿ ವಿಭಿನ್ನ ಪಾತ್ರಗಳ್ಲಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

#belbottom, #balkaninews #rishabshetty, #haripriya, #filmnews, #kannadasuddigalu

Tags

Related Articles