ಸುದ್ದಿಗಳು

ಯೋಧ ಗುರು ಮನೆಗೆ ಬೆಲ್ ಬಾಟಮ್ ಚಿತ್ರ ತಂಡ ಭೇಟಿ!!!

ಮಂಡ್ಯ,ಫೆ.18: ಯೋಧ ಗುರು ಮನೆಗೆ ಬೆಲ್ ಬಾಟಮ್ ಸಿನಿಮಾ ತಂಡ ಭೇಟಿ ನೀಡಿ ಸಾಂತ್ವಾನ ಹೇಳಿದೆ‌. ಪುಲ್ವಾಮ ಬಾಂಬ್ ದುರಂತದಲ್ಲಿ ಮಂಡ್ಯ ಯೋಧ ಕೂಡ ವೀರ ಮರಣಹೊಂದಿದ್ದರು. ನಿನ್ನೆಯಷ್ಟೆ ಈ ಯೋಧನ ಅಂತಿಮ ವಿಧಿವಿಧಾನ ನಡೆದು ಪಂಚಭೂತಗಳಲ್ಲಿ ಲೀನವಾದರು. ಸಾಕಷ್ಟು ಮಂದಿ ಈ ಕುಟುಂಬವನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು. ಅಷ್ಟೆ ಅಲ್ಲ ತಮ್ಮ ಕೈಲಾದ ಸಹಾಯ ಮಾಡಿದರು. ಇದೀಗ ಬೆಲ್ ಬಾಟಮ್ ಸಿನಿಮಾ ತಂಡ ಕೂಡ ಗುರು ಕುಟುಂಬವನ್ನು ಭೇಟಿ ಮಾಡಿದ್ದಾರೆ.

ಬೆಲ್ ಬಾಟಮ್ ತಂಡದಿಂದ ಧನಸಹಾಯ

ನಿರ್ದೆಶಕ ರಿಷಬ್ ಶೆಟ್ಟಿ, ನಟಿ ಹರಿಪ್ರಿಯಾ ಹಾಗೂ ನಿರ್ಮಾಪಕ ಸಂತೋಷ್ ಕುಮಾರ್ ಸೇರಿದಂತೆ ಸಿನಿಮಾದ ಕಲಾವಿದರು ಗುರು ಅವರ ಮನೆಗೆ ಹೋಗಿದ್ದರು. ಈ ವೇಳೆ ಕುಟುಂಬಸ್ಥರ ಬಳಿ ಮಾತನಾಡಿದ್ರು. ಗುರುವಿನ ಬಗ್ಗೆ ಕೆಲವೊಂದಿಷ್ಟು ಮಾತುಗಳನ್ನು, ಸಾಂತ್ವಾನವನ್ನು ಹೇಳಿದ್ರು. ಬಳಿಕ ನಿರ್ಮಾಪಕ ಸಂತೋಷ್ ಕುಮಾರ್ 25 ಸಾವಿರ ರೂ. ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು 50 ಸಾವಿರ ರೂ. ಚೆಕ್ ನೀಡಿದ್ರು.

ತಕ್ಕ ಉತ್ತರ ನೀಡಲೇಬೇಕು ಎಂದ ರಿಷಬ್

ಇನ್ನು ಇದೇ ವೇಳೆ ಮಾತನಾಡಿದ  ರಿಷಬ್, ಈ ವೇಳೆ ನಿಜಕ್ಕೂ ಬೇಸರವಾಗಿದೆ. ಅವರು ಅಲ್ಲಿ ದೇಶ ಕಾದಿರುವುದಕ್ಕೆ ಇಂದು ನಾವೆಲ್ಲಾ ಇಲ್ಲಿ ಚೆನ್ನಾಗಿದ್ದೇವೆ. ನಾನು ಅವರಿಗೆ ಹಣ ಕೊಟ್ಟಿದ್ದು ಯಾವುದೇ ರಾಜಕೀಯ ಅಥವಾ ಸ್ವಾರ್ಥಕ್ಕಾಗಿ ಅಲ್ಲ. ಜನ ಕೊಟ್ಟಿದ್ದು, ನಾನು ಅವರಿಗೆ ಕೊಟ್ಟಿದ್ದೇನೆ ಅಷ್ಟೆ. ಅವರಿಗೆ ನಾವು ತಕ್ಕ ಉತ್ತರ ನೀಡಬೇಕು. ಇತ್ತೀಚಿನ ಕೆಲವೊಂದಿಷ್ಟು ಬುದ್ದಿ ಜೀವಿಗಳು ಈ ಬಗ್ಗೆ ಯೋಚನೆ ಮಾಡಬೇಕು ಅಂತಾ ಮಾತನಾಡುತ್ತಿದ್ದಾರೆ. ಆ ಬುದ್ದಿಜೀವಿಗಳನ್ನು ಮೊದಲು ಓಡಿಸಬೇಕು. ಆಗ ಸರಿ ಹೋಗುತ್ತೆ. ಇಂಥಹ ಘಟನೆಗಳು ನಡೆದಾಗ ತಕ್ಕ ಉತ್ತರ ನೀಡಬೇಕು‌. ಸರ್ಜಿಕಲ್ ಸ್ಟ್ರೈಕ್ ಆಗ್ತಾ ಇದ್ದಾಗ ಮಾತ್ರ ಸರಿ ಹೋಗುತ್ತದೆ. ಭಾರತ ಹಾಗೇ ಹೀಗೆ ಮಾತನಾಡುವವರು ಎಲ್ಲಿ ಹೋದ್ರು. ಅಹಿಂಸಾ ಅಂದ್ರೆ ಏನ್ ಮಾಡಬೇಕು. ಒಂದು ಕೆನ್ನೆಗೆ ಹೊಡೆದ್ರೆ ಮತ್ತೊಂದು ಕೆನ್ನೆ ತೋರಿಸಿ, ಮತ್ತೊಂದು ಕೆನ್ನೆಗೆ ಹೊಡೆದ್ರೆ ಏನ್ ಮಾಡಬೇಕು ಅಲ್ವಾ. ಹಾಗಾಗಿ ಇವರಿಗೆ ಉತ್ತರ ನೀಡಲೇಬೇಕು ಅಂತಾ ಆಕ್ರೋಶವ್ಯಕ್ತಪಡಿಸಿದ್ರು.

ತಂದೆ ನೆನೆದು ಕಣ್ಣೀರು ಹಾಕಿದ ಹರಿಪ್ರಿಯ

ಇನ್ನು ಇದೇ ವೇಳೆ ಹರಿಪ್ರಿಯ ಮಾತನಾಡಬೇಕಾದ್ರೆ ತಂದೆ ನೆನೆದು ಭಾವುಕರಾದ್ರು. ನಾವೆಲ್ಲಾ ಶೂಟಿಂಗ್ ಮಾಡುವಾಗ ನೋಡಿದ್ದೇವೆ. ಮಳೆ ಬಿಸಿಲು ಅನ್ನದೇ ನಮ್ಮನ್ನೆಲ್ಲ ಕಾಯ್ತಾ ಇರುತ್ತಾರೆ. ಗುರು ಪತ್ನಿ ಸ್ಥಿತಿಯಂತೂ ಹೇಳದಾಗಿದೆ. ಈ ಘಟನೆ ಆದ ನಂತರವಂತೂ ನನ್ನ ತಾಯಿ ತುಂಬಾ ಭಯ ಪಟ್ಟಿದ್ದರು. ಯಾಕಂದ್ರೆ ಇತ್ತೀಚೆಗ ನಾನು ಶ್ರೀನಗರಕ್ಕೆ ಶೂಟಿಂಗ್ ಹೋಗಿದ್ದೆ ಈ ವೇಳೆ ಏನಾದ್ರೂ ಆಗಿದ್ರೆ ಅಂತಾ ಹೇಳಿದ್ರೆ. ಎಲ್ಲಾ ತಾಯಂದಿರೂ ಅಷ್ಟೆ ಭಯದಲ್ಲಿರುತ್ತಾರೆ. ಎಲ್ಲಾ ಯೋಧರಿಗೂ ಸಲಾಂ. ಅಲ್ಲಿ ಅವರು ದೇಶ ಕಾಯ್ತಾ ಇರೋದಿಕ್ಕೆ ನಾವಿಲ್ಲ ಆರಾಮಾಗಿರುವುದು. ನಾವೇನೇ ಹೇಳಿದ್ರೂ ಕೂಡ ಮಗನ ಕಳೆದುಕೊಂಡ ನೋವು ತುಂಬಲು ಸಾಧ್ಯವಾಗಿಲ್ಲ.

‘ಚಂಬಲ್’ ಸಿನಿಮಾ ಡಿ.ಕೆ.ರವಿಯವರ ಜೀವನಾಧರಿತವಲ್ಲ…!!?!!

#balkaninews #sandalwood #bellbottom #soldierguru

Tags