ಸುದ್ದಿಗಳು

ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲಬಾರಿಗೆ ಬಿಡುಗಡೆಯಾಗಲಿದೆ ‘ಬೆಲ್ ಬಾಟಂ’ ಆಡಿಯೋ ಟ್ರೈಲರ್!!

ಬೆಂಗಳೂರು,ಫೆ.8:

ಈಗಾಗಲೇ ಚಿತ್ರದ ಟೀಸರ್, ಟ್ರೈಲರ್, ಹಾಡುಗಳು ಹಿಟ್ ಆಗಿದ್ದು, ಚಿತ್ರವು ತನ್ನ ವಿಭಿನ್ನ ಪೋಸ್ಟರ್ ಗಳ ಮೂಲಕ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಇನ್ನು ‘ರಿಕ್ಕಿ’, ‘ಕಿರಿಕ್ ಪಾರ್ಟಿ’ ಹಾಗೂ ‘ಸ.ಹಿ.ಪ್ರಾ,ಶಾಲೆ. ಕಾಸರಗೋಡು’ ಚಿತ್ರಗಳ ನಿರ್ದೇಶಕ ರಿಷಬ್ ಶೆಟ್ಟಿ ಈ ಚಿತ್ರದ ಮೂಲಕ ನಾಯಕನಟರಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ…

80 ದಶಕದ ಡಿಟೆಕ್ಟಿವ್ ಸ್ಟೋರಿ

ರಿಶಬ್ ಶೆಟ್ಟಿ ಮತ್ತು ಹರಿಪ್ರಿಯಾ ಅವರ ಬೆಲ್ ಬಾಟಂ ಬಿಡುಗಡೆಯಾದ ಇತರ ಕನ್ನಡ ಚಿತ್ರಗಳ ವಿಭಿನ್ನತೆಇ ಚಿತ್ರದಲ್ಲಿ ಎದ್ದು ಕಾಣುತ್ತಿದೆ.. ಇದೊಂದು 80 ರ ದಶಕದ ಡಿಟೆಕ್ಟಿವ್ ಸ್ಟೋರಿಯನ್ನು ಹೊತ್ತು ತರುತ್ತಿದೆ.

ಮೊದಲ ಬಾರಿಗೆ ಚಿತ್ರದ ಆಡಿಯೋ ಟ್ರೈಲರ್

ಇನ್ನು ಕನ್ನಡ ಚಲನಚಿತ್ರ ಇತಿಹಾಸದಲ್ಲಿ ಮೊದಲ ಬಾರಿಗೆ ಚಿತ್ರದ ಆಡಿಯೋ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ರಿಷಬ್ ಈಗ ಬಹಿರಂಗಪಡಿಸಿದ್ದಾರೆ. ಬೆಲ್ ಬಾಟಂ ತಂಡದವರು ನಾಳೆ ಫೆಬ್ರುವರಿ 9ಕ್ಕೆ 6 ಗಂಟೆಗೆ ಬಿಡುಗಡೆ  ಮಾಡುತ್ತಿದ್ದಾರೆ.
ಇನ್ನು ಈ ಚಿತ್ರದಲ್ಲಿ ನಿರ್ದೇಶಕರಾದ ಯೋಗರಾಜ್ ಭಟ್ ಮತ್ತು ಶಿವಮಣಿ ವಿಭಿನ್ನ ಪಾತ್ರಗಳ್ಲಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

Tags

Related Articles