ಸುದ್ದಿಗಳು

ಮಗನ ಟೈಟಲ್ ನಿಂದ ಬೇಸರಗೊಂಡಿದ್ದಾರಂತೆ ಬೆಲ್ಲಂಕೊಂಡ ಸುರೇಶ್…!

ಹೈದ್ರಾಬಾದ್, ಜ.12: ಪ್ರತಿಯೊಬ್ಬ ತಂದೆಯೂ ತನ್ನ ಮಗಳ ಬಗ್ಗೆ ಕೊಂಚ ಹೆಚ್ಚೇ ಕಾಳಜಿ ವಹಿಸುತ್ತಾನೆ. ಆತ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳ ಬಗ್ಗೆ ಎಚ್ಚರಿಸಿ ಸರಿದಾರಿಗೆ ತರಲು ಯತ್ನಿಸುತ್ತಲೇ ಇರುತ್ತಾನೆ. ಇದೀಗ ನಿರ್ಮಾಪಕ ಬೆಲ್ಲಂಕೊಂಡ ಸುರೇಶ್, ತಮ್ಮ ಮಗ ಬೆಲ್ಲಂಕೊಂಡ ಶ್ರೀನಿವಾಸ್ ಅವರ ಸಿನಿಜೀವನದ ಬಗ್ಗೆ ಚಿಂತಿತರಾಗಿದ್ದಾರಂತೆ.

ಒಂದರ ಹಿಂದೊಂದರಂತೆ ಪ್ಲಾಪ್ ಚಿತ್ರಗಳನ್ನು ನೀಡುತ್ತಿರುವ ಬೆಲ್ಲಂಕೊಂಡ ಶ್ರೀನಿವಾಸ್ ಮತ್ತೊಮ್ಮೆ ತಪ್ಪು ಹೆಜ್ಜೆ ಇಡುತ್ತಿದ್ದಾರೆ ಎಂಬ ಲೆಕ್ಕಚಾರದಲ್ಲಿರುವ ತಂದೆ, ಸುರೇಶ್ ಇದೀಗ ಮಗನಿಗೆ ಬುದ್ದಿ ಹೇಳಿದ್ದು, ಮುಂದಿನ ಚಿತ್ರಕ್ಕೆ ಸೀತಾ ಎಂದು ಹೆಸರಿಡುವ ಬದಲು ಹಿರೋ ಒರಿಯೆಂಟೆಡ್ ಹೆಸರಿಡುವಂತೆ ಸೂಚಿಸಿದ್ದಾರಂತೆ. ಮೃದುವಾದ ಟೈಟಲ್ ಇಟ್ಟು ಮತ್ತೊಮ್ಮೆ ಮುಗ್ಗರಿಸುವುದಕ್ಕಿಂತ ಚಿತ್ರಕ್ಕೆ ಗಟ್ಟಿಯಾದ ಟೈಟಲ್ ಇಟ್ಟು, ಚಿತ್ರಕತೆಯಲ್ಲಿ ಬದಲಾವಣೆ ತರುವಂತೆ ಅವರು ಮಗನಿಗೆ ಬುದ್ದಿಮಾತು ಹೇಳಿದ್ದಾರಂತೆ.ತೇಜಾ ಬೋಲ್ಡ್ ಡಿಸಿಷನ್

ಇತ್ತೀಚೆಗೆ ಶ್ರೀನಿವಾಸ್ ಅವರ  ‘ಸಾಕ್ಷ್ಯಂ’ ಮತ್ತು ‘ಕವಚಂ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಮುಗ್ಗರಿಸಿ ಬಿತ್ತು. ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಸೋತು ಹೋಗಿದ್ದರಿಂದ ಹಾಕಿದ ಬಂಡವಾಳವೂ ವಾಪಾಸ್ಸಾಗದೆ ನಿರ್ಮಾಪಕರು ಕೈ ಸುಟ್ಟುಕೊಂಡರು. ಇಷ್ಟೆಲ್ಲಾ ಆದರೂ ನಿರ್ದೇಶಕ ತೇಜಾ ಬೋಲ್ಡ್ ನಿರ್ಧಾರವೊಂದನ್ನು ತೆಗೆದುಕೊಂಡು ತಮ್ಮ ಮುಂದಿನ ಚಿತ್ರಕ್ಕೆ ಸೀತಾ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಹಿರೋ ಟಚ್ ಇಲ್ಲದ ಈ ಸೀತಾ ಚಿತ್ರದಲ್ಲಿ ಕಾಜಲ್ ಅಗರ್ ವಾಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಇದೀಗ ಸಿನಿಯರ್ ಬೆಲ್ಲಂಕೊಂಡ ಅವರ ಚಿಂತೆಗೆ ಕಾರಣವಾಗಿದೆಯಂತೆ.

ಸದ್ಯಕ್ಕೆ ಇಂಡಸ್ಟ್ರೀಯಲ್ಲಿ ಹಿರೋ   ಓರಿಯೆಂಟೆಡ್ ಚಿತ್ರಕ್ಕೆ ಹೆಚ್ಚಿನ ಬೇಡಿಕೆ. ಈ ನಡುವೆ ಮಗ ಹಿರೋಯಿನ್ ಕ್ಯಾರೆಕ್ಟರ್ ಮೇಲೆ ಚಿತ್ರದ ಟೈಟಲ್ ಫಿಕ್ಸ್ ಮಾಡಿರುವುದು ಅವರಿಗೆ ಇಷ್ಟವಾಗಿಲ್ಲವಂತೆ. ಹಿರೋಯಿನ್ ಮಾಸ್ ಚಿತ್ರವನ್ನು ಅವರು ನಿರೀಕ್ಷೆ ಮಾಡುತ್ತಿದ್ದು, ಮೃದುವಾದ ಟೈಟಲ್ ವರ್ಕೌಟ್ ಆಗೋದಿಲ್ಲ ಎಂಬುದು ಅವರ ನಂಬಿಕೆಯಂತೆ. ಹೀಗಾಗಿ  ಬೆಲ್ಲಂಕೊಂಡ ಹಾಗೂ ತೇಜಾ ನಡುವೆ ಇದೀಗ ಚರ್ಚೆ ಆರಂಭವಾಗಿದ್ದು ಚಿತ್ರದ ಟೈಟಲ್ ವಿಚಾರದ ಕುರಿತಂತೆ ಇಬ್ಬರು ಗಟ್ಟಿಯಾದ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ.

#kajalaggarwal #bellamkondasrinivas #tollywood #kajalaggarwalandbellamkondasrinivas #balkaninews

Tags