ಸುದ್ದಿಗಳು

‘ಬೆಲ್ ಬಾಟಂ’ ಆಡಿಯೋ ಟ್ರೈಲರ್ ಬಿಡುಗಡೆ!!

ಬೆಂಗಳೂರು,ಫೆ.9:

ಇದೇ ಮೊದಲ ಬಾರಿ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಆಡಿಯೋ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.. ನಿರ್ದೇಶನದಿಂದ ಕೊಂಚ ಬ್ರೇಕ್ ತೆಗೆದುಕೊಂಡ ರಿಷಭ್ ಶೆಟ್ಟಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕನಾಗಿ ಅಭಿನಯಿಸಿದ್ದಾರೆ..

ಆಡಿಯೋ ಟ್ರೈಲರ್

ಸ್ಕ್ರೀನ್‌ನಲ್ಲಿ ಚಿತ್ರಗಳು ಹಾದು ಹೋದಂತೆ ಹಿನ್ನಲೆ ಧ್ವನಿ ಕೂಡ ಕೇಳಿ ಬರುತ್ತದೆ.. ಇನ್ನು ಡಿಟೆಕ್ಟಿವ್ ದಿವಾಕರ್ ಅಂದ್ರೆ ರಿಶಬ್‌ ಶೆಟ್ಟಿ, ಅಚ್ಯುತ್‌ಕುಮಾರ್, ಯೋಗರಾಜ್‌ ಭಟ್ , ಹರಿಪ್ರಿಯಾ ಅವರ ಧ್ವನಿ ಎಲ್ಲವೂ ಚೆನ್ನಾಗಿ ಮೂಡಿ ಬಂದಿದೆ … ಬೆಲ್​ ಬಾಟಂ ಚಿತ್ರದಲ್ಲಿ ಪ್ರಮೋದ್​ ಶೆಟ್ಟಿ ಇನ್ಸ್​ಪೆಕ್ಟರ್​ ಸಹದೇವ ಉರುಫ್​ ಬೆಟ್ಟದ ಹುಲಿಯಾಗಿ ನಟಿಸಿದ್ದಾರೆ..

ಫೆ.15ರಂದು ರಾಜ್ಯಾದ್ಯಂತ ಬಿಡುಗಡೆ

ಇನ್ನು ಈಗಾಗಲೇ ವಿಭಿನ್ನ ಪೋಸ್ಟರ್​, ಹಳೆ ಕಾಲದ ಜಾಹೀರಾತಿನಲ್ಲಿ ಚಿತ್ರದ ಪ್ರಚಾರವನ್ನು ಮಾಡುತ್ತಾ ಬಂದಿದ್ದಾರೆ..  ಜಯತೀರ್ಥ ನಿರ್ದೇಶನದ ಬೆಲ್​ ಬಾಟಂ ಸಿನಿಮಾ ಇದೇ ಫೆ.15ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ..

ದಿವಾಕರನ ಪ್ರೇಮ ನಿವೇದನೆಯಲ್ಲಿ ಮಿಂದೆದ್ದ ಕುಸುಮಾ

#balkaninews #rishabshetty #bellbottom #haripriya

Tags

Related Articles