ಸುದ್ದಿಗಳು

‘ಬೆಲ್ ಬಾಟಂ’ ಚಿತ್ರಕ್ಕೆ 90 % ರೇಟಿಂಗ್: ಈ ಬಗ್ಗೆ ಟ್ವೀಟ್ ಮಾಡಿದ ಬುಕ್ ಮೈ ಶೋ

ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಸಿನಿಮಾ

ಬೆಂಗಳೂರು.ಫೆ.20

ಜಯತೀರ್ಥ ನಿರ್ದೇಶನ ಮಾಡಿರುವ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೇ ಸಿಗುತ್ತಿದೆ. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಫ್ಯಾಮಿಲಿ ಪ್ರೇಕ್ಷಕರು ಸಹ ಎರೆಡೆರೆಡು ಬಾರಿ ಚಿತ್ರಮಂದಿರಗಳಿಗೆ ಆಗಮಿಸಿ ನೋಡುತ್ತಿದ್ದಾರೆ. ಹಾಗೆಯೇ ಚಿತ್ರಕ್ಕೆ ಮಾಧ್ಯಮದವರಿಂದಲೂ ಒಳ್ಳೆಯ ವಿಮರ್ಶೆ ಸಿಗುತ್ತಿದೆ.

90% ರೇಟಿಂಗ್

‘ಬೆಲ್ ಬಾಟಂ’.. ಚಿತ್ರವು ಕುತೂಹಲಕಾರಿ ಕಥೆ, ಮಾತಿನ ಮಧ್ಯೆ ಕಚಗುಳಿ ಇಡುವ ಸಂಭಾಷಣೆ, 80 ರ ದಶಕದ ಬ್ಯಾಕ್ ಡ್ರಾಪ್, ಪದೇ ಪದೇ ಕೇಳಬೇಕೆನ್ನಿಸುವ ಗೀತೆಗಳು, ತೆರೆ ಮೇಲೆ ಇರುವಷ್ಟು ನೋಡಲೇಬೇಕು ಎನ್ನುವ ಹರಿಪ್ರಿಯಾ ನಟನೆ, ಸೇರಿದಂತೆ ಎಲ್ಲಾ ಅಂಶಗಳು ಚಿತ್ರವನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತಿದೆ.

ಕೆಲವು ದಿನಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಪತ್ತೆದಾರಿ ಚಿತ್ರವೊಂದು ರಿಲೀಸ್ ಆಗಿದ್ದು, ಕನ್ನಡದ ಪ್ರೇಕ್ಷಕರು ಚಿತ್ರವನ್ನು ಅಪ್ಪಿಕೊಂಡಿದ್ದಾರೆ. ಸಿನಿಮಾ ನೋಡಿದವರು ಬುಕ್ ಮೈ ಶೋ ಆ್ಯಪ್ ನಲ್ಲಿ ಶೇಕಡಾ 90 ರಷ್ಟು ಚಿತ್ರವನ್ನು ಮೆಚ್ಚಿ ರೇಟಿಂಗ್ ಕೊಟ್ಟಿದ್ದಾರೆ. ಈ ಕನ್ನಡ ಚಿತ್ರಕ್ಕೆ 5 ಸಾವಿರಕ್ಕೂ ಹೆಚ್ಚು ಜನ ಮೆಚ್ಚಿ ವಿಮರ್ಶೆ ಬರೆದಿರುವುದನ್ನು ನೋಡಿ, ಸ್ವತಃ ಬುಕ್ ಮೈ ಶೋ ದಾಖಲೆ ಸಮೇತ ಹೆಮ್ಮೆಯಿಂದ ಟ್ವಿಟ್ ಮಾಡಿದೆ.

ಪಾತ್ರಧಾರಿಗಳು

ಇನ್ನು ಈ ಚಿತ್ರದ ಪಾತ್ರಧಾರಿಗಳಾದ ದಿಟೆಕ್ಟರ್ ದಿವಾಕರ್, ಸ್ಟೇಷನ್ ರೈಟರ್ ಅಣ್ಣಪ್ಪ, ಕಳ್ಳಬಡ್ಡಿ ಕುಸುಮಾ, ಸಗಣಿ ಪಿಂಟೋ, ಕಾನ್ಸ್ ಟೇಬಲ್ ಕುರೇಶಿ, ಮರ ಕುಟಕ, ಮೋಡಿ ನಂಜಪ್ಪ, ರೇಡಿಯೋ ರಾಜಾ, ಸ್ಟುಡಿಯೋ ಗುರುಪಾದ, ಟಾಕೀಸ್ ಸೇಟು, ಗೂಬೆ ರಾಮು ಸೇರಿದಂತೆ ಅನೇಕ ಪಾತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡುತ್ತಿವೆ.

ವಜ್ರೇಶ್ವರಿ ಕಂಬೈನ್ಸ್ ನಲ್ಲಿ ‘ಮರಳಿ ಬಂದಳು ಸೀತೆ ‘ ಧಾರಾವಾಹಿ

#bellbottom #balkaninews #rishabashetty, #haripriya, #kannadasuddigalu, #jayathirtha, #bookmyshow

Tags

Related Articles