ಸುದ್ದಿಗಳು

ನಾಳೆಯಿಂದ ವಿದೇಶಗಳಲ್ಲಿ ‘ಬೆಲ್ ಬಾಟಂ’ ರಿಲೀಸ್

ಪ್ರೇಕ್ಷಕರು ಮತ್ತು ಮಾಧ್ಯಮದವರಿಂದ ಪ್ರಶಂಸೆ ಪಡೆದ ಸಿನಿಮಾ

ಬೆಂಗಳೂರು.ಫೆ.21: ಜಯತೀರ್ಥ ನಿರ್ದೇಶನ ಮಾಡಿರುವ ‘ಬೆಲ್ ಬಾಟಂ’ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೇ ಸಿಗುತ್ತಿದೆ. ಸದ್ಯ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವನ್ನು ಫ್ಯಾಮಿಲಿ ಪ್ರೇಕ್ಷಕರು ಸಹ ಎರೆಡೆರೆಡು ಬಾರಿ ಚಿತ್ರಮಂದಿರಗಳಿಗೆ ಆಗಮಿಸಿ ನೋಡುತ್ತಿದ್ದಾರೆ. ಹಾಗೆಯೇ ಚಿತ್ರಕ್ಕೆ ಮಾಧ್ಯಮದವರಿಂದಲೂ ಒಳ್ಳೆಯ ವಿಮರ್ಶೆ ಸಿಗುತ್ತಿದೆ.

ವಿದೇಶಗಳಲ್ಲಿಯೂ ರಿಲೀಸ್

‘ಬೆಲ್ ಬಾಟಂ’.. ಚಿತ್ರವು ಕುತೂಹಲಕಾರಿ ಕಥೆ, ಮಾತಿನ ಮಧ್ಯೆ ಕಚಗುಳಿ ಇಡುವ ಸಂಭಾಷಣೆ, 80 ರ ದಶಕದ ಬ್ಯಾಕ್ ಡ್ರಾಪ್, ಪದೇ ಪದೇ ಕೇಳಬೇಕೆನ್ನಿಸುವ ಗೀತೆಗಳು, ತೆರೆ ಮೇಲೆ ಇರುವಷ್ಟು ನೋಡಲೇಬೇಕು ಎನ್ನುವ ಹರಿಪ್ರಿಯಾ ನಟನೆ, ಸೇರಿದಂತೆ ಎಲ್ಲಾ ಅಂಶಗಳು ಚಿತ್ರವನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತಿದೆ.

ಸದ್ಯ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಈ ಚಿತ್ರವು ನಾಳೆಯಿಂದ ಅಮೆರಿಕಾ, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾ, ಸೇರಿದಂತೆ, ಬಹುತೇಕ ವಿದೇಶಗಳಲ್ಲಿ ತೆರೆ ಕಾಣುತ್ತಿದೆ. ಈ ಮೂಲಕ ಅಲ್ಲಿನ ಪ್ರೇಕ್ಷಕರನ್ನು ತಲುಪುತ್ತಿದೆ.
‘ಕಿರಿಕ್ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಚಿತ್ರದ ಮೂಲಕ ವಿದೇಶದಲ್ಲೂ ಅಪಾರ ಅಭಿಮಾನಿಗಳನ್ನು ಹೊಂದಿರುವ ರಿಷಬ್ಶೆಟ್ಟಿಯನ್ನು ಹೀರೋ ಆಗಿ ನೋಡಲು ವಿದೇಶಿದಲ್ಲಿರೋ ಕನ್ನಡಿಗರು ಸಹ ಕಾತರದಿಂದ ಕಾಯುತ್ತಿದ್ದಾರೆ. ಅಮೆರಿಕಾದಲ್ಲಿನ ಸುಮಾರು 30ಕ್ಕೂ ಹೆಚ್ಚು ಸೆಂಟರ್ಗಳಲ್ಲಿ ಚಿತ್ರ ತೆರೆ ಕಾಣಲಿದೆ.

ಇನ್ನು ಈ ಚಿತ್ರದ ಪಾತ್ರಧಾರಿಗಳಾದ ದಿಟೆಕ್ಟರ್ ದಿವಾಕರ್, ಸ್ಟೇಷನ್ ರೈಟರ್ ಅಣ್ಣಪ್ಪ, ಕಳ್ಳಬಡ್ಡಿ ಕುಸುಮಾ, ಸಗಣಿ ಪಿಂಟೋ, ಕಾನ್ಸ್ ಟೇಬಲ್ ಕುರೇಶಿ, ಮರ ಕುಟಕ, ಮೋಡಿ ನಂಜಪ್ಪ, ರೇಡಿಯೋ ರಾಜಾ, ಸ್ಟುಡಿಯೋ ಗುರುಪಾದ, ಟಾಕೀಸ್ ಸೇಟು, ಗೂಬೆ ರಾಮು ಸೇರಿದಂತೆ ಅನೇಕ ಪಾತ್ರಗಳು ಪ್ರೇಕ್ಷಕರನ್ನು ಮೋಡಿ ಮಾಡುತ್ತಿವೆ.

ಕಳೆದ ವಾರ ರಿಲೀಸ್ ಆಗಿದ್ದ ಈ ಸಿನಿಮಾ ಈ ವಾರದಿಂದ ರಾಜ್ಯದಲ್ಲೂ ಚಿತ್ರಮಂದಿರಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದು, ಮಲ್ಟಿಪ್ಲೆಕ್ಸ್ ಗಳಲ್ಲಿನ ಶೋಗಳ ಸಂಖ್ಯೆಯೂ ಅಧಿಕವಾಗುತ್ತಿದೆ.

‘ಅಗ್ನಿಸಾಕ್ಷಿ’ ಧಾರಾವಾಹಿ ಖ್ಯಾತಿಯ ಅಖಿಲ್ ವಿರುದ್ಧ ವರದಕ್ಷಿಣೆ ಆರೋಪ…!!!

#bellbottom, #balkaninews #rishabshetty, #haripriya, #jayathietha, #kannadasuddigalu, #filmnews

Tags