ಸುದ್ದಿಗಳು

ಶ್ರೀ ಮುರುಳಿ ಹೊಸ ಚಿತ್ರಕ್ಕೆ “ಭರಾಟೆ” ಫಿಕ್ಸ್ ಆಗಿದ್ದು ಹೇಗೆ..?

ನಟ ಶ್ರೀ ಮುರುಳಿ ಹಾಗೂ ನಿರ್ದೇಶಕ ಚೇತನ್ ಕುಮಾರ್ ಕಾಂಭಿನೇಷನ್ ನಲ್ಲಿ ಮೂಡಿ ಬರುವುದಕ್ಕೆ ತಯಾರಾಗಿರುವ ನೂತನ ಚಿತ್ರಕ್ಕೆ ಆಗ ಇನ್ನೂ ಟೈಟಲ್ ಫಿಕ್ಸ್ ಆಗಿರಲಿಲ್ಲ. ಆಗ ಶ್ರೀ ಮುರುಳಿಯವರು ತಮ್ಮ ಫೇಸ್ ಬುಕ್ ಪೇಜ್ ನಲ್ಲೊಂದು ಚಿತ್ರದ ಕುರಿತಾಗಿ “ಜೋರು ಎಂಬ ಪದಕ್ಕೆ ಪರ್ಯಾಯ ಪದ ಹೇಳಿ, ಅದೇ ನನ್ನ ಮುಂದಿನ ಚಿತ್ರದ ಶೀರ್ಷಿಕೆ’ ಎಂದು ಫೊಸ್ಟ್ ಮಾಡಿದ್ದರು.

ಅವರ ಅಭಿಮಾನಿ ವರ್ಗದಲ್ಲಿ ಅವರ ಈ ಮಾತು ಕುತೂಹಲಕ್ಕೆ ಕಾರಣವಾಗಿತ್ತು. ಹಲವರು ಏನೇನೋ ಪದಗಳನ್ನು ಹುಡುಗಿ ಊಹೆಯನ್ನೂ ಮಾಡಿದ್ದರು. ಕೊನೆಗೆ ರಭಸ ಎಂಬ ಟೈಟಲ್ ಫಿಕ್ಸ್ ಆಗಿದೆ ಎಂದು ಅನೇಕ ಕಡೆಗಳಲ್ಲಿ ಕೇಳಿ ಬಂದಿತ್ತು. ಆದರೆ ಈ ಬಗ್ಗೆ ಮತ್ತೊಮ್ಮೆ ಸ್ವತಃ ಶ್ರೀ ಮುರುಳಿಯವರೇ ತಮ್ಮ ಚಿತ್ರದ ಶೀರ್ಷಿಕೆ “ಭರಾಟೆ” ಎಂಬುದಾಗಿ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದರು.

ಜೋರು, ರಭಸ, ವೇಗ, ಸುಂಟರಗಾಳಿ, ಹೀಗೆ ಒಟ್ಟು 43 ಟೈಟಲ್ ಗಳಲ್ಲಿ ಶ್ರೀ ಮುರುಳಿಯವರ ಚಿತ್ರಕ್ಕೆ ಭರಾಟೆ ಎಂಬುದಾಗಿ ಪಿಕ್ಸ್ ಮಾಡಿದೆ ಚಿತ್ರತಂಡ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಚಿತ್ರವೆಂದು ಚಿತ್ರತಂಡ ಈಗಾಗಲೇ ಹೇಳಿಕೊಂಡಿದೆ.

ಶ್ರೀಮುರಳಿ ಅವರಿಗೆ ಪಕ್ಕಾ ಮಾಸ್ ಅಭಿಮಾನಿಗಳಿದ್ದಾರೆ. ನಾನು ನನ್ನ ಹಿಂದಿನ ಎರಡೂ ಸಿನಿಮಾಗಳಲ್ಲಿ ಫ್ಯಾಮಿಲಿ ಎಮೊಶನ್ಸ್ ಇದ್ದವು. ಭರಾಟೆಯಲ್ಲಿ ಈ ಎರಡೂ ಬ್ಲೆಂಡ್ ಆಗಿರುತ್ತವೆ. ಎರಡೂ ವರ್ಗದ ಪ್ರೇಕ್ಷಕರಿಗೆ ತಲುಪುವಂಥ ಸಿನಿಮಾ ಇದು’ ಎನ್ನುತ್ತಾರೆ ನಿರ್ದೇಶಕ ಚೇತನ್.

ಚೇತನ್ ಕುಮಾರ್ ಅವರು ಈ ಹಿಂದೆ ಬಹದ್ದೂರ್, ಭರ್ಜರಿ ಚಿತ್ರಗಳ ನಂತರ ಮತ್ತೊಮ್ಮೆ ಬ ಹೆಸರಿನಿಂದ ಸಿನಿಮಾ ತಯಾರಿಸಲು ಮುಂದಾಗಿದ್ದಾರೆ. ಹೀಗಾಗಿ ಭರಾಟೆ ಯ ಮೇಲೆ ನಿರೀಕ್ಷೆಯ ಗೋಪುರ ನಿರ್ಮಾಣವಾಗಲು ಕಾರಣವಾಗಿದೆ.

Tags