ಸುದ್ದಿಗಳು

ಶ್ರೀ ಮುರುಳಿ ‘ಭರಾಟೆ’

ಉಗ್ರಂ, ‘ರಥಾವರ’, ‘ಮಫ್ತಿ’ ಚಿತ್ರಗಳ ಸಕ್ಸಸ್ ನಂತರ ನಟ ಶ್ರೀ ಮುರಳಿ ಯಾವ ಸಿನಿಮಾದಲ್ಲಿ ಅಭಿನಯ ಮಾಡುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ಮನೆ ಮಾಡಿತ್ತು. ಅದಕ್ಕೆ ತಕ್ಕಂತೆ ಬಹದ್ದೂರ್ ಚೇತನ್ ಹಾಗೂ ಶ್ರೀ ಮುರಳಿ ಕಾಂಬಿನೇಶನ್ ನಲ್ಲಿ ಚಿತ್ರ ಸೆಟ್ಟೇರಲಿದೆ ಎಂದು ರೋರಿಂಗ್ ಸ್ಟಾರ್ ಅನೌನ್ಸ್ ಮಾಡಿದ್ರು.

‘ಮಫ್ತಿ’ ಚಿತ್ರವು ಶತದಿನದ ಪ್ರದರ್ಶನ ಕಂಡಿದ್ದು ಈ ಚಿತ್ರದ ನಂತರ ಯಾವ ಚಿತ್ರ ಎಂದೂ ಕಾದಿದ್ದ ಅಭಿಮಾನಿಗಳಿಗೆ ಇದೀಗ ಸಿಹಿಸುದ್ದಿ ಸಿಕ್ಕಂತಾಗಿದೆ. ಇನ್ನು ಎರಡು ಚಿತ್ರಗಳಲ್ಲಿ ಮಾಸ್ ಕಥೆಯಿಂದ ಪ್ರೇಕ್ಷಕರ ಮನಗೆದ್ದಿದ್ದ ಮುರುಳಿ ಈ ಬಾರಿ ಕೌಟಂಭಿಕ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ವಿಶೇಷ. ಮತ್ತು ಚಿತ್ರಕ್ಕೆ ಭರಾಟೆ ಎಂದು ಹೆಸರಿಟ್ಟಿದ್ದು, ಗಮನ ಸೆಳೆದಿದೆ.

ಕೆಲ ದಿನಗಳ ಹಿಂದೆ ಮುರಳಿ ತಮ್ಮ ಹೊಸ ಚಿತ್ರಕ್ಕೆ ‘ಜೋರು’ ಪದದ ಪರ್ಯಾಯ ಪದವೊಂದು ಶೀರ್ಷಿಕೆಯಾಗಲಿದೆ ಎಂದು ಹಿಂಟ್ ಕೊಟ್ಟಿದ್ದರು. ಅದರ ಜೊತೆಗೆ ಜೋರುಗಿರುವ ಪರ್ಯಾಯ ಪದಗಳನ್ನೂ ಕೊಟ್ಟಿದ್ದರು. ಬಿರುಸು, ರಭಸ ಮುಂತಾದ ಪದಗಳನ್ನು ಕೊಟ್ಟಿದ್ದ ಮುರಳಿ, ಆ ಪೈಕಿ ಯಾವುದು ಚಿತ್ರದ ಶೀರ್ಷಿಕೆಯಾದರೆ ಸರಿ ಎಂದು ಕೇಳಿದ್ದರು. ಅದಕ್ಕೆ ರಭಸ, ಆರ್ಭಟ, ಅಬ್ಬರ ಹೀಗೆ ಹತ್ತಾರು ಶೀರ್ಷಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಜನರ ಅವರು ಕೊಟ್ಟ ಪದಗಳಲ್ಲಿ ಭರಾಟೆ ಎಂಬ ಪದಕ್ಕೆ ಹೆಚ್ಚು ಮತಗಳು ಬಿದ್ದಿರುವುದರಿಂದ, ಚಿತ್ರಕ್ಕೆ ಭರಾಟೆ ಎಂದು ಟೈಟಲ್ ಫಿಕ್ಸ್ ಆಗಿದೆ. ಹಾಗೂ ಈ ಹಿಂದೆ ಈ ಚಿತ್ರದ ಟೈಟಲ್ ‘ರಭಸ’ ಎಂದು ಸುದ್ದಿಯಾಗಿತ್ತು. ಆದರೆ, ಸದ್ಯ ‘ಭರಾಟೆ’ ಎನ್ನುವ ಟೈಟಲ್ ಫೈನಲ್ ಆಗಿದ್ದು, ಈ ವಿಷಯನ್ನು ನಟ ಮುರಳಿ ತಮ್ಮ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.

ಬಹದ್ದೂರ್ ಮತ್ತು ಭರ್ಜರಿ ಚಿತ್ರಗಳ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬಹುಬೇಡಿಕೆಯಲ್ಲಿರುವ ನಿರ್ದೇಶಕ ಚೇತನ್ ಕುಮಾರ್ ಅವರು ಈ ಚಿತ್ರದ ಮೂಲಕ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಶ್ರೀಮುರಳಿಯವರಿಗೆ ಜೋಡಿಯಾಗಿ ಕಿಸ್ ಚಿತ್ರದಲ್ಲಿ ಅಭಿನಯಿಸುತ್ತಿರುವ ಶ್ರೀಲೀಲಾ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ `ಪೊಗರು’ ಚಿತ್ರಕ್ಕೂ ಅವರೇ ನಾಯಕಿ ಎಂದು ಹೇಳಲಾಗುತ್ತಿದೆ. ಈ ಚಿತ್ರದ ಚಿತ್ರೀಕರಣ ಜುಲೈ 25ರಿಂದ ಆರಂಭವಾಗಲಿದೆ. ಬೆಂಗಳೂರು, ಮೈಸೂರು ಸುತ್ತಮುತ್ತ ಚಿತ್ರೀಕರಣವಾಗಲಿದೆ.

Tags

Related Articles

Leave a Reply

Your email address will not be published. Required fields are marked *