ಸುದ್ದಿಗಳು

‘ಭೈರವ ಗೀತ’ ಸಿನಿಮಾದ ಹಿರೋಯಿನ್ ಬಗ್ಗೆ ನಿಮಗೆಷ್ಟು ಗೊತ್ತು…?

'ಭೈರವ ಗೀತ' ಸಿನಿಮಾ ನಾಯಕ ನಟಿ ಇರಾ

ಬೆಂಗಳೂರು, ನ.08: ರಾಮ್ ಗೋಪಾಲ್ ವರ್ಮಾ ನಿರ್ಮಾಣದ, ಸಿದ್ದಾರ್ಥ್ ನಿರ್ದೇಶನದ ಚೊಚ್ಚಲ ಚಿತ್ರ ‘ಭೈರವ ಗೀತ’  ಟ್ರೇಲರ್ ರಿಲೀಸ್ ಆಗಿದ್ದು ಈಗಾಗಲೇ ಚಿತ್ರದ ಕುರಿತಂತೆ ಬಹಳಷ್ಟು ಕುತೂಹಲ ಮೂಡಿದೆ. ಈ ನಡುವೆ ‘ಭೈರವ ಗೀತ’ ಮೂಲಕ ಚಿತ್ರರಂಗ ಪ್ರವೇಶಿಸಿರುವ ನಟಿ ಇರಾ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ.

 ಬೋಲ್ಡ್ ದೃಶ್ಯಕ್ಕೂ ಸೈ ಎಂದ ಇರಾ

ನಟಿ ಇರಾ ಈಗಾಗಲೇ ಬೋಲ್ಡ್ ಪಾತ್ರಗಳ ಮೂಲಕ ಸುದ್ದಿಯಾಗಿದ್ದಾರೆ.  ‘ಭೈರವ ಗೀತ’ ಚಿತ್ರದ ಸಂದರ್ಭದಲ್ಲಿ ತಮಗಾದ ಅನುಭವ, ತಾವು ಆಯ್ಕೆಯಾದ ಬಗೆಯನ್ನು ಮಾಧ್ಯಮದೊಂದಿಗೆ ಹಂಚಿಕೊಂಡಿರುವ ಇರಾ,  ನಾನು ಮೂಲತಃ ಮುಂಬೈ ಹುಡುಗಿ ಎಂದಿದ್ದಾರೆ. ರಂಗಭೂಮಿ ಹಿನ್ನೆಲೆಯಿಂದ ಬಂದಿರುವ ಇರಾ, ಬಹಳಷ್ಟು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸಿನಿಮಾ ಅನುಭವ ಇದೇ ಮೊದಲು. ಇರಾ ಪ್ರತಿಭೆಗೆ ವೇದಿಕೆ ಒದಗಿಸಿದ್ದು ರಾಮ್ ಗೋಪಾಲ್ ವರ್ಮಾ. ನನಗೆ ಸಿಕ್ಕಾಪಟ್ಟೆ ಇಷ್ಟವಾಗುತ್ತಿದ್ದ ನಿರ್ದೇಶಕರೆಂದರೆ ಆರ್ ಜಿವಿ. ಅದೃಷ್ಟವಶಾತ್ ಅವರ ಚಿತ್ರದಲ್ಲೇ ನಾಯಕಿಯಾಗಿ ಆಯ್ಕೆಯಾಗಿದ್ದೇನೆ. ಸಿನಿಮಾದ ಆಡಿಷನ್ ವಿಚಾರ ತಿಳಿದು ಅಲ್ಲಿಗೆ ತೆರಳಿದ ನಾನು ಆಡಿಷನ್ ನೀಡಿದೆ. ನನ್ನ ನಟನೆ ಆರ್ ಜಿವಿಗೆ ಹಿಡಿಸಿತು. ಅವರ ಮೆಚ್ಚುಗೆ ನುಡಿ ನನ್ನಲ್ಲಿ ಹೊಸ ಉತ್ಸಾಹ ತುಂಬಿತು. ಕೊಂಚ ದಿನಗಳ ನಂತರ ನಾನು ನಾಯಕಿಯಾಗಿ ಆಯ್ಕೆಯಾಗಿರುವ ಬಗ್ಗೆ ನನಗೆ ಕರೆ ಬಂತು ಎಂದು ಸಿನಿಮಾದಲ್ಲಿ ತಾವು ಆಯ್ಕೆಯಾದ ಬಗೆಯನ್ನು ವಿವರಿಸುತ್ತಾರೆ ಇರಾ.‘ಭೈರವ ಗೀತ’ ಒಪ್ಪಿಕೊಂಡಿದ್ದು ಯಾಕೆ..?

ಅಂದಹಾಗೆ ಚಿತ್ರವನ್ನು ಒಪ್ಪಿಕೊಳ್ಳುವಾಗ ಇರಾಗೆ ಚಿತ್ರಕತೆ ಸಂಪೂರ್ಣ ತಿಳಿದಿರಲಿಲ್ಲವಂತೆ. ಕೇವಲ ಆರ್ ಜಿವಿ ಅವರ ಸಿನಿಮಾ ಎಂಬ ಕಾರಣಕ್ಕಾಗಿ ಚಿತ್ರಕತೆಯನ್ನು ಕೇಳದೆ ಸಿನಿಮಾಗೆ ಓಕೆ ಎಂದಿದ್ದರಂತೆ. ‘ಭೈರವ ಗೀತ’ ಚಿತ್ರದಲ್ಲಿ ಭೂಮಾಲೀಕನ ದಬ್ಬಾಳಿಕೆ, ಶೋಷಣೆ ಹಿಂಸೆಯನ್ನು ತೋರಿಸಲಾಗಿದ್ದು ಇದರ ನಡುವೆ ಅರಳುವ ಪ್ರೀತಿಯ ಕತೆಯೇ ‘ಭೈರವ ಗೀತ’ ಎಂದಿದ್ದಾರೆ ಇರಾ. ಚಿತ್ರದ ನಾಯಕ ಡಾಲಿ ಧನಂಜಯ್ ಅವರನ್ನು ಇರಾ ಭೇಟಿಯಾಗಿದ್ದೇ ಚಿತ್ರೀಕರಣದ ಮೊದಲ ದಿನವಂತೆ. ಧನಂಜಯ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಧನಂಜಯ್ ಗೆ ಸೆಟ್ ನಲ್ಲಿದ್ದಾಗ ಸಿನಿಮಾವೇ ಉಸಿರು ಎಂದಿದ್ದಾರೆ.

Tags