ಸುದ್ದಿಗಳು

‘ಭೈರವ ಗೀತಾ’ ಚಿತ್ರದ ಹೊಸ ಲುಕ್ ಗಳು

ನಾಳೆ ರಾಜ್ಯಾದ್ಯಂತ ತೆರೆಗೆ ಬರುತ್ತಿರುವ ಸಿನಿಮಾ

ಬೆಂಗಳೂರು, ಡಿ.6: ನಟ ಡಾಲಿ ‘ಟಗರು’ ಮೂಲಕ ಹೆಸರು ಪಡೆದು ಇದೀಗ ‘ಭೈರವ ಗೀತ’ ಸಿನಿಮಾದಲ್ಲಿ ರಾರಾಜಿಸಲು ರೆಡಿಯಾಗಿದ್ದಾರೆ. ನಾಳೆ (ಡಿಸೆಂಬರ್ 7) ರಂದು ಬಿಡುಗಡೆಯಾಗುತ್ತಿರುವ ಈ ಸಿನಿಮಾ ಸದ್ಯ ಟ್ರೇಲರ್ ಮೂಲಕವೇ ಬಾರೀ ಸದ್ದು ಮಾಡಿದೆ.

ಸಿನಿಮಾ ನಿರೀಕ್ಷೆ ಹೆಚ್ವಿಸಿದ ಟ್ರೈಲರ್

ನಟ ಧನಂಜಯ್ ‘ಭೈರವ ಗೀತಾ’ ಸಿನಿಮಾ ಮೂಲಕ ದೊಡ್ಡ ಮಟ್ಟದ ಹೆಸರು ಮಾಡುವುದಕ್ಕೆ ರೆಡಿಯಾಗಿರುವುದು ಗೊತ್ತಿರುವ ವಿಚಾರ. ಈಗಾಗಲೇ ಈ ಸಿನಿಮಾ ಸಾಕಷ್ಟು ವಿಚಾರಗಳಿಂದ ಸುದ್ದಿ ಮಾಡುತ್ತಿದೆ.

ಇನ್ನು ರಾಮ್ ಗೋಪಾಲ್ ವರ್ಮಾ ಸಿನಿಮಾಗಳು ಅಂದರೆ ಏನಾದರೂ ವೈಶಿಷ್ಟತೆಗಳು, ವಿಭಿನ್ನತೆ ಇದ್ದೇ ಇರುತ್ತವೆ. ಇದೀಗ ಈ ಸಿನಿಮಾವನ್ನು ನಿರ್ದೇಶನ ಮಾಡಿರುವುದು ಕೂಡ ಆರ್ ಜಿ ವಿ ಶಿಷ್ಯ ಸಿದ್ದಾರ್ಥ್. ಹಾಗಾಗಿ ಸಿನಿಮಾ ಮೇಲಿನ ನಿರೀಕ್ಷೆ ಈ ಕಾರಣದಿಂದಲೂ ಹೆಚ್ಚಾಗಿದೆ.

ಸಿನಿಮಾದ ಕಥೆ

ಈಗಾಗಲೇ ಟ್ರೇಲರ್ ನಿಂದಲೇ ಈ ಸಿನಿಮಾದ ಕಥೆಯ ಬಗ್ಗೆ ತಿಳಿಯಬಹುದು. ಜಾತಿಗಳ ನಡುವೆ ಹುಟ್ಟುವ ಪ್ರೀತಿ, ಹೊಡೆದಾಟಗಳ ನಡುವೆ ಹಾರಾಡುವ ಮನಸ್ಸುಗಳ ಕಥೆಯನ್ನಿಟ್ಟುಕೊಂಡು ಸಿನಿಮಾ ತಯಾರಿಸಲಾಗಿದೆ. ಈಗಾಗಲೇ ಪೋಸ್ಟರ್ ಗಳಿಂದಲೂ ಇದು ಗೊತ್ತಾಗಿದೆ.

Tags