ಸುದ್ದಿಗಳು

ಶಿವಣ್ಣ ಬರ್ತಡೇ ಗೆ ಬಂತು ‘ಭಜರಂಗಿ -2’ ಭರ್ಜರಿ ಪೋಸ್ಟರ್!!

ಇಂದು ಶಿವಣ್ಣನ 57ರ ಹುಟ್ಟುಹಬ್ಬದ ಸಂಭ್ರಮ.  ಲಂಡನ್ ಭುಜದ ಶಸ್ತ್ರ ಚಿಕಿತ್ಸೆಯಲ್ಲಿರುವ ಶಿವಣ್ಣ  ತಮ್ಮ ಹುಟ್ಟು ಹಬ್ಬವನ್ನು ಅಲ್ಲೇ ಸರಳವಾಗಿ ಆಚರಿಸಿಕೊಂಡಿದ್ದಾರೆ..

ಈಗ ಸೆಂಚುರಿ ಸ್ಟಾರ್ ಶಿವಣ್ಣ ಹಾಗೂ ಎ.ಹರ್ಷ ಕಾಂಬಿನೇಷನ್​​ ನ ಸಿನಿಮಾ ಭಜರಂಗಿ-2.  ಇಂದು ಹುಟ್ಟು ಹಬ್ಬದ ಸಂಭ್ರಮವಾಗಿ ಹೊಸ ಪೋಸ್ಟರ್ ಬಿಡುಗಡೆಯಾಗಿದೆ.. ಹೌದು, ವಜ್ರಕಾಯ, ಭಜರಂಗಿ ಸಿನಿಮಾ ಹಿಟ್ ಬಳಿಕ ಹ್ಯಾಟ್ರಿಕ್ ಚಿತ್ರವಾಗಿ ಭಜರಂಗಿ-2 ಸಿನಿಮಾ ಸೆಟ್ಟೇರಿದೆ.

ಶಿವಣ್ಣ ಲುಕ್ ಸಖತ್ ಆಗಿದ್ದು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.. ಸೂಟು ಬೂಟು ಧರಿಸಿ ಕೈಯಲ್ಲಿ ಕೋವಿ ಜೊತೆಗೆ ಚಾಕು, ಚೂರಿಗಳನ್ನು ಹಿಡಿದು ಭರ್ಜರಿಯಾಗಿ ಲುಕ್ ನೀಡಿದ್ದಾರೆ

ಇನ್ನು ಶಿವಣ್ಣ ಲಂಡನ್ ನಲ್ಲಿ ಟ್ರೀಟ್ ಮೆಂಟ್  ಪಡೆಯುತ್ತಿದ್ದು ಮಾಡಿನಾದ್ಯಾಂತ ಅಭಿಮಾನಿಗಳಯ ಅಭಿಮಾನಿಗಳು  ಶಿವಣ್ಣ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದಾರೆ.  ಅನ್ನದಾನ , ಸಿಹಿ ಹಂಚುವಿಕೆ ರಕ್ತದಾನ, ಹೀಗೆ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುವ ಮೂಲಕ ಶಿವಣ್ಣನ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ..

‘ಬಂದ ನೋಡು ಪೈಲ್ವಾನ್” ಥೀಮ್ ಸಾಂಗ್ ರಿಲೀಸ್ !!

#shivarajkumar #shivarajkumar #shivarajkumarmovies #bahajarangi2

Tags