ಸುದ್ದಿಗಳು

ಭಾನು-ಭೂಮಿಯ ರೊಮ್ಯಾಂಟಿಕ್ ಸಾಂಗ್

ಭಾನು ವೆಡ್ಸ್ ಭೂಮಿ.. ಈಗಾಗಲೇ ತನ್ನ ವಿಭಿನ್ನ ಪೋಸ್ಟರ್ ಮತ್ತು ಸಾಂಗ್ಸ್ ಗಳಿಂದ ಗಮನ ಸೆಳೆದಿರುವ ಸಿನಿಮಾ. ಸದ್ಯ ಚಿತ್ರದ ರೊಮ್ಯಾಂಟಿಕ್ ಹಾಡೊಂದು ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ನೋಡುಗರಿಂದ ಮೆಚ್ಚುಗೆ ಪಡೆಯುತ್ತಿದೆ.

ಹೆಸರಿಗೆ ತಕ್ಕಂತೆ ಇದೊಂದು ಪ್ರೇಮಮಯ ಕಥೆಯಾಗಿದ್ದು, ಈ ಹಾಡಿನಲ್ಲಿ ನಾಯಕ-ನಾಯಕಿಯ ಕೆಮೆಸ್ಟ್ರಿ ವರ್ಕೌಟ್ ಆಗಿದೆ. ಹಾಗೆಯೇ ಹಾಡಿನಲ್ಲಿ ಕಂಡು ಬರುವ ಲೊಕೇಶನ್ ಚಂದ ಕಾಣಿಸುತ್ತಿದೆ. ಗೌಸ್ ಪೀರ್ ಸಾಹಿತ್ಯ ರಚಿಸಿರುವ ಈ ಹಾಡಿಗೆ ಎ ಎಂ ನೀಲ್ ಸಂಗೀತ ನೀಡಿದ್ದಾರೆ.

“ನಮ್ಮ ಚಿತ್ರದ ಕಥೆಯು ಒಂದು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಹೆಣೆಯಲಾಗಿದೆ. ತುಂಬಾ ತಿರುವುಗಳಿಲ್ಲದಿದ್ದರೂ, ನೈಜತೆಯಿಂದ ಕೂಡಿದ ಕಥೆ ‘ಭಾನು ಮತ್ತು ಭೂಮಿ’ ಒಬ್ಬರನ್ನೊಬ್ಬರು ನೋಡುತ್ತಾ ಸನಿಹ ಸೇರಲೆಂದು ಹಪಹಪಿಸುತ್ತಿದ್ದರೂ ಸಾಧ್ಯವಾಗದೇ ತಮ್ಮಲ್ಲೇ ಇರುವ ಭಾವನೆಗಳನ್ನು ಹೇಗೆ ವ್ಯಕ್ತಪಡಿಸುತ್ತಾರೆಂಬುದೇ ವಿಷಯ” ಎಂದು ಚಿತ್ರತಂಡದವರು ಹೇಳುತ್ತಾರೆ.

ಚಿತ್ರದಲ್ಲಿ ಸೂರ್ಯಪ್ರಭ, ರಕ್ಷತಾ ಮಲ್ನಾಡ್. ಶೋಭರಾಜ್, ಗಿರೀಶ್, ಮೈಕೋ ಮಂಜು, ಸಿಲ್ವಾಮೂರ್ತಿ, ಹಂಸ, ಸೂರ್ಯಕಿರಣ್, ಪಲ್ಲವಿ ಶೆಟ್ಟಿ, ಹೆಚ್.ಎಂ.ಟಿ. ವಿಜಿ, ಪ್ರವೀಣ್, ಮಿಮಿಕ್ರಿ ರಾಜು, ರಂಗಾಯಣ ರಘು ಸೇರಿದಂತೆ ಅನೇಕರು ನಟಿಸಿದ್ದಾರೆ. ಉಳಿದಂತೆ ಚಿತ್ರಕ್ಕೆ ಗಣೇಶ್ ಹೆಗ್ಡೆ ಛಾಯಾಗ್ರಹಣ, ಶ್ರೀನಿವಾಸ್ ಪಿ ಬಾಬು ಸಂಕಲನವಿದೆ.

‘ಕುರುಕ್ಷೇತ್ರ’ದ ಎದುರಿಗೆ ಬಂದ ರಾಂಧವ..!!!

#bhanuwedsbhoomi #video #song #balkaninews #kannadafilm, #kannadamovie, #kannadanews, #kannadanewmovie, #kannadacine, #latestkannadamovie, #sandalwoodmovies

Tags