ಸುದ್ದಿಗಳು

ಮೈಸೂರಿನಲ್ಲಿ ಶ್ರೀ ಮುರುಳಿ- ಶ್ರೀ ಲೀಲಾ ಡ್ಯೂಯೆಟ್

ಭರದಿಂದ ಸಾಗುತ್ತಿದೆ ‘ಭರಾಟೆ’ ಚಿತ್ರೀಕರಣ

ಬೆಂಗಳೂರು.ಏ.16: ‘ಬಹದ್ದೂರ್’ ಹಾಗೂ ‘ಭರ್ಜರಿ’ ಚಿತ್ರಗಳ ನಂತರ ನಿರ್ದೇಶಕ ಚೇತನ್ ಕುಮಾರ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಭರಾಟೆ’ ಚಿತ್ರದ ಶೂಟಿಂಗ್ ಸದ್ಯ ಮೈಸೂರಿನಲ್ಲಿ ನಡೆಯುತ್ತದೆ.

ಈಗಾಗಲೇ ಈ ಚಿತ್ರದ ಶೂಟಿಂಗ್ ಅನ್ನು ಈ ಹಿಂದೆ ರಾಜಸ್ಥಾನ, ಹೈದರಾಬಾದ್ ಸೇರಿದಂತೆ ಬಹುತೇಕ ಕಡೆಗಳಲ್ಲಿ ಅದ್ಧೂರಿ ಸೆಟ್ ಹಾಕಿ ಮಾಡಲಾಗಿದ್ದು, ಇದೀಗ ಮೈಸೂರು ಭಾಗಕ್ಕೆ ಚಿತ್ರತಂಡ ವಾಪಸ್ ಆಗಿದೆ.

Image result for kannada film bharaate

 

ಹೌದು, ಇದೀಗ ಮೈಸೂರು ಭಾಗದಲ್ಲಿನ ಅದ್ಭುತ ಲೊಕೇಷನ್ ನಲ್ಲಿ ವಿಶೇಷ ಸೆಟ್ ಹಾಕುವ ಮೂಲಕ ನಾಯಕಿ ಶ್ರೀಲೀಲಾ ಹಾಗೂ ಶ್ರೀಮುರಳಿ ಜೋಡಿಯ ಕೆಲ ದೃಶ್ಯಗಳ ಶೂಟಿಂಗ್ ನಡೆಸಿದೆ. ಸದ್ಯ ಶ್ರೀಲೀಲಾ ಅವರ ಟಾಕಿ ಪೋಷನ್ ಕೂಡ ಕಂಪ್ಲೀಟ್ ಆಗಿದೆ.

Image result for kannada film bharaate

ಅಂದಹಾಗೆ ಚಿತ್ರದಲ್ಲಿ ಟಾಲಿವುಡ್ ಸ್ಟಾರ್ ಜಗಪತಿಬಾಬು ಸೇರಿದಂತೆ ತ್ರಿಮೂರ್ತಿಗಳಾದ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಶರ್ಮ ಸೇರಿದಂತೆ ತಾರಾ, ಸುಮನ್ ಹೀಗೆ ಬಹು ತಾರಾಬಳಗವೇ ಚಿತ್ರದಲ್ಲಿವೆ.

ಇನ್ನು ‘ಮಫ್ತಿ’ ಚಿತ್ರದ ನಂತರ ಶ್ರೀಮುರಳಿ ‘ಭರಾಟೆ’ ಮೂಲಕ ಅದ್ಧೂರಿ ಎಂಟ್ರಿ ಕೊಡಲು ಸಿದ್ಧರಾಗುತ್ತಿದ್ದಾರೆ. ಈಗಾಗಲೇ ಚಿತ್ರವು ಟೀಸರ್, ಫಸ್ಟ್ ಲುಕ್, ಕಾಸ್ಟ್ಯೂಮ್ ಮತ್ತು ಮೇಕಿಂಗ್ ಮೂಲಕ ಸಿನಿರಸಿಕರ ಗಮನ ಸೆಳೆದಿದ್ದು, ಚಿತ್ರದಲ್ಲಿ 10 ಜನ ಖಡಕ್ ಖಳನಟರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.

ಕಿರುತೆರೆಯಿಂದ ಜನಪ್ರಿಯತೆ ಗಳಿಸಿದೆ : ಭವಾನಿ ಸಿಂಗ್

#bharaate, #duetsong, at #mysore, #balkaninews #filmnews, #kannadasuddigalu, #dhruvasarja, #shreeleela

Tags