ಸುದ್ದಿಗಳು

ಜೋಧ್ ಪುರ್ ನಲ್ಲಿ ‘ಭರಾಟೆ’ಯ ‘ಭರ್ಜರಿ’ ಚಿತ್ರೀಕರಣ

‘ಮಫ್ತಿ’ ಚಿತ್ರದ ಯಶಸ್ಸಿನ ನಂತರ ಶ್ರೀಮುರುಳಿ ಅಭಿನಯದ ಚಿತ್ರ “ಭರಾಟೆ’

ತನ್ನ ವಿಭಿನ್ನ ಬಗೆಯ ಟೀಸರ್, ಪೋಟೋಶೂಟ್ ಗಳ ಮೂಲಕ ಗಮನ ಸೆಳೆದಿರುವ ‘ಭರ್ಜರಿ’ ಚೇತನ್ ಕುಮಾರ್ ನಿರ್ದೇಶನದ ಮೂರನೇ ಚಿತ್ರ “ಭರಾಟೆ’ ದಿನದಿಂದ ದಿನಕ್ಕೆ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ.

ಬೆಂಗಳೂರು, ಆ.24: ರೋರಿಂಗ್ ಸ್ಟಾರ್ ಶ್ರೀಮುರುಳಿ ಅಭಿನಯಿಸುತ್ತಿರುವ ‘ಭರಾಟೆ’ ಚಿತ್ರವು ದಿನದಿಂದ ದಿನಕ್ಕೆ ನಿರೀಕ್ಷೆಯನ್ನು ಹೆಚ್ಚಿಸುತ್ತಿದೆ. ಇದಕ್ಕೂ ಮುನ್ನ ಈ ಚಿತ್ರವು ತನ್ನ ವಿಭಿನ್ನ ಬಗೆಯ ಟೀಸರ್, ಪೋಟೋಶೂಟ್ ಗಳ ಮೂಲಕ ಗಮನ ಸೆಳೆದಿತ್ತು. ಇದೀಗ ಅದೇ ವೇಗದಲ್ಲಿ, ಚಿತ್ರತಂಡವು ರಾಜಸ್ಥಾನದ ಜೋಧ್ ಪುರ್ ದಲ್ಲಿ ಚಿತ್ರೀಕರಣ ಶುರು ಮಾಡಿದೆ.

ಪಕ್ಕಾ ಕೌಟುಂಭಿಕ ಚಿತ್ರ

ಶ್ರೀಮುರುಳಿಯವರ ಈ ಹಿಂದಿನ ಮೂರು ಚಿತ್ರಗಳನ್ನು ನೋಡಿದಾಗ, ಅವುಗಳೆಲ್ಲವೂ ಸಾಹಸ ಪ್ರಧಾನ ಕಥಾಹಂದರವನ್ನು ಒಳಗೊಂಡಿದ್ದವು. ಆದರೆ ಇದೀಗ ಕೌಟುಂಭಿಕ ಕಥಾಹಂದರದ ಚಿತ್ರವನ್ನು ಒಪ್ಪಿಕೊಂಡಿರುವ ಅವರು ಪಾತ್ರಕ್ಕಾಗಿ ತಮ್ಮ ಕೇಶರಾಶಿಯನ್ನೂ ಬದಲಿಸಿಕೊಂಡಿದ್ದಾರೆ.

ನಿನ್ನೆಯಿಂದ ಈ ಚಿತ್ರದ ಚಿತ್ರೀಕರಣವು ರಾಜಸ್ತಾನದ ಜೋದ್ ಪುರ್ ನಲ್ಲಿರುವ ಹಳೆಯ ಕಟ್ಟಡ ಮತ್ತು ದೇವಸ್ಥಾನದಲ್ಲಿ ಶುರುವಾಗಿದೆ. ಈ ಚಿತ್ರೀಕರಣದಲ್ಲಿ ಹಿರಿಯ ನಟಿ ತಾರಾ ಮತ್ತು ಸುಮನ್ ಕೂಡ ಭಾಗಿಯಾಗಿದ್ದಾರೆ.

ತಾರಾಬಳಗ

‘ಭರಾಟೆ’ ಚಿತ್ರದಲ್ಲಿ ನಾಯಕ ಶ್ರೀಮುರುಳಿಯವರಿಗೆ ನಾಯಕಿಯಾಗಿ ‘ಕಿಸ್’ ಶ‍್ರೀಲೀಲಾ ನಟಿಸುತ್ತಿದ್ದು, ಭುವನ್ ಗೌಡ ಛಾಯಾಗ್ರಹಣ, ಅರ್ಜುನ್ ಜನ್ಯಾ ಅವರ ಸಂಗೀತವಿರಲಿದೆ.

Tags

Related Articles