ಸುದ್ದಿಗಳು

‘ಭರಾಟೆ ಸೆಟ್ ಗೆ ಲಕ್ಷ ಲಕ್ಷ ಹಣ….!

ಚೇತನ್ ನಿರ್ದೇಶನದ, ಮುರುಳಿ ಅಭಿನಯದ 'ಭರಾಟೆ'

ಬೆಂಗಳೂರು, ಡಿ.04: ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ‘ಭರಾಟೆ’. ಈ ಸಿನಿಮಾ ಟೈಟಲ್ ನಿಂದಲೇ ಬಹಳಷ್ಟು ಹೆಸರು ಮಾಡಿದ ಈ ಸಿನಿಮಾ ನಂತರ ಪೋಸ್ಟರ್ ಗಳಿಂದಲೇ ಸುದ್ದಿ ಮಾಡಿತ್ತು. ಈಗಾಗಲೇ ರಾಜಸ್ಥಾನ್, ಮೇಲುಕೋಟೆ ಸೇರಿದಂತೆ ಹಲವಾರು ಕಡೆಗಳಲ್ಲಿ ಚಿತ್ರೀಕರಣ ನಡೆಸಿರುವ ಈ ಸಿನಿಮಾ ತಂಡ ಇದೀಗ ಮೂರನೇ ಹಂತದ ಚಿತ್ರೀಕರಣ ಮಾಡುತ್ತಿದೆ. ಇದೀಗ ಈ ಸಿನಿಮಾದ ಹೊಸ ವಿಚಾರವೊಂದು ಹೊರಬಂದಿದೆ‌.

ನಾಲ್ಕನೇ ಹಂತದ ಚಿತ್ರೀಕರಣದಲ್ಲಿ ಸೀಕ್ವೆನ್ಸ್ ಫೈಟ್

ಹೌದು, ಈ ಸಿನಿಮಾ ಚಿತ್ರೀಕರಣ ಪ್ರಾರಂಭವಾದಾಗಿನಿಂದಲೂ ಕೂಡ ಹೊಸ ಹೊಸ ವಿಚಾರಗಳು ಹೊರ ಬರುತ್ತಲೇ ಇವೆ. ಈ ಬಾರಿಯ ವಿಚಾರ ಅಂದರೆ ಅದ್ದೂರಿ ಸೆಟ್ ನಲ್ಲಿ ಚಿತ್ರೀಕರಣ. ಹೌದು, ನಾಲ್ಕನೇ ಹಂತದ ಚಿತ್ರೀಕರಣ ಇನ್ನೇನು ಪ್ರಾರಂಭವಾಗಬೇಕು. ಇನ್ನು ಈ ಹಂತದ ಚಿತ್ರೀಕರಣದಲ್ಲಿ ಮೂರು ಸೀಕ್ವೆನ್ಸ್ ಫೈಟ್ ಇರಲಿವೆ. ಇದಕ್ಕಾಗಿ ಸುಮಾರು 30 ಲಕ್ಷ ರೂಪಾಯಿ ವೆಚ್ಚದ ಸೆಟ್ ನಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆಯಂತೆ.ಮೂರನೇ ಹಂತದ ಚಿತ್ರೀಕರಣ ಮುಕ್ತಾಯ…?

ಇನ್ನು ಈಗಾಗಲೇ ಮೂರನೇ ಹಂತದ ಚಿತ್ರೀಕರಣ ಮುಗಿದಿದೆಯಂತೆ‌ ಸುಮಾರು 16 ದಿನಗಳ ಕಾಲ ಈ ಸಿನಿಮಾ ಫೈಟಿಂಗ್ ಸೀನ್ ನಡೆದಿದೆ. ಸುಮಾರು 70 ಜನ ಫೈಟರ್ ಗಳನ್ನು ಫೈಟ್ ಸೀನ್ ಗಾಗಿ ಬಳಸಿಕೊಳ್ಳಲಾಗಿದೆ. ಅಲ್ಲದೆ ಈ ಫೈಟ್ ಗೆ ಹಾಗೂ ಸೆಟ್ ಗೂ ಕೂಡ ಲಕ್ಷ ಲಕ್ಷ ಹಣ ವ್ಯಯಿಸಲಾಗಿದೆ‌. ಕಥೆಗೆ ತಕ್ಕುದಾದ ರೀತಿಯಲ್ಲಿ ಈ ಸಿನಿಮಾಗೆ ಸೆಟ್ ಹಾಕಿ ಬಳಸಿಕೊಳ್ಳಲಾಗಿದೆಯಂತೆ.

Tags

Related Articles