ಸುದ್ದಿಗಳು

ಭರ್ಜರಿಯಾಗಿದೆ ‘ಭರಾಟೆ’ ಚಿತ್ರದ ಮೋಷನ್ ಪೋಸ್ಟರ್

‘ಭರಾಟೆ’ ಚಿತ್ರವು ಈಗಾಗಲೇ ತನ್ನ ಮೊದಲ ನೋಟದಿಂದಲೇ ಭರ್ಜರಿ ಸುದ್ದಿಯಾಗಿತ್ತು. ನಿನ್ನೆಯಷ್ಟೇ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತು.

ಬೆಂಗಳೂರು, ಆ.16: ರೋರಿಂಗ್ ಸ್ಟಾರ್ ಶ್ರೀಮುರಳಿ ಹಾಗೂ ‘ಕಿಸ್’ ಶ್ರೀಲೀಲಾ ಅಭಿನಯಿಸುತ್ತಿರುವ ‘ಭರಾಟೆ’ ಚಿತ್ರವು ಚಿತ್ರೀಕರಣದ ಹಂತದಲ್ಲಿದೆ. ಈಗಾಗಲೇ ಚಿತ್ರವು ತನ್ನ ಮೊದಲ ನೋಟದಿಂದ ಸುದ್ದಿ ಮಾಡಿತ್ತು. ಇದೀಗ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ ಗಳಿಸುತ್ತಿದೆ.

ಶ್ರೀ ಮುರುಳಿತಾಕತ್ತು

ಮೋಷನ್ ಪೋಸ್ಟರ್ ನಲ್ಲಿ ಶ್ರೀ ಮುರುಳಿ ಹೇಳುವ ಸಂಭಾಷಣೆಗಳು ಖಡಕ್ ಆಗಿ ಮೂಡಿ ಬಂದಿವೆ. ‘ತಾಕತ್ ಇದ್ದವ್ನು ಕೋಟೆ ಕಟ್ತಾನೆ, ದೌವಲತ್ತು ಇದ್ದವ್ನು ಅದರ ಮೇಲೆ ಒಂದು ಬಾವುಟ ನೆಡ್ತಾನೆ, ಛಲ ಇರೋವ್ನು ಹೋರಾಡ್ತಾನೆ , ಬಲ ಇರೋವ್ನು ಎದುರಿಸ್ತಾನೆ, ಆದ್ರೆ ಜೀವನದಲ್ಲಿ ಈ ನಾಲ್ಕು ಇದ್ದವ್ನದೇ ಭರಾಟೆ’

ಭರ್ಜರಿ ಚೇತನ್

ಈಗಾಗಲೇ ಎರಡು ಚಿತ್ರಗಳ ಮೂಲಕ ಸಿನಿ ಪ್ರಿಯರಿಗೆ ಭರ್ಜರಿ ರಸದೌತಣ ನೀಡಿದ್ದ ನಿರ್ದೇಶಕ ‘ಬಹದ್ದೂರ್’ ಚೇತನ್ ಈ ಚಿತ್ರದ ಮೂಲಕ ಹ್ಯಾಟ್ರಿಕ್ ನಿರಿಕ್ಷೆಯಲ್ಲಿದ್ದು, ಈ ಬಾರಿಯೂ ‘ಭರ್ಜರಿ’ ಚಿತ್ರವನ್ನು ನೀಡುವ ಸೂಚನೆ ಕೊಟ್ಟಿದ್ದಾರೆ.

ಹೀಗೆ ಮೋಷನ್ ಪೋಸ್ಟರ್ ನಲ್ಲಿರುವ ಸಂಭಾಷಣೆಗಳು ದಂಗು ಬಡಿಸುತ್ತಿವೆ. ಮಾಸ್ ಪ್ರೇಕ್ಷರು ಆಗಲೇ ಶಿಳ್ಳೆ ಹೊಡೆಯುವಂತೆ ಮಾಡುತ್ತಿವೆ. ಈಗಾಗಲೇ ಈ ಚಿತ್ರತಂಡ ರಾಜಸ್ಥಾನದಲ್ಲಿ ಫೋಟೋ ಶೂಟ್ ಮಾಡಿಸಿದೆ. ‘ಭರ್ಜರಿ’ ಸಿನಿಮಾ ನಂತರ ಚೇತನ್ ಕುಮಾರ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ. ಸಿನಿಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದಾರೆ.

Tags