ಸುದ್ದಿಗಳು

ಭರ್ಜರಿಯಾಗಿದೆ ‘ಭರಾಟೆ’ ಟೀಸರ್ ಮೇಕಿಂಗ್ ವಿಡಿಯೋ…!!!

‘ಮಪ್ತಿ’ ಚಿತ್ರದ ನಂತರ ನಟ ಶ್ರೀ ಮುರುಳಿ ನಟಿಸುತ್ತಿರುವ ‘ಭರಾಟೆ’ ಚಿತ್ರವು ರಾಜಸ್ಥಾನದಲ್ಲಿ ಫೋಟೋಶೂಟ್ ಮಾಡಿಸಿದ ಮೊಟ್ಟ ಮೊದಲ ಕನ್ನಡದ ಸಿನಿಮಾ ಎಂದು ಸುದ್ದಿಯಾಗಿತ್ತು. ಈಗ ಆ ಪೋಟೋಶೂಟ್ ಗಳ ಮೇಕಿಂಗ್ ವಿಡಿಯೋದ ತುಣುಕು ಬಿಡುಗಡೆಯಾಗಿದೆ.

ಬೆಂಗಳೂರು, ಆ. 08: ಕೆಲವು ದಿನಗಳ ಹಿಂದೆಯಷ್ಟೇ ‘ಭರಾಟೆ’ ಚಿತ್ರವು ರಾಜಸ್ಥಾನದಲ್ಲಿ ಪೋಟೋಶೂಟ್ ಮಾಡುವ ಮೂಲಕ ಸುದ್ದಿಯಾಗಿತ್ತು. ಇದೀಗ ಮೇಕಿಂಗ್ ಪೋಟೋಶೂಟ್ ಗಳ ವಿಡಿಯೋವೊಂದು ಬಿಡುಗಡೆಯಾಗಿ ಸಾಮಾಜಿಕ ಜಾಲಜಾಣದಲ್ಲಿ ಸದ್ದು ಮಾಡುತ್ತಿದೆ.

ಭುವನ್ ಕ್ಯಾಮರಾ ಕೆಲಸ

ಭುವನ್ ಗೌಡ ಕ್ಯಾಮೆರಾದಲ್ಲಿ ಸೆರೆಯಾದ “ಭರಾಟೆ’ ಚಿತ್ರದ ಫೋಟೋಶೂಟ್ ತುಂಬಾ ವಿಭಿನ್ನವಾಗಿದ್ದವು. ಸಿನಿಮಾದಿಂದ ಸಿನಿಮಾಗೆ ಹೊಸತನ ನೀಡುವ ನಿರ್ದೇಶಕ ಚೇತನ್ ಹಾಗೂ ಶ್ರೀಮುರಳಿ, ಈ ಬಾರಿಯ ಫಸ್ಟ್ ಲುಕ್ ಮೂಲಕ ತುಂಬಾ ವಿಭಿನ್ನವಾಗಿ ಹೊರ ತರುವ ಉತ್ಸಾಹದಲ್ಲಿದ್ದಾರೆ ಎಂದು ಹೇಳಬಹುದು.

ಟೀಸರ್ ನ ಮೇಕಿಂಗ್ ವಿಡಿಯೋ

ಈಗ ಈ ಚಿತ್ರದ ಪೋಟೋಶೂಟ್ ಗಳ ಮೇಕಿಂಗ್ ವಿಡಿಯೋದ ತುಣುಕು ಬಿಡುಗಡೆಯಾಗಿದೆ. ‘ಮಫ್ತಿ’ ಚಿತ್ರದ ಮತ್ತೊಂದು ಹಿಟ್ ಬಳಿಕ ಮತ್ತೊಮ್ಮೆ ‘ಭರಾಟೆ’ ಮೂಲಕ ಅಬ್ಬರಿಸಲು ಶ್ರೀ ಮುರಳಿ ತಯಾರಾಗಿದ್ದಾರೆ. ಶೀಘ್ರದಲ್ಲೇ ಈ ಚಿತ್ರದ ಟೀಸರ್ ಬಿಡುಗಡೆಯಾಗಲಿದ್ದು, ನಿನ್ನೆಯಷ್ಟೇ ಇದರ ಮೇಕಿಂಗ್ ವಿಡಿಯೋ ರಿಲೀಸ್ ಆಗಿದೆ.

ಅಗಸ್ಟ್ 15 ಕ್ಕೆ ಮೋಷನ್ ಪೋಸ್ಟರ್

‘ಭರಾಟೆ’ ಚಿತ್ರದ ಮೋಶನ್ ಪೋಸ್ಟರ್ ಸ್ವಾತಂತ್ರ್ಯ ದಿನಾಚರಣೆ ಅಂದರೆ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ. ಚಿತ್ರದಲ್ಲಿ ನಾಯಕಿಯಾಗಿ ‘ಕಿಸ್’ ಖ್ಯಾತಿಯ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ‘ಭರ್ಜರಿ’, ‘ಬಹದ್ದೂರ್’ ಖ್ಯಾತಿಯ ಚೇತನ್ ಕುಮಾರ್ ಅವರ ನಿರ್ದೇಶನವಿದೆ.

 

@ sunil Javali

Tags