ಸುದ್ದಿಗಳು

ಅದ್ದೂರಿ ಸೆಟ್ ನಲ್ಲಿ ‘ಭರಾಟೆ’ ಕ್ಲೈಮ್ಯಾಕ್ಸ್

ಬಾರೀ ನಿರೀಕ್ಷೆ ಮೂಡಿಸಿರುವ ಸಿನಿಮಾ

ಬೆಂಗಳೂರು.ಮಾ.17: ‘ಭರಾಟೆ’ ಸಿನಿಮಾ ಕ್ಲೈಮಾಕ್ಸ್ ಸದ್ಯ ಬೆಂಗಳೂರಿನ ಹೊರವಲಯದಲ್ಲಿ ಅದ್ಧೂರಿ ಸೆಟ್ ನಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದು ನಿಂತಿದೆ.

ರಾಜಸ್ತಾನದಿಂದ ಪ್ರಾರಂಭವಾಗಿ ಇದೀಗ ಬೆಂಗಳೂರು ಹೊರಹೊಲಯದ ನೆಲಮಂಗಲ ಬಳಿ ಇರುವ ಮೈದಾನದ ವರೆಗೂ ಬಂದಿರುವ ‘ಭರಾಟೆ’ ಸಿನಿಮಾ ತಂಡ ಸದ್ಯ ಕ್ಲೈ ಮ್ಯಾಕ್ಸ್ ಹಂತ ತಲುಪಿದೆ. ವಿಭಿನ್ನ ಕಥಾ ಹಂದರ, ಬೇರೆ ಬೇರೆ ಪಾತ್ರಗಳು ಹೀಗೆ ಎಲ್ಲವನ್ನು ಒಟ್ಟುಗೂಡಿಸಿ ಒಂದು ದಾರದಲ್ಲಿ ಪೋಣಿಸಿದ ರೀತಿಯಲ್ಲಿ ಸಿನಿಮಾ ರೆಡಿಯಾಗಿದೆ. ಇದೀಗ ಅದ್ಧೂರಿ ಸೆಟ್ ನಲ್ಲಿ ಈ ಸಿನಿಮಾ ಕ್ಲೈ ಮ್ಯಾಕ್ಸ್ ಚಿತ್ರೀಕಣ ಮಾಡಲಾಗುತ್ತಿದೆ.

ಕ್ಲೈಮಾಕ್ಸ್ ಸೀನ್

ಹೌದು, ನೆಲಮಂಗಲದ ವಿಶಾಲವಾದ ಜಾಗದಲ್ಲಿ ವಾಡೆ ಮಾದರಿಯ ಸೆಟ್ ಹಾಕಲಾಗಿದೆ. ಇನ್ನು ಒಂದು ಮೂಲೆಯಲ್ಲಿ ವೀರಾಂಜನೇಯನ ವಿಗ್ರಹ ಇಡಲಾಗಿದೆ.. ಇನ್ನು ವಿಭಿನ್ನ ರೀತಿಯಲ್ಲಿ ಬರುವ ಖಳ ನಾಯಕರು, ಹಾಗೂ ಜೂನಿಯರ್ ಆರ್ಟಿಸ್ಟ್ ಗಳು.. ಹೀಗೆ ವಿಭಿನ್ನವಾಗಿ ಕ್ಲೈಮ್ಯಾಕ್ಸ್ ಚಿತ್ರೀಕರಣ ಮಾಡಲಾಗುತ್ತಿದೆ.

ಇನ್ನು ಧೂಳಿನಲ್ಲಿ ಡೈರೆಕ್ಟರ್ ಚೇತನ್ ಕುಮಾರ್ ಕಮಾಂಡ್ ನ ಫಾಲೋ ಮಾಡ್ತಿದ್ದ ಟೀಂ, ಜೀಪ್ ಏರಿ ಧೂಳೆಬ್ಬಿಸಿದ ರೋರಿಂಗ್ ಸ್ಟಾರ್. ಒಟ್ಟಾರೆ ಭರಾಟೆ ಶೂಟಿಂಗ್ ಭರಾಟೆ ಜೋರಾಗಿಯೇ ನಡಿಯುತ್ತಿದೆ.

ಶ್ರೀಮುರುಳಿಗೆ ದೊಡ್ಡ ಜಯ

ಇನ್ನು ಈ ‘ಭರಾಟೆ’ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕಾಗಿಯೇ ನಿರ್ಮಾಪಕ ಸುಪ್ರಿತ್ ಅದ್ದೂರಿ ಸೆಟ್ ಹಾಕಿಸಿಕೊಟ್ಟಿದ್ದಾರೆ. ಸುಮಾರು 75ಲಕ್ಷ ವೆಚ್ಚದಲ್ಲಿ ಕುಸ್ತಿ ವಾಡೆಯನ್ನು ಕಲಾನಿರ್ದೇಶಕ ಮೋಹನ್ ಬಿ ಕೆರೆ ಸೆಟ್ ನಿರ್ಮಾಣ ಮಾಡಿದ್ದಾರೆ. ಇನ್ನು ಈ ಸೆಟ್ ನೋಡುಗರನ್ನು ಸೆಳೆಯುವಂತಿದೆ.

ಚಿತ್ರದಲ್ಲಿ ಅವಿನಾಶ್, ಸಾಯಿಕುಮಾರ್, ರವಿಶಂಕರ್ ಜೊತೆಯಾಗಿ ಅಯ್ಯಪ್ಪ, ಮಂಜು, ದೀಪಕ್ ಶೆಟ್ಟಿ, ರಾಜ್ ಗುರು, ಮೋಹನ್ , ಶರತ್ ಲೋಹಿತಾಶ್ವ ಹೀಗೆ ಖಳ ದಿಗ್ಗಜರ ಜೊತೆ ಸೆಣಸಾಡಿದ್ದಾರೆ ನಟ ಮುರುಳಿ.

‘ರಗಡ್’ ಚಿತ್ರದ ಆಡಿಯೋ ಹಾಗೂ ಟ್ರೇಲರ್ ಲಾಂಚ್

#bharate, #movie, #climax, #balkaninews #srimuruli, #kannadasuddigalu

Tags