ಸುದ್ದಿಗಳು

‘ಭರತ-ಬಾಹುಬಲಿ’ಯಲ್ಲಿ ಡಾ. ರಾಜ್ ಕುಮಾರ್ ಬಳಸಿದ ಕಾರು…!!!

‘ಮಾಸ್ಟರ್ ಫೀಸ್’ ಮೂಲಕ ಗಮನ ಸೆಳೆದಿದ್ದ ಮಂಜು ಮಾಂಡವ್ಯ ನಾಯಕರಾಗಿ

ಬೆಂಗಳೂರು, ಸ.11: ವರನಟ ಡಾ. ರಾಜ್ ಕುಮಾರ್ ಅವರನ್ನು ಬಹಳ ಜನ ಆರಾಧಿಸುತ್ತಾರೆ. ಅವರ ಹೆಸರಿನಿಂದ ಅದೆಷ್ಟೋ ಚಿತ್ರಗಳು ಸಹ ಯಶಸ್ವಿಯಾಗಿವೆ. ಇಂದಿಗೂ ಅಣ್ಣಾವ್ರು ಕನ್ನಡಿಗರ ಮನೆ, ಮನದಲ್ಲಿ ನೆಲೆಸಿದ್ದಾರೆ. ಈಗಲೂ ಅವರ ಚಿತ್ರಗಳು ಮರು ಬಿಡುಗಡೆಯಾದರೆ ಭರ್ಜರಿ ಪ್ರದರ್ಶನವಾಗುತ್ತವೆ. ಇದೀಗ ಈ ಗಾನಗಂಧರ್ವರ ಬಗ್ಗೆ ಮಂಜು ಮಾಂಡವ್ಯ ತಮ್ಮ ಚಿತ್ರದಲ್ಲಿ ಪ್ರಸ್ತಾಪ ಮಾಡಲಿದ್ದಾರೆ.

ಅಣ್ಣಾವ್ರ ಕಾರು

ಯಶ್ ನಾಯಕತ್ವದಲ್ಲಿ ‘ಮಾಸ್ಟರ್ ಫೀಸ್’ ಎನ್ನುವ ಸೂಪರ್ ಹಿಟ್ ಚಿತ್ರವನ್ನು ಕೊಟ್ಟಿದ್ದ ಮಂಜು ಮಾಂಡವ್ಯ ತಮ್ಮ ಎರಡನೇ ಚಿತ್ರವಾದ ‘ಶ್ರೀ ಭರತ ಬಾಹುಬಲಿ’ ಯಲ್ಲಿ ತಾವೇ ನಾಯಕರಾಗಿ ನಟಿಸುತ್ತಿದ್ದಾರೆ. ಇನ್ನು ಚಿತ್ರದ ಮತ್ತೊಂದು ವೈಶಿಷ್ಟತೆಯೆಂದರೆ ಇಲ್ಲಿ ಅಣ್ಣಾವ್ರ ಬಗ್ಗೆ ಪ್ರಸ್ತಾಪ ವಾಗುತ್ತಂತೆ.

ವರನಟ ಡಾ.ರಾಜ್ ಗಿದ್ದ ಕ್ರೇಜ್ ಎಂಥದ್ದು ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗುತ್ತಿದ್ದ, ಅದಕ್ಕಾಗಿ 80ರ ದಶಕವನ್ನು ಮರುಸೃಷ್ಟಿಸುವುದನ್ನು ಚಿತ್ರತಂಡದ ಯೋಜನೆ ಹಾಕಿಕೊಂಡಿತ್ತು. ಅಲ್ಲದೇ ಹಳೆಯ ಕಾರು, ಹಳೆಯ ವಸ್ತುಗಳ ಹುಡುಕಾಟವೂ ನಡೆದಿತ್ತು. ಕಾಕತಾಳಿಯ ಎಂಬಂತೆ ಡಾ.ರಾಜ್ ದೃಶ್ಯಕ್ಕೆ, ಅಣ್ಣಾವ್ರು ಬಳಸಿದ ಕಾರನ್ನೇ ಬಳಸಿಕೊಳ್ಳಲಾಗಿದೆ.

ಮನರಂಜನಾತ್ಮಕ ಚಿತ್ರ

ಇದೊಂದು ಗ್ರಾಮೀಣ ಸೊಗಡಿನ ಸುತ್ತಲೂ ನಡೆಯುವ ಕಥೆಯನ್ನು ಒಳಗೊಂಡಿದ್ದು, ಈ ಚಿತ್ರದಲ್ಲಿ ಡಾ.ರಾಜ್ ಕುರಿತಂತೆ 80ರ ದಶಕವನ್ನು ನೆನಪಿಸುವ ದೃಶ್ಯಗಳು ಬರುತ್ತವೆ. ಹೀಗಾಗಿ ಹಳೆಯ ಪರಿಕರ- ವಸ್ತುಗಳನ್ನು ಬಳಸಿಕೊಂಡು, ಚಿತ್ರೀಕರಣ ಮಾಡಲಾಗಿದೆ.

ಚಿತ್ರದ ಬಗ್ಗೆ

ಚಿತ್ರದಲ್ಲಿ’ ಬಾಹುಬಲಿ’ಯಾಗಿ ಚಿಕ್ಕಣ್ಣ ಭರತನಾಗಿ ಮಂಜು ಮಾಂಡವ್ಯ ನಟಿಸುತ್ತಿದ್ದು, ಈಗಾಗಲೇ ಈ ಚಿತ್ರವು ಒಂದು ಮಟ್ಟದಲ್ಲಿ ಕುತೂಹಲ ಮೂಡಿಸಿದೆ. ತ್ಯಾಗವೇ ಈ ಚಿತ್ರದ ಕಥೆಗೆ ಜೀವಾಳವಾಗಿದ್ದು, ಮನರಂಜನೆಯೇ ಚಿತ್ರಕಥೆಯ ಬಂಡವಾಳವಾಗಿದೆ.

ಈಗಿನ ಯುವ ಮನಸ್ಥಿತಿಗಳು ತ್ಯಾಗ ಅಂತ ಬಂದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ. ಯುವಜನರಲ್ಲಿ ತ್ಯಾಗ, ಹೊಂದಾಣಿಕೆ ಎಷ್ಟರ ಮಟ್ಟಿಗೆ ಇದೆ ಎನ್ನುವುದು ಈ ಚಿತ್ರದ ಕಥೆಯ ಸಾರಂಶವಾಗಿದೆ.ಚಿತ್ರಕ್ಕೆ ಫರ್ವೇಜ್ ಛಾಯಾಗ್ರಹಣ, ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ಸ್ ಸಿನಿಮಾಗೆ ಬಂಡವಾಳ ಹೂಡಿದೆ.

Tags

Related Articles