ಸುದ್ದಿಗಳು

‘ಭೀಷ್ಮ’ ನ ಪೂಜಾ ಮುಹೂರ್ತ ಆಚರಿಸಿಕೊಂಡ ಚಿತ್ರತಂಡ!!

ತೆಲುಗಿನ ‘ಚಲೋ ಚಿತ್ರದ ಬಳಿಕ ವೆಂಕಿ ಕುಡುಮುಲ ನಿರ್ದೇಶನಲ್ಲಿ ‘ಭೀಷ್ಮ ಹೊಸ ಚಿತ್ರ ಸೆಟ್ಟೇರಿದೆ. ಇದರ ಮುಹೂರ್ತ ಇಂದು ನರವೇರಿದೆ.. ನಿತಿನ್ ನಾಯಕನಾಗಿ ನಟಿಸ್ತಾಯಿರೋ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮಾಸ್ ಎಲಿಮೆಂಟ್ ಜೊತೆಗೆ ಕ್ಯೂಟ್ ಲವ್ ಸ್ಟೋರಿ ಹೊಂದಿರೋ ಚಿತ್ರ ಈಗಾಗಲೇ ಟೈಟಲ್ನಿಂದಲೇ ಭರ್ಜರಿ ಕ್ಯೂರಿಯಾಸಿಟಿ ಮೂಡಿಸಿದೆ..

ಚಿತ್ರತಂಡ ಮುಹೂರ್ತ ಆಚರಿಸಿಕೊಂಡಿದ್ದು ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಇದೇ ಜೂನ್ 20 ರಂದು ಚಿತ್ರೀಕರಣ ಪ್ರಾರಂಭವಾಗಲಿದೆ… ಸಾಗರ್ ಮಹತಿ ಮ್ಯೂಸಿಕ್ ನೀಡಲಿದ್ದು , ನಾಗ ವಂಶಿ ನಿರ್ಮಾಣ ಮಾಡಲಿದ್ದಾರೆ..

ಮೈಥ್ರಿ ಮೂವಿ ಮೇಕರ್ಸ್ ರಶ್ಮಿಕಾ ಹುಟ್ಟುಹಬ್ಬಕ್ಕೆ ‘ಭೀಷ್ಮ’ ಚಿತ್ರದ ರಶ್ಮಿಕಾ ಪೋಸ್ಟರ್ ನನ್ನು ಕೂಡ ಬಿಡುಗಡೆ ಮಾಡಿದ್ದಾರೆ… ಟಾಲಿವುಡ್‍ನಲ್ಲಿ ರಶ್ಮಿಕಾ ಪಾಲಿಗೆ ಇದು ಇನ್ನೊಂದು ಭರ್ಜರಿ ಆಫರ್ ಎನ್ನಬಹುದು. ಯಾಕೆಂದರೆ ನಿತಿನ್ ಸಿನಿಮಾಗಳಿಗೆ ಅವರದೇ ಆದಂತಹ ಪ್ರೇಕ್ಷಕ ವರ್ಗ, ಮಾರುಕಟ್ಟೆ ಇದೆ. ಬಾಕ್ಸ್ ಆಫೀಸ್‌ನಲ್ಲೂ ಸದ್ದು ಮಾಡಿವೆ ಸಿನಿಮಾಗಳು. ಹಾಗಾಗಿ ಭೀಷ್ಮ ಸಿನಿಮಾ ಕುತೂಹಲ ಕೆರಳಿಸಿದೆ.

ವರನಟ ಡಾ. ರಾಜ್ ಕುಮಾರ್ ರನ್ನು ಸ್ಮರಿಸಿದ ಶಿವಾಜಿ ಪ್ರಭು

#bheeshmamovie #bheeshmalaunch #bheeshmamovietollywood #rashmikamandanna #nithinactor

 

Tags