ಸುದ್ದಿಗಳು

ವಿಭಿನ್ನವಾಗಿ ‘ಭಿನ್ನ’ ಟ್ರೇಲರ್ ಮೆಚ್ಚಿದ ಮಿಸ್ಟರ್ ಫರ್ಫೆಕ್ಟ್!!

ಬೆಂಗಳೂರು,ಮೇ.15:‘ಶುದ್ದಿ’ ಚಿತ್ರದ ನಂತರ ಆದರ್ಶ್ ಈಶ್ವರಪ್ಪ ನಿರ್ದೇಶನದ ದ್ವಿತಿಯ ಸಿನಿಮಾ ‘ಭಿನ್ನ’ಬಿಡುಗಡೆಗೂ ಮುನ್ನವೇ ಮತ್ತೊಮ್ಮೆ ಸದ್ದು ಮಾಡಿದೆ. ಈ ಚಿತ್ರದ ಚಿತ್ರಕಥೆಗೆ 9 ನೇ ‘ದಾದಾ ಸಾಹೇಬ್ ಫಾಲ್ಕೆ ಎಕ್ಸ್ ಲೆನ್ಸ್ ಪ್ರಶಸ್ತಿ’ ದೊರೆತಿದೆ.

ಮಹಿಳಾ ಪ್ರಧಾನ್ಯತೆಯ ಕಥೆ

ಇದೊಂದು ಮಹಿಳಾ ಪ್ರಧಾನ್ಯತೆಯ ಕಥೆಯನ್ನು ಆಧರಿಸಿದ ಚಿತ್ರವಾಗಿದೆ. ಚಿತ್ರದಲ್ಲಿ ಒಟ್ಟು ಆರು ಪಾತ್ರಗಳಿರಲಿದ್ದು, ನಾಲ್ಕು ಪಾತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ಇರಲಿದೆಯಂತೆ. ಚಿತ್ರದಲ್ಲಿ ಶಶಾಂಕ್ , ಪಾಯಲ್, ಸಿದ್ಧಾರ್ಥ್ ಮಾಧ್ಯಮಿಕ, ಸೌಮ್ಯಾ ಸೇರಿದಂತೆ ಹಲವಾರು ಕಲಾವಿದರು ನಟಿಸಿದ್ದಾರೆ.

Image may contain: 2 people, people smiling, people standing, beard and shoes

ಮಿಸ್ಟರ್ ಪರ್ಫೆಕ್ಟ್ ದಂಪತಿ ಮೆಚ್ಚಿದ ‘ಭಿನ್ನ’

ಈಗ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮಿರ್ ಖಾನ್ ದಂಪತಿ ಕೂಡ ಕನ್ನಡ ಚಿತ್ರದ ಟ್ರೇಲರ್ ನೋಡಿ ಮೆಚ್ಚಿದ್ದಾರೆ. ಇನ್ನು ನಿರ್ಮಾಪಕ ಗಣೇಶ್ ಪಾಪಣ್ಣ  ಅವರ ಜೊತೆ ಎರಡು ಗಂಟೆಗಳ ಕಾಲ ಕುಳಿತು ಚಿತ್ರದ ಬಗ್ಗೆ ಚರ್ಚಿಸಿದ್ದಾರೆ… ಇನ್ನು ಆಮಿರ್ ಖಾನ್  ದಂಪತಿ ಟ್ರೇಲರ್ ನೋಡಿ ಇಷ್ಟಪಟ್ಟಿದ್ದು ಮಾತ್ರವಲ್ಲದೆ ಸಿನಿಮಾ ನೋಡುವುದಾಗಿಯು ಹೇಳಿದ್ದಾರೆ.

Image may contain: 2 people, people smiling, closeup

ಇಟಲಿಯ ‘ಒನಿರೋಸಿ ಸಿನಿಮೋತ್ಸವ’ದಲ್ಲಿ ಅತ್ಯುತ್ತಮ ಥ್ರಿಲ್ಲರ್ ಚಿತ್ರ, ಅತ್ಯುತ್ತಮ ನಿರ್ದೇಶಕ, ಬೆಸ್ಟ್ ಒರಿಜಿನಲ್ ಸೌಂಡ್ ಟ್ರ್ಯಾಕ್ ವಿಭಿಗದಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

ಕನ್ನಡದ ನಿರ್ದೇಶಕ ಸ್ಮೈಲ್ ಸೀನು, ಇದೀಗ ತೆಲುಗಿನಲ್ಲಿ ನಾಯಕ ನಟ..!!!

#bhinnathemovie #bhinnatrailerkannada #bhinnamovieamirkhan #amirkhanbollywood

Tags

Related Articles