ಸುದ್ದಿಗಳು

“ಬ್ರಹ್ಮಚಾರಿ” ಗೆ ಮುಹೂರ್ತ!!

ಬೆಂಗಳೂರು,ಏ.14: ಅಯೋಗ್ಯ’ ಹಾಗೂ ‘ಚಂಬಲ್’ ಚಿತ್ರಗಳ ಬಳಿಕ ನೀನಾಸಂ ಸತೀಶ್ ನಟಿಸುತ್ತಿರುವ ಚಿತ್ರವೇ ‘ಬ್ರಹ್ಮಚಾರಿ- 100 % ವರ್ಜಿನ್’. ಈಗಾಗಲೇ ಈ ಚಿತ್ರದ ಬಗ್ಗೆ ಸಾಕಷ್ಟು ಸುದ್ದಿಯಾಗಿದ್ದವು.

ಬ್ರಹ್ಮಚಾರಿಗೆ ಅದಿತಿ ನಾಯಕಿ

ಹೌದು, ಈಗಾಗಲೇ ಸುದ್ದಿಯಾಗಿರುವಂತೆ ‘ಬ್ರಹ್ಮಚಾರಿ’ ಚಿತ್ರದಲ್ಲಿ ಸತೀಶ್ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದು, ಅವರಿಗೆ ಜೋಡಿಯಾಗಿ ‘ಧೈರ್ಯಂ’ ಅದಿತಿ ಪ್ರಭುದೇವ ಆಯ್ಕೆಯಾಗಿದ್ದಾರೆ. ಬ್ರಹ್ಮಚಾರಿ‌ ಸಿನಿಮಾದ ಮುಹೂರ್ತ ನೆರವೇರಿದೆ. ಚಿತ್ರದ ಶೂಟಿಂಗ್  ಕೂಡ ಆರಂಭವಾಗಿದೆ. ಇನ್ನು ಹಳ್ಳಿ ಹಾಗೂ ಪಟ್ಟಣದಲ್ಲಿ ಹಾಗೂ ಅನೇಕ ಲೊಕೇಶನ್ ಗಳಲ್ಲಿ ಶೂಟಿಂಗ್ ಸಾಗಲಿದೆ… ಅದಿತಿ ಪ್ರಭುದೇವ ಮೊದಲ ಬಾರಿಗೆ ಸತೀಶ್ ನೀನಾಸಂ ಜೊತೆ ಪರದೆ ಹಂಚಿಕೊಳ್ಳುತ್ತಿದ್ದಾರೆ..

Image may contain: 12 people, people smiling

ಪಕ್ಕಾ ಕಮರ್ಶಿಯಲ್ ಸಿನಿಮಾ

ಸತೀಶ್ ಯಾವ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ. ಆದರೆ ಅದಿತಿ ಮಾತ್ರ ಗ್ರಂಥಾಲಯವೊಂದರ ಗ್ರಂಥಪಾಲಕಿಯಾಗಿ ನಟಿಸುತ್ತಿದ್ದಾರೆ. ‘ಬಾಂಬೆ ಮಿಠಾಯಿ’ ಮತ್ತು ‘ಡಬಲ್ ಇಂಜಿನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರ ಮೋಹನ್ ‘ಬ್ರಹ್ಮಚಾರಿ’ಗೆ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಇನ್ನು ಹೆಸರೇ ಹೇಳುವಂತೆ ಇದೊಂದು ಪಕ್ಕಾ ಕಮರ್ಶಿಯಲ್ ಸಿನಿಮಾವಾಗಿದ್ದು, ಚಿತ್ರದಲ್ಲಿ ಹಾಸ್ಯದೊಂದಿಗೆ ಭಾವನಾತ್ಮಕ ಅಂಶಗಳು, ಕಲರ್ ಫುಲ್ ಹಾಡುಗಳು ಮತ್ತು ಭರ್ಜರಿ ಆ್ಯಕ್ಷನ್ ಕೂಡಾ ಇರಲಿದೆ.

Image may contain: 3 people, people standing

ಇನ್ನು ‘ಬ್ರಹ್ಮಾಚಾರಿ’ ಅಂತ ಟೈಟಲ್ ಇಟ್ಟಿರುವ ಚಿತ್ರತಂಡ ‘100 ಪರ್ಸೆಂಟ್ ವರ್ಜಿನ್’ ಎನ್ನುವ ಸಬ್ ಟೈಟಲ್ ಇಟ್ಟಿದೆ. ಮೋಹನ್ ಚಂದ್ರ ನಿರ್ದೇಶನ ಹಾಗೂ ಉದಯ್‌ ಮೆಹ್ತಾ ನಿರ್ಮಾಣ ಚಿತ್ರಕ್ಕಿದೆ.

ಅಂದಕ್ಕೂ ಸೈ, ಆರೋಗ್ಯಕ್ಕೂ ಸೈ ಈ ನಮ್ಮ ಗುಲಾಬಿ

#balkaninews #bhramachari #sandalwood #aditiprabhudeva #satishninasam

Tags