ಸುದ್ದಿಗಳು

ಯೂ ಟ್ಯೂಬ್ ಸೆನ್ಸೇಶನ್ ಸ್ಟಾರ್ ಭುವನ್ ಬಾಮ್ ಬಾಲಿವುಡ್ ಗೆ ಎಂಟ್ರಿ!!

ಪ್ಲಸ್ ಮೈನಸ್’ ಶೀರ್ಷಿಕೆ

ಮುಂಬೈ,ಸೆ.09: ಜಾಲಾತಾಣದಲ್ಲಿ ಸೆನ್ಸೇಶನ್ ಹುಟ್ಟು ಹಾಕಿದ ಭುವನ್ ಬಾಮ್ ಗುನೀತ್ ಮೊಂಗ ಅವರ ಚಿತ್ರದ ಮೂಲಕ ‘ಪ್ಲಸ್ ಮೈನಸ್’ ಶೀರ್ಷಿಕೆಯ ಸಿನಿಂಆದ ಮೂಲಕ  ಬಾಲಿವುಡ್ ಗೆ ತಮ್ಮ ಚೊಚ್ಚಲ ಪ್ರವೇಶ ನೀಡಲು ರೆಡಿಯಾಗಿದ್ದಾರೆ. ಇದೊಂದು ಪ್ರಣಯ ಕಥೆಯಾಗಿರಲಿದೆ ಎಂದು ಮೂಲಗಳು ಹೇಳುತ್ತಿವೆ. ದಿವಾ ದತ್ತ ನಾಯಕಿ ಪಾತ್ರದಲ್ಲಿ ಮಿಂಚಲಿದ್ದಾರೆ. ಪ್ಲಸ್ ಮೈನಸ್ ಚಿತ್ರದಲ್ಲಿ ರಾಜ್ ಸಿಂಗ್ ಚೌಧರಿ ಕೂಡ ಕಾಣಿಸಿಕೊಳ್ಳಲಿದ್ದಾರೆ…

Image result for bhuvan bam

ಜಾಲಾತಾಣದ ಸೆನ್ಸೇಶನ್ ಭುವನ್ ಬಾಮ್     

ಜಾಲಾತಾಣಗಳಲ್ಲಿ ಹೆಚ್ಚು ಹೆಸರು ವಾಸಿ ಪಡೆದ ಪ್ರಸಿದ್ಧ ವ್ಯಕ್ತಿಗಳಲ್ಲಿ ಭುವನ್ ಬಾಮ್ ಕೂಡ ಒಬ್ಬರು. ಅವರು ಇತ್ತೀಚಿಗೆ ಒಂದು ಏಕಗೀತೆಯನ್ನು ಬಿಡುಗಡೆ ಮಾಡಿದ್ದು, ಅದು ಅಂತರ್ಜಾಲದಲ್ಲಿ ಸಿಕ್ಕಾ ಪಟ್ಟೆ ಸದ್ದು ಮಾಡಿದೆ.. ಗುನೆಟ್ ಮೊಂಗ ಅವರು ಮೊದಲು  ‘ದಿ ಲಂಚ್ ಬಾಕ್ಸ್’, ‘ಗ್ಯಾಂಗ್ಸ್ ಆಫ್ ವಾಸ್ಸೆಪುರ್’ ‘ಪಾರ್ಟ್ ಒನ್’ ಮತ್ತು ‘ಮಸಾನ್’ ನಂತಹ ಚಲನಚಿತ್ರಗಳನ್ನು ನಿರ್ಮಿಸಿದ್ದಾರೆ. ಕನನ್ ಗಿಲ್ ಕೂಡ ಜಾಲಾತಾಣದಲ್ಲಿ ಪ್ರಖ್ಯಾತಿ ಪಡೆದು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿರುವುದಕ್ಕೆ ಇನ್ನೊಂದು ಉದಾಹರಣೆ. ಈ ನಟ ಇ್ತತೀಚೆಗ ಬಿಡುಗಡೆಯಾದ ‘ನೂರ್’ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ಎದುರು ನಟಿಸಿದ್ದರು.

 

Tags