ಸುದ್ದಿಗಳು

ಹಿಮಾಲಯದ ಶಿಖರವನ್ನೇರಿ ಅಂಬಿಯನ್ನು ನೆನೆದ ಭುವನ್ ಪೊನ್ನಣ್ಣ!!

ಅಂಬರೀಶ್ ಅಂಕಲ್ ನಿಮ್ಮ ನೆನಪುಗಳು ಹಾಗೆ ಇವೆ!

ಬೆಂಗಳೂರು,ಡಿ.6: ರೆಬೆಲ್​ ಸ್ಟಾರ್’ ಅಂಬರೀಶ್ ನಮ್ಮನೆಲ್ಲಾ ಅಗಲಿ ವಾರಗಳೇ ಕಳೆದಿವೆ.. ಆದರೆ ಅವರ ನೆನಪು ಮಾತ್ರ ಇನ್ನೂ  ಮಾಸಿಲ್ಲ.. ‘ರೆಬೆಲ್​ ಸ್ಟಾರ್’​ ಅಂಬರೀಶ್​ ಅವರ 11ನೇ ದಿನದ ಪುಣ್ಯತಿಥಿ ಡಿ. 4. ರಂದು ನಡೆದಿದ್ದು ಇನ್ನು, ಡಿಸೆಂಬರ್ 5ರಂದು ಅಭಿಮಾನಿಗಳ ಸಮ್ಮುಖದಲ್ಲಿ ವೈಕುಂಠ ಸಮಾರಾಧನೆ  ಕೂಡ ಮುಗಿದಿದೆ ಕಂಠೀರವ ಸ್ಟುಡಿಯೋದಲ್ಲಿರುವ ಅಂಬಿ ಸಮಾಧಿಗೆ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ .. ಅಂಬಿಯ ಸಮಾಧಿಗೆ ನಮನ ಸಲ್ಲಿಸಿ ಹೋಗುತ್ತಾರೆ..

ನೀವು ಬೈದರು ಅದು ಎಷ್ಟು ಚೆನ್ನ!

ಹೀಗಿರುವಾಗ, ಬಿಗ್ ಬಾಸ್ ಸೀಸನ್ ಖ್ಯಾತಿಯ ಭುವನ್ ಗೌಡ ಅಂಬಿಯನ್ನು ನೆನೆದು ಭಾವುಕರಾಗಿದ್ದಾರೆ.. “ಅಂಬರೀಶ್ ಅಂಕಲ್ ನಿಮ್ಮ ನೆನಪುಗಳು ಹಾಗೆ ಇವೇ . ಬೇಜಾರ್ ಆಗ್ತಿದೆ ಮನಸ್ಸಿಗೆ. ನೀವು ಬೈದರು ಅದು ಎಷ್ಟು ಚೆನ್ನ” ಎಂದು ಬರೆದಿದ್ದಾರೆ.. ಇನ್ನು ಭುವನ್ ಈಗ ಹಿಮಾಲಯ ಶಿಖರವನ್ನೇರಿದ್ದು, -6 ಡಿಗ್ರಿ ಚಳಿಯಲ್ಲಿ  ಹಿಮಾಲಯ ಪರ್ವತದ ತುತ್ತ ತುದಿಗೆ ಹತ್ತಿ ನಮ್ಮ ಸಿನಿಮಾ ಯಶಸ್ವಿ ಆಗಲೆಂದು ಶಿವನಲ್ಲಿ ಬೇಡಿಕೊಂಡಿದ್ದೇನೆ.. “ ರಾಂಧವ”ನ ಮೇಲೆ ನಿಮ್ಮ ಆಶಿರ್ವಾದ ಹೀಗೆ ಇರಲಿ  ಎಂದು ಸಾಮಾಜಿಕ ಜಾಲಾತಾಣದಲ್ಲಿ ಬರೆದುಕೊಂಡಿದ್ದಾರೆ..

Tags