ಸುದ್ದಿಗಳು

ಫೆ.15 ರಂದು ‘ಬಿಚ್ಚುಗತ್ತಿ’ ಫಸ್ಟ್ ಲುಕ್ ಬಿಡುಗಡೆ ಮಾಡಲಿರುವ ದಚ್ಚು!!

ಬೆಂಗಳೂರು,ಫೆ.13:

ನಿರ್ದೇಶಕ ಹರಿ ಸಂತು ಹಾಗೂ ನಟ ರಾಜ್ ವರ್ಧನ್ ಜೋಡಿಯಲ್ಲಿ ಮೂಡಿ ಬರುತ್ತಿರುವ ‘ಬಿಚ್ಚುಗತ್ತಿ’ ಚಿತ್ರದ ಚಿತ್ರೀಕರಣ  ಬಹುತೇಕ ಮುಗಿದಿದ್ದು ಚಿತ್ರದ ಫ‌ಸ್ಟ್‌ಲುಕ್‌ ಹೊರಬರುವ ಹಂತಕ್ಕೆ ಬಂದಿದೆ. ಚಿತ್ರದ ಫ‌ಸ್ಟ್‌ಲುಕ್‌ ಅನ್ನು ಕೂಡಾ ದರ್ಶನ್‌ ಬಿಡುಗಡೆ ಮಾಡಲಿದ್ದಾರೆ.

ಬಿ.ಎಲ್ ವೇಣು ಅವರ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯಿರುವ ಈ ಚಿತ್ರದಲ್ಲಿ ‘ಬಿಚ್ಚುಗತ್ತಿ ಭರಮಣ್ಣ’ನಾಗಿ ರಾಜ್ ವರ್ಧನ್ ನಟಿಸುತ್ತಿದ್ದು, ನಾಯಕಿ ಹರಿಪ್ರಿಯಾ ಸಿದ್ದಾಂಬೆಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
Image result for bicchugatti darshan

ಫೆ.15 ರಂದು ಚಿತ್ರದ ಸ್ಟ್ಲುಕ್ಹಾಗೂ ಮೋಶನ್ಪೋಸ್ಟರ್ರಿಲೀಸ್

ಇನ್ನುಸಿನಿಮಾದ ಮುಹೂರ್ತಕ್ಕೆ ದರ್ಶನ್‌ ಬಂದು ಶುಭಕೋರಿದ್ದರು.  ಹಾಗಾಗಿ ದರ್ಶನ್‌ ಅವರೇ ಚಿತ್ರದ ಫ‌ಸ್ಟ್‌ಲುಕ್‌ ಬಿಡುಗಡೆ  ಮಾಡಿದರೆ ಚೆನ್ನಾಗಿರುತ್ತೆ ಅಂತಾ ದಚ್ಚುನೇ ಬಿಡುಗಡೆ ಮಾಡಲಿದ್ದಾರೆ.. ದರ್ಶನ್‌ ಫೆ.15 ರಂದು ಚಿತ್ರದ ಫ‌ಸ್ಟ್‌ಲುಕ್‌ ಹಾಗೂ ಮೋಶನ್‌ ಪೋಸ್ಟರ್‌ ರಿಲೀಸ್‌ ಮಾಡಲಿದ್ದಾರೆ. ಹರಿ ಸಂತೋಷ್‌ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಈ ಹಿಂದೆ “ಅಲೆಮಾರಿ’, “ಡವ್‌’, “ಕಾಲೇಜು ಕುಮಾರ’, “ವಿಕ್ಟರಿ-2′  ಚಿತ್ರವನ್ನು ನೀಡಿ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.

ರಾಜವರ್ಧನ್ಭರಮಣ್ಣ ನಾಯಕ

ಈ ಚಿತ್ರಕ್ಕೆ ಸಾಹಿತಿ ಬಿ.ಎಲ್‌.ವೇಣು ಚಿತ್ರದ ಕಥೆ, ಸಂಭಾಷಣೆ ಬರೆದಿದ್ದಾರೆ. ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕನ ಕಥೆ ಈ ಚಿತ್ರದಲ್ಲಿದ್ದು, ಹದಿನಾರನೇ ಶತಮಾನದಲ್ಲಿ ನಡೆದ ಐತಿಹಾಸಿಕ ಘಟನಾವಳಿಗಳನ್ನೇ ಸಿನಿಮಾರೂಪಕ್ಕೆ ತರಲಾಗುತ್ತಿದೆ. ಚಿತ್ರದಲ್ಲಿ ರಾಜವರ್ಧನ್‌ ಭರಮಣ್ಣ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

Tags

Related Articles