ಸುದ್ದಿಗಳು

‘ಬಿಚ್ಚುಗತ್ತಿ’ ಗೆ ಹೆಚ್ಚಿದ ಡಿಮ್ಯಾಂಡ್

'ಬಿಚ್ಚುಗತ್ತಿ' ಚಾಪ್ಟರ್ 1 ಸಿನಿಮಾಗೆ ಇದೀಗ ಹಿಂದಿಯಿಂದ ಹಕ್ಕು ಖರೀದಿಗೆ ಬೇಡಿಕೆ ಹೆಚ್ಚಾಗಿದೆಯಂತೆ.

ಬೆಂಗಳೂರು, ಮಾ.23:

ಬಿ.ಎಲ್. ವೇಣು ಅವರ ಭರಮಣ್ಣ ನಾಯಕ ಕಾದಂಬರಿ ಆಧಾರಿತ ಸಿನಿಮಾವೇ ‘ಬಿಚ್ಚುಗತ್ತಿ’ ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆ. ನಾಯಕನಾಗಿ ರಾಜವರ್ಧನ್ ನಟಿಸುತ್ತಿದ್ದು, ನಾಯಕಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಇನ್ನೂ ಈ ಸಿನಿಮಾ ಬಿಡುಗಡೆಗೂ ಮೊದಲೇ ತನ್ನ ಡಬ್ಬಿಂಗ್ ರೈಟ್ಸ್‌ ಗೆ ಬೇಡಿಕೆಯನ್ನು ಹೆಚ್ಚಿಸಿ ಕೊಂಡಿದೆ.

ಹಿಂದಿ ಡಬ್ಬಿಂಗ್ ರೈಟ್ಸ್‌ ಗೆ ಡಿಮ್ಯಾಂಡ್

ಸದ್ಯ ಪೋಸ್ಟರ್ ಗಳಿಂದಲೇ ಬಾರೀ ಸದ್ದು ಮಾಡಿರುವ ಈ ಸಿನಿಮಾ ಸೀಕ್ವೇಲ್ ಕೂಡ ಇರಲಿದೆ. ಈಗಾಗಲೇ ಮುಕ್ಕಾಲು ಭಾಗ ಚಿತ್ರೀಕರಣ ಮುಗಿಸಿರುವ ಈ ಸಿನಿಮಾಗೆ ಹಿಂದಿ ಡಬ್ಬಿಂಗ್ ರೈಟ್ಸ್ ಪಡೆಯಲು ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಸದ್ಯ ಈ ಬಗ್ಗೆ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇವೆಂದು ಸಿನಿಮಾ ತಂಡ ಹೇಳಿದೆ.

ಹರಿ ಸಂತೋಷ್ ನಿರ್ದೇಶನದ ಸಿನಿಮಾ

ಬಿಚ್ಚುಗತ್ತಿ ಚಿತ್ರದ ನಿರ್ದೇಶನ ಮಾಡಿದ್ದಾರೆ ಹರಿ ಸಂತೋಷ್. ಹರಿಪ್ರಿಯಾ ಅವರು ಸಿದ್ಧಾಂಬೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸದ್ಯ ತಮಿಳೂ ತೆಲುಗಿನಲ್ಲಿ ಸಿನಿಮಾ ಡಬ್ ಆಗುತ್ತಿದೆ. ಈಗಾಗಲೇ ತಮಿಳು ಹಿಂದಿ ಹಾಗೂ ತಮಿಳೀನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ದೇಶಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಒಟ್ನಲ್ಲಿ ಈಗಾಗಲೇ ಹಲವಾರು ವಿಚಾರಗಳಿಂದ ಸದ್ದು ಮಾಡುತ್ತಿರುವ ಈ ಸಿನಿಮಾ ಇದೀಗ ಡಬ್ಬಿಂಗ್ ರೈಟ್ಸ್‌ನಲ್ಲೂ ಸದ್ದು ಮಾಡ್ತಾ ಇದೆ.

ವಿದ್ಯಾರ್ಥಿಯಾಗಿ ಕಾಲೇಜ್ ಗೆ ಹೊರಟ ‘ಯುವರತ್ನ’

#balkaninews #sandalwood #kannadamovies #rajvardhan #bichchugattikannadamovie #bichchugattimovierights

Tags