ಸುದ್ದಿಗಳು

ಅಯೋಧ್ಯೆ ತೀರ್ಪಿಗಿಂತ ಹೆಚ್ಚಾಯ್ತಾ ಬಿಗ್ ಬಾಸ್ ಲಿಪ್ ಲಾಕ್..!!

ದೇಶದ ಸರ್ವೋಚ್ಚ ನ್ಯಾಯಾಲಯವು ಅಯೋಧ್ಯ ಭೂ ವಿವಾದಕ್ಕೆ  ಸಂಬಂಧಿಸಿದಂತೆ ತೀರ್ಪು ಪ್ರಕಟಿಸಿದೆ. ನಿನ್ನೆಯಿಂದಲೇ ಈ ತೀರ್ಪಿನ ಬಗ್ಗೆ ಇಡೀ ದೇಶದ ಜನರೇ ಕಾಯುತ್ತಿದ್ದರು. ಅಚ್ಚರಿಯೆಂದರೆ ಸೋಷಿಯಲ್ ಮೀಡಿಯಾದಲ್ಲಿ ಈ ತೀರ್ಪಿಗಿಂತ ಹೆಚ್ಚಾಗಿ ಕನ್ನಡ ಬಿಗ್ ಬಾಸ್ ಸ್ಪರ್ಧಿಗಳ ಲಿಪ್ ಲಾಕ್ ವಿಚಾರವೇ ಹೆಚ್ಚು ಸದ್ದು ಮಾಡುತ್ತಿದೆ ಎಂದರೆ ನಂಬುತ್ತೀರಾ…? ಖಂಡಿತಾ ನಂಬಲೇ ಬೇಕು.

ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ಕರಾವಳಿ ಕುವರಿ ಭೂಮಿ ಶೆಟ್ಟಿ ತುಟಿಗೆ ‘ನಾಗಿಣಿ’ ದೀಪಿಕಾ ದಾಸ್ ತುಟಿ ಒತ್ತಿ ಕಿಸ್ ಕೊಟ್ಟಿದ್ದಾರೆ. ಹೀಗಾಗಿ ಇವರಿಬ್ಬರ ಲಿಪ್ ಲಾಕ್ ನೋಡಿದ ಉಳಿದ ಸ್ಫರ್ಧಿಗಳ ಮತ್ತು ಜನರ ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರಗಳು ನಡೆಯುತ್ತಿವೆ. ಅಷ್ಟೇ ಅಲ್ಲದೇ ಈ ಮುತ್ತಿನ ವಿಚಾರವು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಆಗುತ್ತಿದೆ.

ಸದ್ಯಕ್ಕೆ ಅಯೋಧ್ಯೆ ತೀರ್ಪು ಹೊರ ಬಿದ್ದಿದ್ದು, ಅಯೋಧ್ಯೆ ಇನ್ನು ವಿವಾದಿತ ಭೂಮಿಯಲ್ಲ ಹಾಗೆಯೇ ಮುಸ್ಲಿಮರಿಗೆ 5 ಎಕ್ರೆ ಪರ್ಯಾಯ ಭೂಮಿ ನೀಡಿದೆ. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣದ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದೆ.

ಕರಾಟೆ ಕಿಂಗ್ ಶಂಕರ್ ನಾಗ್ ಅಭಿಮಾನಿಯ ಅಭಿಮಾನದ ಕಥೆ

#Bigboss #Ayodhye #DeepikaDas #BhoomiShetty

Tags