ಸುದ್ದಿಗಳು

ಫೇಸ್ ಬುಕ್ ನಲ್ಲಿ ಬಿಗ್ ಟ್ರೆಂಡ್ ಆದ ‘ಬೀಗಬೇಡ’ ಸಾಲುಗಳು.. ಏನಿದು ಕಥೆ..!!!

ಬೆಂಗಳೂರು, ಆ. 09:

ಬಹು ಪ್ರತಿಭಾವಂತ ನಟ – ನಿರ್ದೇಶಕ ರಮೇಶ್ ಅರವಿಂದ್ ಅವರು ಈ ಮೊದಲು  ನಿರೂಪಿಸುತ್ತಿದ್ದ ಜೀ ಕನ್ನಡವಾಹಿನಿಯ ”ವೀಕೆಂಡ್ ವಿತ್ ರಮೇಶ್”  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಸಾಧಕರ ಕುರ್ಚಿಯಲ್ಲಿ ಕುಳಿತು ಹೇಳಿದ ನಾಲ್ಕು ಹಿತವಚನಗಳು ಸಾಮಾಜಿಕ ತಾಣಗಳಲ್ಲಿ ಹೊಸ ಟ್ರೆಂಡ್ ಒಂದನ್ನು ಸೃಷ್ಟಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಯಾವಾಗ, ಏನು ಜನಪ್ರಿಯಗೊಳ್ಳುತ್ತದೆಯೋ ಗೊತ್ತಾಗುವುದಿಲ್ಲ. ಈ ಬಾರಿ ಬೀಗಬೇಡ ಪದದ ಪ್ರಯೋಗಗಳು ಜನಪ್ರಿಯವಾಗಿದೆ. ಇದೀಗ ಯಾರದ್ದೇ ವಾಟ್ಸಪ್, ಫೇಸ್ಬುಕ್ ಪ್ರೊಫೈಲ್, ಸ್ಟೇಟಸ್ ನೋಡಿದರೂ ಈಗ ಬೀಗಬೇಡದ್ದೇ ಮಾತು.

ಎಲ್ಲರೂ ತಮ್ಮ ಜೀವನಕ್ಕೆ ತೀರಾ ಹತ್ತಿರವಾದ ಈ ಸಾಲುಗಳನ್ನು ಈ ಮೂಲಕ ತೇಲಿ ಬಿಡುತ್ತಿದ್ದಾರೆ. ಕೆಲವರಂತೂ ತಮ್ಮ ಸ್ನೇಹಿತರನ್ನು ನಯವಾಗಿ ಚುಚ್ಚಲು, ಗೇಲಿ ಮಾಡಲು, ಕಾಲೆಳೆಯಲು ಯಾವ್ಯಾವ ಸನ್ನಿವೇಶಗಳಿಗೆ ತಗಲಿ ಹಾಕಲು ಸಾಧ್ಯವಾಗುತ್ತದೋ ಅದಕ್ಕೆಲ್ಲದಕ್ಕೂ ಮೊಳೆ ಹೊಡೆಯುತ್ತಿದ್ದಾರೆ. ಬಡಾಯಿ ಕೊಚ್ಚುವವರ ಬಾಯಿಗೆ ಬೀಗ ಹಾಕುತ್ತಿದ್ದಾರೆ. ಕೆಲವರು ತಮ್ಮ ಅದ್ಭುತ ‘ಪನ್‌’ ಗಳನ್ನು ಬರೆಯುತ್ತಾ ಬೀಗುತ್ತಿದ್ದಾರೆ…

ಬೀಗಬೇಡಾ.. ‘ಒಗಟುಗಳು’ ಒಂದಿಷ್ಟು ಸ್ಯಾಂಪಲ್ಸ್… ನಿಮಗಾಗಿ…

1 ಡಿ.ಎಸ್.ಎಲ್.ಆರ್ ಕ್ಯಾಮರಾದಲ್ಲಿ ಫೋಟೋ ಚಂದ ಬಂತು ಅಂತ ಬೀಗಬೇಡ… ಆಧಾರ್ ಕಾರ್ಡ್ ನಲ್ಲಿ ನಿನ್ ಫೋಟೋನು ನೋಡಿದ್ದೇನೆ.

2 ಶೆಕೆ ಆಗುತ್ತಿದೆ ಏ.ಸಿ ಹಾಕಿ ಎಂದು ಬೀಗಬೇಡ, ಚಳಿ ಆಗುತ್ತಿದೆ ಎಂದು ಜಾಕೆಟ್ ಹಾಕಿ ಕುಳಿತಿರುವುದನ್ನು ನಾನು ಕಣ್ಣಾರೆ ಕಾಣುತ್ತಿದ್ದೇನೆ

3 ಸ್ಕಾಚ್ ಕುಡಿದಿದ್ದೇನೆ ಎಂದು ಬೀಗಬೇಡ. ಲೋಕಲ್ ಬಾರ್ ನಲ್ಲಿ ಪಕ್ಕದವನ ಬಳಿ ಕಡ್ಲೆ ಬೀಜ ಕೇಳಿ ತಿಂದಿದ್ದನ್ನು ನೋಡಿದ್ದೇನೆ.

4 ಡಿಸ್ಟಿಂಕ್ಷನ್ ಬಂದಿದ್ದೇನೆ ಎಂದು ಬೀಗಬೇಡ. ಜಸ್ಟ್ ಪಾಸ್ ಆಗಿ ಸರಕಾರ ರಚಿಸಿದವರನ್ನು ಕಂಡಿದ್ದೇನೆ.

5 ನನಗೆ ಬಾಂಡ್ಲಿಯಾಗಿರುವ ಹುಡುಗರನ್ನು ಕಂಡರೆ ಇಷ್ಟವಾಗುವುದಿಲ್ಲ ಎಂದು ಹೇಳಬೇಡ ಹುಡುಗಿ, ನಿನ್ನ ಅಪ್ಪನೂ ಸಹ ಬಾಂಡ್ಲಿಯಾಗಿರುವುದನ್ನೂ ನಾನು ನೋಡಿದ್ದೇನೆ..

6 ಕೈ ನೋಡಿ ಭವಿಷ್ಯ ಹೇಳುವವರನ್ನು ನಂಬಬೇಡ, ಕೈ ಇಲ್ಲದವರಿಗೂ ಭವಿಷ್ಯ ಇರುವುದನ್ನು ನಾನು ನೋಡಿದ್ದೇನೆ..

7 ನನ್ನ ಕಣ್ಣೀರು ಒರೆಸೊಕೆ ಫ್ರೆಂಡ್ಸ್ ಇಲ್ಲ ಅಂತಾ ಕೊರಗಬೇಡ, ಕೈಗಳು ಇಲ್ಲದವರನ್ನ ನೋಡಿದ್ದೇನೆ.

8 ಜೀವದ ಗೆಳೆಯರು ಎಂದು ಬೀಗಬೇಡ, ಸೋತಾಗ ಪರಿಚಯ ಇಲ್ಲದಂತೆ ನಡ್ಕೊಂಡವರನ್ನು ಕಂಡಿದ್ದೇನೆ.

9 ನನ್ನ ಹತ್ತಿರ ಏನೂ ಇಲ್ಲಾ ಅಂತ ಚಿಂತಿಸಬೇಡ.ಎಲ್ಲಾ ಇದ್ದು ಚಿಂತಿಸುವವರನ್ನು ನಾನು ನೋಡಿದ್ದೇನೆ.

10 ಸಿನೆಮಾ ತಾರೆಯನ್ನು ಮದುವೆಯಾಗಿರುವೆ ಎಂದು ಬೀಗಬೇಡ. ವಿಕ್ಸ್ ಹಚ್ಚಿ ಅತ್ತಿದನ್ನು ನೋಡಿದ್ದೇನೆ…

11 ಸಿಕ್ಕಾಪಟ್ಟೆ ಲವರ್ಸ್ ಇದಾರೆ ಎಂದು ಬೀಗಬೇಡ, ಕಣ್ಮುಂದೆಯೆ ಏಡ್ಸ್ ಹತ್ತಿ ಮಣ್ಣಾದವರನ್ನೂ ನೋಡಿದ್ದೇನೆ.

12 ಎತ್ತರದಲ್ಲಿದ್ದೇನೆ ಎಂದು ಬೀಗಬೇಡ, ನಕ್ಷತ್ರಗಳು ಕೆಳಗುರುಳಿದ್ದನ್ನು ನೋಡಿದ್ದೇನೆ.

13 ನನ್ನಲ್ಲಿ ಸೌಂದರ್ಯವಿದೆ ಎಂದು ಹಿಗ್ಗಬೇಡ.. ಮೊನಾಲಿಸಾ ಮಣ್ಣಾಗಿದ್ದನ್ನು ನೋಡಿದ್ದೇನೆ.

14 ಫ್ರೆಂಡ್ ಶಿಪ್ ಡೇ ದಿನ ಮೆಸೇಜು ಬಂದಿದೆ ಎಂದು ಬೀಗಬೇಡ, ಮೆಸೇಜ್ ಬರದ ದಿನವನ್ನು ಕಂಡೀದ್ದೇನೆ..

15 ಸಾವಿರ ಲೈಕ್ ಬರುತ್ತೆ ಎಂದು ಬೀಗಬೇಡ, ಹತ್ತು ಇಪ್ಪತ್ತು ಲೈಕ್ ತೊಗೊಂಡು ಖುಷಿಯಾಗಿ ಇರೋರನ್ನ ಕಂಡೀದೇನೆ.

16 ಹಣ ಇದೆ ಎಂದು ಬೀಗಬೇಡ ದಿಕ್ಕಿಲ್ಲದ ಹೆಣವಾಗಿ ಬಿದ್ದವರನ್ನೂ ನೋಡಿದ್ದೇನೆ

17 ಸ್ನೇಹಿತ ಇದಾನೇ ಅಂತ ಹೆಚ್ಚು ಬೀಗಬೇಡ,ಸ್ನೇಹಿತನಿದ್ದರೂ ಅವನಿಗೆ ಲವರ್ ಇಲ್ಲದೇ ಇರುವವರನ್ನ ನಾನು ನೋಡಿದ್ದೇನೆ….

18 ನನಗೆ ಡಿಗ್ರಿಇಲ್ಲ ಎಂದು ಕುಗ್ಗಬೇಡ, ಇಂಜಿನಿಯರಿಂಗ್ ಮಾಡಿ ಟಾಯ್ಲೆಟ್ ತೊಳಿಯುತ್ತಿರುವವನನ್ನು ನೋಡಿದ್ದೇನೆ

19 ಈಗ ದುಡ್ಡಿದೆ ಅಂತ ಬೀಗಬೇಡ.. ಒಂದ್ ಕಾಲದಲ್ಲಿ ಐನೂರುಪಾಯಿದ್ರೆ ಕೊಡಿ ವಾಪಸ್ ಕೊಡ್ತಿನಿ ಅಂತ ಕೇಳಿದನ್ನು ಕಂಡಿದೀನಿ.

20 ಫೇಸ್ಬುಕ್ ಸೆಲೆಬ್ರಿಟಿ ಆದೆ ಎಂದು ಬೀಗಬೇಡ, ಇಂತ ಎಷ್ಟೋ ಸೆಲೆಬ್ರಿಟಿಗಳು ಸೈಲೆಂಟ್ ಆಗಿ ಸೈಡಿಗೆ ಸರಿದು ಹೋದದ್ದನ್ನು ನೋಡಿದ್ದೇನೆ.

21 ಹುಡುಗಿ ಕೈ ಕೊಟ್ಟಳೆಂದು ಕೊರಗಬೇಡ, ಅಂತವರು ಅಂಕಲ್ ನ ಮದುವೆ ಆಗಿರುವುದನ್ನು ನೋಡಿದ್ದೇನೆ.

22 ನನ್ನ ಹೆಂಡತಿ ಪತಿವ್ರತೆ ಅಂತಾ ಬೀಗಬೇಡಾ, ತವರಿಗೆ ಬಂದಾಗ ಹಳೆ ಲವರನ್ನಾ ಭೇಟಿ ಆಗಿದ್ದನ್ನಾ ನೋಡಿದ್ದೇನೆ

23 ನಿನ್ನ ಮಗ ನಿನ್ನ ಹೆಸರು ತರುತ್ತಾನೆಂದು ನಂಬಬೇಡಾ, ತಂದೆಯ ಹೆಸರನ್ನು ಹೆಸರಿಲ್ಲದಂತೆ ಮಾಡಿದ ಮಗನನ್ನು ಕಂಡಿದ್ದೇನೆ..

24 ಕುಡುಕರಿಗೆ ಕುಡಿಯಬೇಡಾ ಕುಡಿದು ತುರಾಡಬೇಡೆಂದು ಹೇಳಿದೆನೆಂದು ಬೀಗಬೇಡಾ, ನಿನ್ನ ಉಪದೇಶ ಕೇಳಿದ ಮೇಲೂ ಕುಡಿದು ಗಟಾರಿನಲ್ಲಿ ಬಿದ್ದವರನ್ನ ಕಂಡಿದ್ದೇನೆ.

25 ನಾನು ಬೀಗಿದ್ದಕ್ಕೆ ನೀವೆಲ್ಲರು ಬೀಗಬೇಡಿ! ತಲೆಕೆಟ್ಟು ಅನ್ಫ್ರೆಂಡ್ ಮಾಡಿರುವವರನ್ನು ನಾನು ನೋಡಿದ್ದೇನೆ.

26 ಮಾಲಲ್ಲಿ 4999 ರುಪಾಯಿಗೆ ಹೊಸ ಚೂಡಿದಾರ್ ತಗೊಂಡೆ ಅಂತ ಓಳು ಬಿಡಬೇಡ! ಮೆಜೆಸ್ಟಿಕ್ಕಲ್ಲಿ ‘ಅಣ್ಣೊ 50 ರುಪಾಯಿ ಕಡಿಮೆ ಮಾಡಿ ಕೊಡು’ ಎಂದಿರುವುದನ್ನು ನಾನು ನೋಡಿದ್ದೇನೆ.

27 ಡಬ್ ಸ್ಮ್ಯಾಶ್ ಮಾಡಿ 16 ಲೈಕ್ ಬಂತೆಂದು ಎಗರಬೇಡ! 36 ಟೇಕ್ ತೆಗೆದುಕೊಂಡಿದ್ದನ್ನ ನಾನು ನೋಡಿದ್ದೇನೆ.
ವಯಸ್ಸಾಗ್ತಿದೆ ಅಂತ ಹೋಪ್ ಕಳೆದುಕೊಳ್ಳಬೇಡ, ಗಡ್ಡಪ್ಪ, ಸೆಂಚುರಿಗೌಡರನ್ನು ನಾನು ನೋಡಿದ್ದೇನೆ.

28 ಯ್ಯೂಟ್ಯೂಬ್ ನಲ್ಲಿ ನೋಡುಗರ  ನೋಟಗಳೂ ಜಾಸ್ತಿ ಬಂದಿದೆ ಅಂತ ಬೀಗಬೇಡ! ಬೂಸ್ಟ್ ಮಾಡಿ ರೆಕಾರ್ಡ್ಗಳನ್ನ’ ವೂಸ್ಟ್’ ಮಾಡಿರುವುದನ್ನು ನಾನು ನೋಡಿದ್ದೇನೆ

ಹೀಗೆ ಬೀಗಬೇಡ ತುಂಬಾ ಜನಪ್ರಿಯವಾಗಿದೆ.. !  ಹೇಗಿದೆ ನೋಡಿ ಈ ‘ಬೀಗ ಬೇಡಾ..!’ ವರಸೆ. ಬೀಗ್ತೀರಾ..ಇಲ್ಲವೆ ಬೀಗೋದನ್ನು ಬಿಡ್ತೀರಾ…ಆಯ್ಕೆ ನಿಮ್ಮದು..!

 

@ sunil Javali

Tags

Related Articles