ಸುದ್ದಿಗಳು

ಬಿಗ್ ಬಾಸ್ ಸರಣಿಯಲ್ಲಿ ಈ ಕ್ರಿಕೆಟಿಗ ಕಾಣಿಸಿಕೊಳ್ಳುತ್ತಾರಂತೆ!!

ಯಾರು ಈ ಆಟಗಾರ?

ಕೇರಳ ಎಕ್ಸ್ ಪ್ರೆಸ್ ಎಂದೇ ಹೆಸರಾಗಿದ್ದ ಶ್ರೀಶಾಂತ್ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಕೇಳಿ ಬಂದಿದೆ.

ಮುಂಬೈ,ಸೆ.07: ಟಿವಿ ಶೋಗಳಲ್ಲಿ ಒಂದಾಗಿರುವ ಪ್ರಖ್ಯಾತ ಶೋ ಎಂದರೆ ಬಿಗ್ ಬಾಸ್. ಬಾಲಿವುಡ್ ನಲ್ಲಿ ಸರಣಿ 12 ಶೀಘ್ರವೇ ಸೆಟ್ಟೇರಲಿದೆ. ಬಿಗ್ ಬಾಸ್ ಪ್ರತಿ ಬಾರಿಯೂ ಏನಾದರೂ ಹೊಸ ರೀತಿಯಲ್ಲಿ ಕುತೂಹಲವನ್ನು ಹುಟ್ಟಿಸುತ್ತದೆ. ಈ ಬಾರಿ ಬಿಗ್ ಬಾಸ್ ಸ್ಪರ್ಧಿಗಳು ಯಾರು ಎಂಬ ಕುತೂಹಲ ಎಲ್ಲರ ಮನದಲ್ಲಿ ಮೂಡಿದೆ. ಬಿಗ್ ಬಾಸ್ ಮನೆ ಸೇರಲಿರುವ ಸೆಲೆಬ್ರಿಟಿಗಳ ಹೆಸರು ಒಂದೊಂದಾಗಿ ಹೊರಗೆ ಬರುತ್ತಿದೆ. ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರರೊಬ್ಬ ಬಿಗ್ ಬಾಸ್ ಮನೆ ಸೇರಲಿದ್ದಾರಂತೆ. ಯಾರು ಈ ಆಟಗಾರ? ಮುಂದೆ ಓದಿ..

ಕ್ರಿಕೆಟ್ ಆಟಗಾರ ಶ್ರೀಶಾಂತ್

ಕೇರಳ ಎಕ್ಸ್ ಪ್ರೆಸ್ ಎಂದೇ ಹೆಸರಾಗಿದ್ದ ಶ್ರೀಶಾಂತ್ ಹೆಸರು ಬಿಗ್ ಬಾಸ್ ಪಟ್ಟಿಯಲ್ಲಿ ಕೇಳಿ ಬಂದಿದೆ. 2013ರಲ್ಲಿ ನಡೆದ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ವೇಗಿ ಶ್ರೀಶಾಂತ್ ಹೆಸರಿತ್ತು. ಘಟನೆ ನಂತರ ಬಿಸಿಸಿಐ ಅಂತರಾಷ್ಟ್ರೀಯ ಹಾಗೂ ದೇಶಿ ಕ್ರಿಕೆಟ್ ಗೆ ಶ್ರೀಶಾಂತ್ ರನ್ನು ಬ್ಯಾನ್ ಮಾಡಿತ್ತು. ಹಾಗಾಗಿ ಶ್ರೀಶಾಂತ್ ಕ್ರಿಕೆಟ್ ನಿಂದ ದೂರ ಉಳಿಯಬೇಕಾಗಿ ಬಂತು.

Related image

ಬಿಗ್ ಬಾಸ್ ಶ್ರೀಶಾಂತ್ ರ ಮೊದಲ ಟಿವಿ ಶೋವೇನಲ್ಲ. ಈ ಹಿಂದೆ ಶ್ರೀಶಾಂತ್ ಡಾನ್ಸ್ ರಿಯಾಲಿಟಿ ಶೋನಲ್ಲಿ ಕಾಣಸಿಕೊಂಡಿದ್ದರು.ಮಲಯಾಳಂ ಚಿತ್ರ ಟೀಂ-5ನಲ್ಲಿ ನಟಿಸಿದ್ದಾರೆ. ಹಾಗಾದರೆ ಶ್ರೀಶಾಂತ್ ನನ್ನು ಮಿಸ್ ಮಾಡಿಕೊಳ್ಳುತ್ತಿದ್ದ ಅಭಿಮಾನಿಗಳಿಗೆ ಇನ್ನು ಮುಂದೆ ಬಿಗ್ ಬಾಸ್ ನಲ್ಲಿ ನೋಡುವ ಭಾಗ್ಯ ದೊರೆಯುತ್ತದೋ ಕಾದು ನೋಡಬೇಕು..

 

Tags