ಸುದ್ದಿಗಳು

ಬಿಗ್ ಬಾಸ್ ಮನೆ ಈಗ ಸಾವಿನ ಮನೆ ಆಯಿತೇ!

ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಗುಣಶೇಖರನ್

ಚೆನ್ನೈ,ಸೆ.09 : ಬಿಗ್ ಬಾಸ್ ಕಾರ್ಯಕ್ರಮ ಅಂದರೆ ಸಾಕು ಪುಟ್ಟ ಮಕ್ಕಳಿಂದ ಹಿಡಿದು ಹಿರಿಯರವರೆಗೂ ನೋಡುತ್ತಾರೆ. ತಮಿಳು ಬಿಗ್ ಬಾಸ್ ಕಮಲ್ ಹಾಸನ್ ನಡೆಸಿಕೊಡುತ್ತಿದ್ದಾರೆ. ತಮಿಳು ಬಿಗ್​ಬಾಸ್​ ಮನೆಯಲ್ಲಿ ಈಗ ಅವಘಡವೊಂದು ನಡೆದಿದೆ. ಎರಡನೇ ಪ್ಲೋರ್​​ನಿಂದ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮರಣ ಹೊಂದಿದ್ದಾನೆ. ಗುಣಶೇಖರನ್​ ಎಂಬ ವ್ಯಕ್ತಿಗೆ ಈ ಅವಘಡ ಸಂಭವಿಸಿದೆ

ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಗುಣಶೇಖರನ್​​ ಎರಡನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನಪ್ಪಿದ್ದಾನೆ. ಘಟನೆ ಕುರಿತು ನಜರತ್​ಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಪ್ರಾರಂಭವಾಗಿದೆ. ತನಿಖೆಯ ನಂತರವೇ ಮಾಹಿತಿಗಳು ಬಹಿರಂಗವಾಗಬೇಕಿದೆ..

 

Tags