ಸುದ್ದಿಗಳು

ಮನಸ್ಸಲ್ಲೇ ಮಡಗಿರೋ ಮಚ್ಚಿರುತ್ತೆ, ಕಾಡ್ಗಿಚ್ಚಿರುತ್ತೆ’ ಬಿಗ್ ಬಾಸ್-6 ಪ್ರೋಮೋ

ಬಿಗ್ ಬಾಸ್ -6 ಸ್ಪರ್ಧಿಗಳ್ಯಾರು?

ಬೆಂಗಳೂರು,ಸೆ.10: ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕಾರ್ಯಕ್ರಮದ ಐದನೇ ಸೀಸನ್ ಮುಗಿದು  ಬಿಗ್​​​​​​ಬಾಸ್​​​​​​-6 ಕ್ಕೆ ಇನ್ನೇನು ಕಲವೇ ದಿನಗಳು ಉಳಿವೆ. ಇನ್ನು ಬಿಗ್ ಬಾಸ್-6 ರಲ್ಲಿ ಯಾವ ಯಾವ ಸ್ಫರ್ಧಿಗಳು ಇರುತ್ತಾರೆ ಎಂಬ ಕುತೂಹಲ ದಿನೇ ದಿನೆ ಹೆಚ್ಚಾಗುತ್ತಿದೆ. ಕೆಲವು ಸೆಲೆಬ್ರೆಟಿಗಳ ಹೆಸರು ಕೇಳಿ ಬರುತ್ತಿವೆ. ಇದರ ನಡುವೆ ಬಿಗ್​​​​​​ಬಾಸ್​​​​​​ 6 ನೇ ಆವೃತ್ತಿಯ ಪ್ರೋಮೋ ಕೂಡಾ ಬಿಡುಗಡೆಯಾಗಿದೆ. ಸೆಪ್ಟೆಂಬರ್ ಕೊನೆಯ ವಾರದ ವೇಳೆಗೆ ಕಾರ್ಯಕ್ರಮ ಆರಂಭವಾಗಲಿದೆ.

ಮನೆಯಲ್ಲಿ ಕಿಚ್ಚು ಇದೆ

ಇನ್ನು ಕಳೆದ ಸೀಸನ್ ನಲ್ಲಿ ರಾಪರ್ ಚಂದನ್ ಶೆಟ್ಟಿ ವಿನ್ನರ್ ಆಗಿ, ದಿವಾಕರ್ ರನ್ನರ್ ಅಪ್​ ಆಗಿ ಹೊರಬಂದಿದ್ದರು. 35 ಸೆಕೆಂಡ್ ಅವಧಿಯ ಪ್ರೋಮೋದಲ್ಲಿ ‘ಈ ಮನೆಯಲ್ಲಿ ಕಿಚ್ಚು ಇದೆ ಎಂದು ಮೊದಲಿನಿಂದಲೂ ನಾನು ಹೇಳುತ್ತಿದ್ದೆ. ಆದರೆ ಅದೇ ಕಿಚ್ಚು ಮನೆಯನ್ನೇ ಸುಟ್ಟು ಬೂದಿ ಮಾಡುತ್ತೆ ಅಂತ ನನಗೆ ಗೊತ್ತಿರಲಿಲ್ಲ. ಅದೇ ಬೂದಿಯಿಂದ ಎದ್ದು ಬಂದಿರುವ ಕಿಚ್ಚು, ಈಗ ಹೊಸ ಮನೆ ಕಟ್ಟುತ್ತಿದೆ. ಹೊಸ ಮನೆ ಜೊತೆ ಹೊಸ ಹೊಸ ಸ್ಪರ್ಧಿಗಳು, ಇನ್ನೊಂದು ಹೊಸ ಸೀಸನ್​, ಮಜಾ ಅಂದರೆ ಈ ಮನೆಲೂ ಕಿಚ್ಚಿರುತ್ತೆ. ಮನಸ್ಸಲ್ಲೇ ಮಡಗಿರೋ ಮಚ್ಚಿರುತ್ತೆ, ಕಾಡ್ಗಿಚ್ಚಿರುತ್ತೆ’  ಎಂದು ಸುದೀಪ್ ಮಾತನಾಡಿದ್ದಾರೆ.

Tags