ಸುದ್ದಿಗಳು

ಲೀಕ್ ಆಯ್ತು ಹಿಂದಿ ಬಿಗ್ ಬಾಸ್ ಸೀಸನ್13ರ ಸ್ಪರ್ಧಿಗಳ ವಿವರ!

ಹಿಂದಿ ಕಿರುತೆರೆಯಲ್ಲಿ ವಿವಾದಾತ್ಮಕ ಹಾಗೂ ಖ್ಯಾತ ರಿಯಾಲಿಟಿ ಶೋ ಎಂದರೆ ಅದು ‘ಬಿಗ್ ಬಾಸ್’. ಬಿಗ್ ಬಾಸ್ 12 ನೇ ಸೀಸನ್ ನಡೆಯುತ್ತಿರುವಾಗಲೇ 13 ನೇ ಸೀಸನ್ ನ ಸ್ಪರ್ಧಿಗಳು ಯಾರಿರಬಹುದು ಎಂಬ ಕುತೂಹಲ ವೀಕ್ಷಕರಿಗಿತ್ತು.

ಮೂಲಗಳ ಪ್ರಕಾರ ಹಿಂದಿ ಬಿಗ್ ಬಾಸ್ ಸೀಸನ್ 13ನೇ ಶೋ ಸೆಪ್ಟೆಂಬರ್ ನಲ್ಲಿ ಆರಂಭವಾಗುತ್ತದೆ. ಷೋನ ನಿರೂಪಕ, ಸೂಪರ್ ಸ್ಟಾರ್ ಸಲ್ಮಾನ್ ಖಾನ್  ಸದ್ಯದಲ್ಲೇ ಶೋನ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಿಗ್ ಬಾಸ್ ಸೀಸನ್ 12 ಟಿಆರ್ ಪಿ ಗಳಿಸುವಲ್ಲಿ ವಿಫಲವಾಗಿತ್ತು. ಆದ್ದರಿಂದ 13 ನೇ ಸೀಸನ್ ನಲ್ಲಿ ಹೀಗಾಗದಂತೆ ನೋಡಿಕೊಳ್ಳಲು ಸೆಲೆಬ್ರಿಟಿಗಳ ಆಯ್ಕೆಯಲ್ಲಿ ಎಚ್ಚೆತ್ತಿದ್ದಾರೆ ಆಯೋಜಕರು.

ಅಂದಹಾಗೆ ಈ ಬಾರಿ 13 ನೇ ಸೀಸನ್ ನಲ್ಲಿ ಯಾರೆಲ್ಲಾ ಇರಬಹುದು ಎಂಬುದರ ಪಟ್ಟಿ ಇಲ್ಲಿ ಕೊಡಲಾಗಿದ್ದು, ಇವರಲ್ಲಿ ನಿಮ್ಮ ಫೇವರಿಟ್ ಕೂಡ ಇರಬಹುದು ನೋಡಿ…

1.ಝರೀನ್ ಖಾನ್ (ಬಾಲಿವುಡ್ ನಟಿ)

2. ಚುಂಕಿ ಪಾಂಡೆ (ಹಾಸ್ಯ ನಟ, ಬಾಲಿವುಡ್ ನಟ)

3. ರಾಜ್ಪಾಲ್ ಯಾದವ್ (ಹಾಸ್ಯ ನಟ)

4. ವಾರಿನಾ ಹುಸೇನ್ (ಇಂಡಿಯನ್ ಮಾಡೆಲ್ )

5. ದೇವೋಲೀನಾ ಭಟ್ಟಚಾರ್ಜಿ (ಕಿರುತೆರೆ ನಟಿ)

6. ಅಂಕಿತ ಲೋಖಂಡೇ (ಭಾರತೀಯ ನಟಿ)

7. ರಾಕೇಶ್ ವಶಿಷ್ಠ (ದೂರದರ್ಶನ ನಟ)

8. ಮಹಿಕಾ ಶರ್ಮಾ (ವಿವಾದಾತ್ಮಕ ವ್ಯಕ್ತಿ)

9. ಡ್ಯಾನಿ ಡಿ (ವಯಸ್ಕರ ಚಿತ್ರದ ನಟ)

10.ಜೀತ್ (ಬೆಂಗಾಳಿ ಸೂಪರ್ ಸ್ಟಾರ್, ಬಿಗ್ ಬಾಸ್ ಬಾಂಗ್ಲಾ ಹೋಸ್ಟ್)

11. ಚಿರಾಗ್ ಪಾಸ್ವಾನ್ (ರಾಜಕಾರಣಿ, ಮಾಜಿ ನಟ)

12. ವಿಜೇಂದರ್ ಸಿಂಗ್ (ಬಾಕ್ಸರ್, ನಟ)

13. ರಾಹುಲ್ ಖಂಡೇಲ್ವಾಲ್ (ಮಾಡೆಲ್)

14. ಹಿಮಾನ್ಶ್ ಕೊಹ್ಲಿ (ಮಾಡೆಲ್, ನಟ)

15. ಮಹಿಮಾ ಚೌಧರಿ (ಮಾಜಿ ಬಾಲಿವುಡ್ ನಟ)

16. ಮೇಘನಾ ಮಲಿಕ್ (ಟಿವಿ ನಟಿ)

17. ಮಹಾಕ್ಷೆ ಚಕ್ರವರ್ತಿ (ನಟ)

18. ದಯಾನಂದ ಶೆಟ್ಟಿ (ಸಿಐಡಿ ಖ್ಯಾತಿ)

19. ಫೈಜಿ ಬೂ (ರಿಯಾಲಿಟಿ ಶೋ ಸ್ಟಾರ್ / LGBTQ)

20. ರಿತು ಬೆರಿ (ಫ್ಯಾಷನ್ ಡಿಸೈನರ್)

21. ಸೋನಾಲ್ ಚೌಹಾಣ್ (ಗಾಯಕ, ಮಾಡೆಲ್)

22. ಫಝಿಲ್ಪುರಿಯಾ ರಾಹುಲ್ ಯಾದವ್ (ಸಿಂಗರ್)

23. ಸಿದ್ಧಾರ್ಥ್ ಶುಕ್ಲಾ (ನಟ)

ಆಯೋಜಕರು ಇವರೇ ಸ್ಪರ್ಧಿಗಳೆಂದು ಇನ್ನು ಸ್ಪಷ್ಟಪಡಿಸಿಲ್ಲ. ಆದ್ದರಿಂದ ಮುಂದಿನ ಅಪ್ ಡೇಟ್ ವರೆಗೆ ಕಾಯಬೇಕಾಗಿದೆ.

ಕ್ಲೋಸ್ ಅಪ್ ಫೋಟೋ ವೈರಲ್: ಕರೀನಾಳನ್ನು ‘ಆಂಟಿ’ ಎಂದ ಟ್ರೋಲಿಗರು

#balkaninews #biggboss #salmankhan # biggbosscontestant #salmankhantwitter #salmankhaninstagram

Tags