ಸುದ್ದಿಗಳು

‘ಯರ್ರಾಬಿರ್ರಿ’ ಚಿತ್ರಕ್ಕೆ ನಾಯಕಿಯಾದ ಬಿಗ್ ಬಾಸ್ ಖ್ಯಾತಿಯ ಸೋನು ಪಾಟೀಲ್

ಬೆಂಗಳೂರು, ಏ.20:

ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್‌ ಬಾಸ್‌ ಆರರ ಸೀಸನ್ ನ ಮೂಲಕ ಮನೆ ಮಾತಾಗಿರುವ ಉತ್ತರ ಕರ್ನಾಟಕದ ಚೆಲುವೆಯ ಹೆಸರು ಸೋನು ಪಾಟೀಲ್. ಬಿಗ್ ಬಾಸ್ ನ ನಂತರ ಇದೀಗ ಬೆಳ್ಳಿತೆರೆಯಲ್ಲಿ ಬ್ಯುಸಿಯಾಗಿದ್ದಾರೆ ಸೋನು ಪಾಟೀಲ್.

ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿರುವ ಸೋನು ಅವರಿಗೆ ಬಹಳಷ್ಟು ಆಫರ್ ಗಳ ಸುರಿಮಳೆಯೇ ಬಂದಿತ್ತು. ಆದರೆ ಬಂದುದೆಲ್ಲವನ್ನೂ ಕೂಡಲೇ ಒಪ್ಪಿಕೊಳ್ಳದ ಸೋನು ಪಾಟೀಲ್ ಪಾತ್ರವನ್ನು ಅಳೆದು ತೂಗಿ ನಂತರವಷ್ಟೇ ಸೈ ಎನ್ನುತ್ತಾರೆ. ಈ ಮೊದಲೇ ಹಲವು ಸಿನಿಮಾಗಳಲ್ಲಿ ಅಭಿನಯಿಸಿರುವ ಸೋನು ಅವರು ಇದೀಗ ‘ಯರ್ರಾಬಿರ್ರಿ’ ಚಿತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ.

“ಯರ್ರಾಬಿರ್ರಿ ಚಿತ್ರದಲ್ಲಿ ನಾನು ಶ್ರೀಮಂತ ಹುಡುಗಿಯ ಪಾತ್ರಕ್ಕೆ ಜೀವ ತುಂಬಲಿದ್ದೇನೆ. ಸೌಮ್ಯ ಸ್ವಭಾವದ ಪಾತ್ರದಲ್ಲಿ ನಾನು ನಟಿಸಲಿದ್ದೇನೆ ಎನ್ನುವ ಸೋನು ‘ಯರ್ರಾಬಿರ್ರಿ’ ಯ ಜೊತೆಗೆ ಇನ್ನು ಕೆಲವು ಚಿತ್ರಗಳಿಗೆ ಸಹಿ ಮಾಡಿದ್ದಾರೆ.

“ಬಾಲ್ಯದಿಂದಲೂ ನನಗೆ ನಟನಾ ರಂಗದತ್ತ ಏನೋ ಒಂದು ರೀತಿಯ ಒಲವು. ನನಗೆ ನಟಿಯಾಗಿ ಗುರುತಿಸಿಕೊಳ್ಳಬೇಕು ಎಂಬ ಮಹಾದಾಸೆ ಇತ್ತು. ಅಷ್ಟೇ ಅಲ್ಲ, ನನ್ನ ಅಜ್ಜಿಯೂ ಕೂಡಾ ನಾನು ನಟಿಯಾಗಿ ದೊಡ್ಡ ಪರದೆ ಮೇಲೆ ಮಿಂಚಬೇಕು ಎಂದು ಬಯಸಿದ್ದರು. ಸಂತಸದ ಸಂಗತಿಯೆಂದರೆ ನನ್ನ ಮತ್ತು ಅಜ್ಜಿಯ ಕನಸು ಏಕಕಾಲಕ್ಕೆ ನನಸಾಗುತ್ತಿದೆ” ಎಂದು ತಾವು ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಸಂಗತಿಯನ್ನು ವಿವರಿಸುತ್ತಾರೆ ಸೋನು.

ಬಿಗ್ ಬಾಸ್ ಮೂಲಕ ಕಿರುತೆರೆಯಲ್ಲಿ ಮನೆಮಾತಾದ ಉತ್ತರಕರ್ನಾಟಕದ ಬೆಡಗಿಯ ಸಿನಿ ಪಯಣಕ್ಕೆ ನಮ್ಮ ಬಾಲ್ಕನಿ ನ್ಯೂಸ್ ಕಡೆಯಿಂದ ಆಲ್ ದಿ ಬೆಸ್ಟ್.

Related image

ಸೋನಾಕ್ಷಿ ಸಿನ್ಹಾ ಮನಸ್ಸು ಕದ್ದ ಆ ಯುವಕ..!

#balkaninews #biggbossseason6 #sonupatil #sonupatilmovies #sonupatilhits #sonupatilfacebook

Tags