ಸುದ್ದಿಗಳು

ಬಿಗ್ ಬಾಸ್ 3 ಸೀಸನ್ ಹೋಸ್ಟಿಂಗ್ ವಿಚಾರವಾಗಿ ಮೌನ ಮುರಿದ ನಟ ವೆಂಕಿ

ಹೈದ್ರಾಬಾದ್, ಜ.13: ತೆಲುಗಿನ ಬಿಗ್ ಬಾಸ್ ಸೀಸನ್ 3 ಇತ್ತೀಚಿನ ದಿನಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ರಿಯಾಲಿಟಿ ಶೋನ ಹೋಸ್ಟ್ ಬಗ್ಗೆಯೆ ಚರ್ಚೆಗಳು ಆರಂಭವಾಗಿದ್ದು, ಈಗಾಗಲೇ ಹಲವರ ಹೆಸರು ಕೇಳಿಬಂದಿದೆ. ಈ ನಡುವೆ ನಟ ವಿಕ್ಟರಿ ವೆಂಕಟೇಶ್ ಹೆಸರು ಕೂಡ ಈ ಪಟ್ಟಿಯಲ್ಲಿ ಕೇಳಿಬಂದಿದ್ದು, ಈ ಬಗ್ಗೆ ಇದುವರೆಗೂ ತುಟಿಕ್ ಪಿಟಕ್ ಎನ್ನದ ವೆಂಕಿ ಕೊನೆಗೂ ಮೌನಮುರಿದಿದ್ದಾರೆ.

ಇತ್ತೀಚೆಗೆ ತಮ್ಮ ಅಭಿನಯದ ಮುಂದಿನ ಚಿತ್ರದ ಪ್ರಮೋಷನ್ ನ ವೇಳೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಗ್ ಬಾಸ್ ಸೀಸನ್ 3 ಕಾರ್ಯಕ್ರಮದ ಹೋಸ್ಟ್ ಆಗಿ ನೀವು ತೆರಳುತ್ತಿದ್ದೀರಿ ಎಂಬ ಮಾತುಗಳು ಕೇಳಿಬರುತ್ತಿದೆ. ಈ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು ಎಂದಾಗ, ರೂಮರ್ ಯಾವಾಗಲೂ ರೂಮರ್ ಆಗಿಯೇ ಇರುತ್ತದೆ ಎಂದಿದ್ದಾರೆ. ಒಂದು ವೇಳೆ ಅವರ ಮಾತು ನಿಜವೇ ಆದರೆ ಬಿಗ್ ಬಾಸ್ ಸೀಸನ್ 3ಯನ್ನು ವೆಂಕಿ ಹೋಸ್ಟ್ ಮಾಡುತ್ತಿಲ್ಲ.

ರಿಯಾಲಿಟಿ ಶೋ ಆಯೋಜಕರಿಂದ ಹಲವು ನಟರಿಗೆ ಆಫರ್

ಅಂದಹಾಗೆ ಬಿಗ್ ಬಾಸ್ ಸೀಸನ್ 3 ಜೂನ್ ತಿಂಗಳಿನಿಂದ ಆರಂಭಿಸಲು ನಿರ್ಧರಿಸಲಾಗಿದ್ದು, ಹೀಗಾಗಿ ರಿಯಾಲಿಟಿ ಗೇಮ್ ಶೋನ ಹೋಸ್ಟ್ ಆಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಇದೀಗ ಕಾರ್ಯಕ್ರಮದ ಆಯೋಜಕರ ಟೆನ್ಷನ್ ಗೆ ಕಾರಣವಾಗಿದೆ.

ಈಗಾಗಲೇ ನಟ ನಾನಿ ತಾನು ಯಾವುದೇ ಕಾರಣಕ್ಕೂ ಮುಂದಿನ ಸೀಸನ್ ಅನ್ನು ಹೋಸ್ಟ್ ಮಾಡುವುದಿಲ್ಲ ಎಂದಿದ್ದರಿಂದ, ಇದೀಗ ಕಾರ್ಯಕ್ರಮದ ನಿರ್ಮಾಪಕರು, ನಟ ವೆಂಕಟೇಶ್, ಚಿರಂಜೀವಿ, ಜೂನಿಯರ್ ಎನ್ ಟಿಆರ್ ಮೊದಲಾದವರನ್ನು ಅಪ್ರೋಚ್ ಮಾಡಿದೆ. ಆದರೆ ಇದೀಗ ತಾನು ಬಿಗ್ ಬಾಸ್ 3 ಕಾರ್ಯಕ್ರಮವನ್ನು ಹೋಸ್ಟ್ ಮಾಡುವುದಿಲ್ಲ.

ರೂಮರ್ ಯಾವಾಗಲೂ ರೂಮರ್ ಆಗಿಯೇ ಇರುತ್ತದೆ ಎನ್ನುವ ಮೂಲಕ ವೆಂಕಿ ಗಾಸಿಪ್ ಗೆ ತೆರೆ ಎಳೆದಿದ್ದಾರೆ. ಈ ನಡುವೆ ಚಿರಂಜೀವಿ ಅವರು ಬಿಗ್ ಬಾಸ್ ಹೋಸ್ಟ್ ಆಗಲಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ಇದ್ಯಾವುದಕ್ಕೂ ಪಕ್ಕಾ ಉತ್ತರ ಸಿಕ್ಕಿಲ್ಲ. ಹೀಗಾಗಿ ಯಾರು ಸೀಸನ್ 3ಯ ಹೋಸ್ಟ್ ಆಗಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

#victoryvenkatesh #victoryvenkateshmovies #biggbossseason3telugu #balkaninews

Tags