ಸುದ್ದಿಗಳು

ಆ್ಯಂಡಿ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ ಕವಿತಾ…!!!!

ಬೆಂಗಳೂರು, ಫೆ.11:

ನಟಿ ಕವಿತಾ ಸದ್ಯ ಆಂಡ್ರ್ಯೂ ಜೈಪಾಲ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ. ಖಾಸಗೀ ಚಾನಲ್‌ ಒಂದರಲ್ಲಿ ನನ್ನ ಬಗ್ಗೆ ಆ್ಯಂಡಿ ಕೆಟ್ಟದಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ಮನೆಯೊಳಗೆ ಇದ್ದಾಗ ಹಾಗೂ ಹೊರಗೆ ಬಂದ ನಂತರವೂ ನನಗೆ ಮಾನಸಿಕವಾಗಿ ಹಿಂಸೆ ಮಾಡಿದ್ದಾರೆ. ಅಷ್ಟೆ ಅಲ್ಲ ಅಸಭ್ಯವಾಗಿ ವರ್ತಿಸಿದ್ದಾರೆಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಆಂಡಿ ವಿರುದ್ಧ ನಟಿ ಆಕ್ರೋಶ

ಬಿಗ್ ಬಾಸ್ ಆರನೇ ಆವೃತ್ತಿಯಲ್ಲಿ ಕವಿತಾ ಹಾಗೂ ಆಂಡಿ ಇಬ್ಬರು ಸ್ಪರ್ಧಿಗಳಾಗಿದ್ದರು. ಈ ಇಬ್ಬರು ಅಭ್ಯರ್ಥಿಗಳು ಕೂಡ ಕೊನೆಯ ವಾರದವರೆಗೂ ಆಟವಾಡಿದ್ದರು. ಆಂಡಿ ಕೊನೆಯ ಹಂತದಲ್ಲಿ ಎಲಿಮಿನೇಟ್ ಆದರೆ, ಕವಿತಾ ಫೈನಲ್‌ ಗೆ ಬಂದು ಎರಡನೇ ರನ್ನರ್ ಅಪ್ ಆಗಿದ್ದರು. ಇದೀಗ ಈ ನಟಿ ಆಂಡಿ ಹಾಗೂ ಕಾರ್ಯಕ್ರಮ ಮೇಲ್ವಿಚಾರಕ ಗುರುರಾಜ್ ಶಣೈ ವಿರುದ್ಧ ಕಿರುಕುಳದ ಮೇಲೆ ದೂರನ್ನು ದಾಖಲಿಸಿಕೊಂಡಿದ್ದಾರೆ.

ನನಗೆ ಆಂಡಿಯಿಂದ ಸಮಸ್ಯೆಯಾಗಿದೆ: ಕವಿತಾ

ಈ ಬಗ್ಗೆ ಮಾತನಾಡಿದ ನಟಿ ಕವಿತಾ, ಆಂಡಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರು. ಶೋನಲ್ಲಿ ಇದ್ದಾಗಲು ಹೀಗೆ ಆಗಿತ್ತು. ಆಗ ನಾನು ಬಿಗ್ ಬಾಸ್ ಬಳಿ ಹೇಳಿಕೊಂಡಿದ್ದೆ. ಕ್ರೀಡಾ ಮನೋಭಾವದಲ್ಲಿ ಇದನ್ನು ನೋಡಿ ಅಂದಿದ್ದಕ್ಕೆ ಸುಮ್ಮನಾಗಿದ್ದೆ. ಆದರೆ ಹೊರಗೆ ಬಂದ ನಂತರವೂ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾರೆ. ಹಾಗಾಗಿ ನಾನು ಕಂಪ್ಲೇಂಟ್ ಕೊಡಲು ಮುಂದಾಗಿದ್ದೇನೆ. ನಾನು ಕಂಪ್ಲೇಟ್ ಕೊಡುವುದಕ್ಕೆ ಮುಂದಾಗಿದ್ದು, ಮುಂದಿನ ಶೋನಲ್ಲಿ ಹೀಗಾಗಬಾರದು ಅಂತಾ ನಾನು ಕಂಪ್ಲೇಂಟ್ ಕೊಡುತ್ತಿದ್ದೇನೆ ಎಂದಿರುವುದು ವರದಿಯಾಗಿದೆ.

ಇದೊಂದು ಲೈಂಗಿಕ ಕಿರುಕುಳ ಎಂದ ಆಯೋಗ ಅಧ್ಯಕ್ಷೆ

ಇನ್ನು ದೂರಿನನ್ವಯ ಮಾತನಾಡಿದ ನಾಗಲಕ್ಷ್ಮಿ ಬಾಯಿ, ಇದೊಂದು ಕಿರುಕುಳ, ಇದನ್ನು ಲೈಂಗಿಕ ಕಿರುಕುಳ ಅಂತನೂ ಎನ್ನಬಹುದು. ಇದೀಗ ದೂರು ದಾಖಲು ಮಾಡಿಕೊಂಡಿದ್ದೇನೆ. ಆ ಮನೆಯಲ್ಲಿ 100 ದಿನ ಏನಾಗಿದೆ ಅನ್ನೋದು ಗೊತ್ತಿಲ್ಲ. ಹಾಗಾಗಿ ದೂರು ದಾಖಲಾಗಿದೆ. ವಿಚಾರಣೆ ಮಾಡುತ್ತೇವೆ ಎಂದರು.

‘ಬೀರ್ ಬಲ್’ ನಲ್ಲಿ ಬಿಗ್ ಬಾಸ್ ಕವಿತಾ ಚಿನ್ನು

#kavithagowda #biggbossseason6kavithagowda #andybiggbossseason6 #balkaninews #biggbossseason6kannada #kavithagowdaandandy

Tags