ಸುದ್ದಿಗಳು

ಜೂನಿಯರ್ ಎನ್ ಟಿಆರ್ ಮತ್ತೆ ಹೋಸ್ಟ್ ಮಾಡಲಿದ್ದಾರಂತೆ ಬಿಗ್ ಬಾಸ್ 3

ಹೈದ್ರಾಬಾದ್, ಜ.12: ಎರಡು ವರ್ಷಗಳ ಹಿಂದಿನ ಮಾತು. ಪ್ರಸಿದ್ಧ ರಿಯಾಲಿಟಿ ಗೇಮ್ ಶೋ ಬಿಗ್ ಬಾಸ್ ನ್ನು ಜೂನಿಯರ್ ಎನ್ ಟಿಆರ್ ನಡೆಸಿಕೊಡುತ್ತಿದ್ದರು. ಅವರ ನಿರೂಪಣೆ ಶೈಲಿ, ಮಾತು, ಹಾಸ್ಯ ಎಲ್ಲವೂ ಪ್ರೇಕ್ಷಕರಿಗೆ ಹಾಗೂ ಸ್ಪರ್ಧಿಗಳಿಗೆ ಇಷ್ಟವಾಗಿತ್ತು. ಆದರೆ ಬಿಗ್ ಬಾಸ್ 2 ಅನ್ನು ಎನ್ ಟಿಆರ್ ನಡೆಸಿಕೊಡಲಿಲ್ಲ. ಬದಲಿಗೆ. ಬಿಗ್ ಬಾಸ್ 2 ಸೀಸನ್ ನಿರೂಪಕಾರಾಗಿ ನಾನಿ ಅಡಿಯಿಟ್ಟರು. ಬ್ಯುಸಿ ಶೆಡ್ಯೂಲ್, ಹಾಗೂ ಮನೆಗೆ ಹೊಸ ಅತಿಥಿಯ (ಎನ್ ಟಿಆರ್ ಮಗ) ಆಗಮನವಾಗಿದ್ದರಿಂದ ಜೂನಿಯರ್ ಎನ್ ಟಿಆರ್ ಹೆಚ್ಚಿನ ಸಮಯವನ್ನು ತಮ್ಮ ಮಗನೊಂದಿಗೆ ಕಳೆಯುವ ಸಲುವಾಗಿ ಹೆಚ್ಚಿನಜವಾಬ್ದಾರಿಯನ್ನು ಹೊತ್ತುಕೊಳ್ಳಲಿಲ್ಲ. ಆದರೆ ಸದ್ಯಕ್ಕೆ ಹರಿದಾಡುತ್ತಿರುವ ಮಾಹಿತಿಯಂತೆ ಬಿಗ್ ಬಾಸ್ ಮುಂದಿನ ಆವೃತ್ತಿಯನ್ನು ಮತ್ತೆ ಜೂನಿಯರ್ ಎನ್ ಟಿಆರ್ ನಡೆಸಿಕೊಡಲಿದ್ದಾರಂತೆ..

Related image

ನಾನು ಮುಂದಿನ ಸಂಚಿಕೆ ನಡೆಸಿಕೊಡೊಲ್ಲ ಅಂದ್ರು ನಾನಿ

ಸದ್ಯಕ್ಕೆ ನಾನಿ ಬಿಗ್ ಬಾಸ್ 2 ನಡೆಸಿಕೊಡುತ್ತಿದ್ದು, ಮುಂದಿನ ಸಂಚಿಕೆಯಲ್ಲಿ ತಾನು ಯಾವುದೇ ಕಾರಣಕ್ಕೂ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ, ಕಾರ್ಯಕ್ರಮ ನಡೆಸಿಕೊಡಲು ನನ್ನಿಂದ ಸಾಧ್ಯವಿಲ್ಲ ಎಂಬುದನ್ನು ಈಗಾಗಲೇ ನಾನಿ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಗ್ ಬಾಸ್ ಸೀಸನ್ 3 ಯನ್ನು ನಟ ಚಿರಂಜೀವಿ ನಡೆಸಿಕೊಡಲಿದ್ದಾರೆ ಎಂಬ ಮಾತು ಹರಿದಾಡಿತ್ತು. ಇದಾದ ಬಳಿಕ ವೆಂಕಟೇಶ್ ಮಾತು ಕೇಳಿಬಂತು. ಇದೀಗ ಮತ್ತೆ ಜೂಎನ್ ಟಿಆರ್ ಹೆಸರು ಕೇಳಿಬರುತ್ತಿದ್ದು, ಒಂದು ಮೂಲಗಳ ಪ್ರಕಾರ, ಮುಂದಿನ ಸೀಸನ್ ನನ್ನು ಜೂನಿಯರ್ ಎನ್ ಟಿಆರ್ ನಡೆಸಿಕೊಡಲಿದ್ದಾರಂತೆ. ಬಿಗ್ ಬಾಸ್ ಟೀಮ್ ಈಗಾಗಲೇ ಎನ್ ಟಿಆರ್ ಅವರ ಡೇಟ್ಸ್ ಕುರಿತಂತೆ ಮಾತುಕತೆ ಆರಂಭಿಸಿದ್ದಾರಂತೆ. ಸದ್ಯಕ್ಕೆ ಎನ್ ಟಿಆರ್ ರಾಜಮೌಳಿ ಅವರ ಆರ್ ಆರ್ ಆರ್ ಚಿತ್ರದಲ್ಲಿ ಬ್ಯೂಸಿಯಾಗಿದ್ದು, ಚಿತ್ರದ ಅಧಿಕೃತ ಹೆಸರು ಈ ತಿಂಗಳಲ್ಲಿ ಬಹಿರಂಗವಾಗಲಿದೆ.

Related image

#tollywood #tollywoodmovies #juniorntr #biggbosstelugu #biggbossteluguseason3 #balkaninews

Tags