ಸುದ್ದಿಗಳು

ಮತ್ತೆಂದೂ ಬಿಗ್ ಬಾಸ್ ಕಡೆಗೆ ಹೋಗಲ್ಲಾ ಅಂದ್ರು ಡಾಲಿ ಡಾರ್ಲಿಂಗ್

ಸಧ್ಯ ಕನ್ನಡ ಚಿತ್ರರಂಗದಲ್ಲಿ ಟಗರು ಓಟ ಜೋರಾಗಿದೆ. ಈ ಚಿತ್ರದಲ್ಲಿ ನಟಿಸಿದ ಕಲಾವಿದರಿಗೆಲ್ಲರಿಗೂ ಬಹು ಬೇಡಿಕೆ ಬಂದಿದೆ. ಅದರಂತೆ ಅನಿತಾ ಭಟ್ ಅವರಿಗೂ ಇದೀಗ ಸಿಕ್ಕಾಪಟ್ಟೆ ಡಿಮ್ಯಾಂಡ್ ಸೃಷ್ಟಿಯಾಗಿದೆ.

ಅನಿತಾ ಭಟ್ ಅಂದ ಕೂಡಲೇ ಕಣ್ಮುಂದೆ ಬರುವುದು ಗ್ಲಾಮರಸ್ ಹುಡುಗಿ, ಸದಾ ನಗು ಮುಖದ ಹಾಲು ಬಿಳುಪಿನ ಮಂದಸ್ಮಿತೆಯ ಮುಖ. ಮೊದಲು ಇವರನ್ನು ಸೈಕೋ ಅನಿತಾ ಅಂತಿದ್ರು. ಇದೀಗ ಡಾಲಿ ಡಾರ್ಲಿಂಗ್ ಅಂತ ಫೇಮಸ್ ಆಗಿದ್ದಾರೆ. ಇತ್ತಿಚೆಗೆ ತೆರೆ ಕಂಡ ‘ಡೇಸ್ ಆಫ್ ಬೋರಾಪುರ” ಚಿತ್ರದಲ್ಲಿಯೂ ಡಿಗ್ಲಾಮ್ ಪಾತ್ರದಲ್ಲಿ ನೊಡುಗರಿಗೆ ಹುಬ್ಬೇರುವಂತೆ ಮಾಡಿದ್ದರು.

ಇದಕ್ಕೂ ಮೊದಲು ಕನ್ನಡದ ಬಿಗ್ ಬಾಸ್ ಗೂ ಹೋಗಿ ಬಮದಿದ್ದರು. ಈ ಬಗ್ಗೆ ಮರುಕ ಪಡುವ ಇವರು ಮತ್ತೆ ಬಿಗ್ ಬಾಸ್ ನಲ್ಲಿ ಭಾಗವಹಿಸಲು ಅವಕಾಶ ಬಂದರೆ ಮತ್ತೆಂದೂ ಆ ಕಡೆ ಮುಖ ಹಾಕುವುದಿಲ್ಲ ಎನ್ನುತ್ತಾರೆ. ಅದಕ್ಕೆ ಕಾರಣವೂ ಇದೆ.
ಬಿಗ್ ಬಾಸ್ ಶುರುವಾಗುವ ಮುಂಚೆ ಎ.ವಿ ಪೋಟೋ ಶೂಟ್ ಅಂತ ಮಾಡ್ತಾರೆ. ಅಲ್ಲಿ ಅನಿತಾ ಅವರಿಗೆ ಕಿರಿಕಿರಿ ಶುರುವಾಗಿದೆ. ಎ.ವಿ ಪೋಟೋನ ಇಂಟ್ರೂಡಕ್ಷನ್ ಗೆ ಸ್ವಿಮಿಂಗ್ ಫೂಲ್ ಗೆ ಇಳಿಸಿದರಂತೆ. ಅದು ನಾರ್ಮಲ್ ಶೂಟಿಂಗ್ ಅಷ್ಟೇ ಅಂತಂದುಕೊಂಡಿದ್ದ ಅನಿತಾವರಿಗೆ ಶಾಕ್ ಆಯಿತು. ಸ್ವಿಮಿಂಗ್ ಫೂಲ್ ನ ಕ್ಲೋರಿನ್ ವಾಟರ್ ಕುಡಿದು, ಗಂಟಲು ಇನ್ ಪೆಕ್ಷನ್ ಆಗಿ 12 ದಿನ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು. 13 ನೇ ದಿನ ಡಿಸ್ಚಾರ್ಜ್ ಆದರು.

ಇದಕ್ಕೂ ಮೊದಲು ಬಿಗ್ ಬಾಸ್ ನ ಕಾರ್ಯಕ್ರಮವನ್ನು ನೋಡಿರದಿದ್ದ ಅನಿತಾ ಅವರಿಗೆ ಆಟ ಹೇಗೆ ಆಡ್ಬೇಕು ಅನ್ನುವ ಗೊಂದಲ ಉಂಟಾಗಿ, ಜೊತೆಗೆ ಹುಷಾರಿಲ್ಲದ್ದೂ ಸಹ ಜೊತೆಯಾಗಿ ಒಂದೇ ವಾರಕ್ಕೇ ನಾಮಿನೇಟ್ ಆಗಿ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಬಂದರು.

ಆರೋಗ್ಯದ ನೆಪವನ್ನೇ ನೆಪ ಇಟ್ಟುಕೊಂಡು , ಉಳಿದ ಸದಸ್ಯರು ನನ್ನನ್ನು ನಾಮಿನೇಟ್ ಮಾಡಿ ಬಿಗ್ ಬಾಸ್ ಕಾರ್ಯಕ್ರಮದಿಂದ ಹೊರ ಕಳಿಸಿಬಿಟ್ಟಿದ್ದರು. ಹೀಗಾಗಿ ನಾನು ಮತ್ತೆಂದೂ ಬಿಗ ಬಾಸ್ ಮನೆಕಡೆಗೆ ಹೋಗುವುದಿಲ್ಲ ಎಂದು ಹೇಳುವ ಅನಿತಾ, ಸದ್ಯ, ಪ್ರಭುತ್ವ, ಡಿಎನ್ಎ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

Tags