ಚಿತ್ರ ವಿಮರ್ಶೆಗಳುಸುದ್ದಿಗಳು

ಹಳ್ಳಿ ಹುಡುಗರ ‘ಬಿಲ್ಗೇಟ್ಸ್’ ಕನಸಿನ ಕಾಮಿಡಿ ಕಹಾನಿ..!!!

ಚಿತ್ರಗುಪ್ತ ಪಾತ್ರ ಸಖತ್ ಇಷ್ಟವಾಗುತ್ತೆ. ಚಿತ್ರದ ಟೈಟಲ್ಗೆ ತಕ್ಕ ಹಾಗೆ ಅದ್ಧೂರಿಯಾಗಿ ಸಿನಿಮಾ ಮಾಡಲಾಗಿದೆ.

ಚಿತ್ರ: ಬಿಲ್ ಗೇಟ್ಸ್

Rating: 3.5 / 5

ಪ್ರತಿಯೊಬ್ಬರಿಗೂ ತಾನು ಬಿಲ್ ಗೇಟ್ಸ್ನಂತೆ ಶ್ರೀಮಂತನಾಗಬೇಕೆಂಬ ಕನಸು ಇದ್ದೇ ಇರುತ್ತೆ. ಅದಕ್ಕಾಗಿ ಹಲವರು ಹಲವಾರು ರೀತಿಯ ಸರ್ಕಸ್ ಮಾಡುತ್ತಿರುತ್ತಾರೆ. ಹೀಗೆ ಶ್ರೀಮಂತರಾಗಬೇಕೆಂದು ಸರ್ಕಸ್ ಮಾಡುವವರ ಸ್ಟೋರಿಯೇ ‘ಬಿಲ್ಗೇಟ್ಸ್’. ಚಿಕ್ಕಣ್ಣ ಹಾಗೂ ಶಿಶಿರ್ ಇಬ್ಬರು ಹಳ್ಳಿಯ ಮುಗ್ಧ ಹುಡುಗರು ಬಿಲ್ ಗೇಟ್ಸ್ನಂತೆ ಶ್ರೀಮಂತನಾಗಬೇಕು ಎಂದು ಸಿಟಿ ಕಡೆ ಮುಖ ಮಾಡೋ ಇಬ್ರು ಯಾವೆಲ್ಲಾ ರೀತಿ ಸಮಸ್ಯೆ ಎದುರಿಸುತ್ತಾರೆ. ಆ ಸಮಸ್ಯೆಗಳನ್ನೆಲ್ಲ ಎದುರಿಸಿ ಬಿಲ್ಗೇಟ್ಸ್ನಂತೆ ಶ್ರೀಮಂತರಾಗುತ್ತಾರಾ ಅನ್ನೋ ಎಳೆ ಇಟ್ಟುಕೊಂಡು ಹೆಣೆದ ಚಿತ್ರವೇ ‘ಬಿಲ್ಗೇಟ್ಸ್’. ಇದನ್ನು ಪ್ರೇಕ್ಷಕರಿಗೆ ಕಾಮಿಡಿ ಟಾನಿಕ್ ನೀಡೋ ಮುಖಾಂತರ ನಗಿಸುತ್ತಾ ತೆರೆ ಮೇಲೆ ಪ್ರಸ್ತುತ ಪಡಿಸಿದ್ದಾರೆ ನಿರ್ದೇಶಕ ಶ್ರೀನಿವಾಸ್.

ಚಿತ್ರದಲ್ಲಿ ಯಮಲೋಕದ ದೃಶ್ಯವಿದ್ದು, 20 ನಿಮಿಷಗಳ ಕಾಲ ಬರುವ ಯಮಧರ್ಮ, ಚಿತ್ರಗುಪ್ತ ಪಾತ್ರ ಸಖತ್ ಇಷ್ಟವಾಗುತ್ತೆ. ಚಿತ್ರದ ಟೈಟಲ್ಗೆ ತಕ್ಕ ಹಾಗೆ ಅದ್ಧೂರಿಯಾಗಿ ಸಿನಿಮಾ ಮಾಡಲಾಗಿದೆ. ಅಪ್ಪಟ ಕಾಮಿಡಿ ಮೂಲಕ ಒಂದಿಷ್ಟು ಸಾಮಾಜಿಕ ಮೌಲ್ಯವನ್ನು ಹೇಳುತ್ತಾ ಬಿಲ್ ಗೇಟ್ಸ್ ಚಿತ್ರ ಮಂನರಂಜನೆ ನೀಡುವಲ್ಲಿ ಯಶಸ್ವಿಯಾಗಿದ್ದು, ಪ್ರೇಕ್ಷಕರ ಮನಸ್ಸಿಗೆ ಹತ್ತಿರವಾಗಿದೆ.

 

ನಿರ್ದೇಶನ: ಶ್ರೀನಿವಾಸ

ಸಂಗೀತ: ನೋಬಿಲ್ ಪೌಲ್

ಛಾಯಾಗ್ರಹಣ: ತಿಲಕ್

ತಾರಾಬಳಗ: ಚಿಕ್ಕಣ್ಣ, ಶಿಶಿರ್ ಶಾಸ್ತ್ರಿ, ಅಕ್ಷರ ರೆಡ್ಡಿ, ರಶ್ಮಿಕಾ ರೋಜಾ, ಕುರಿ ಪ್ರತಾಪ್, ಇತರರು.

#Movie Review #Kannada MOvieReview #Bilgates #KannadaTrending

Tags