ಸುದ್ದಿಗಳು

ಬಿಲ್ ಗೇಟ್ಸ್ ಚಿತ್ರದ ಟ್ರೈಲರ್ ರಿಲೀಸ್..!!

ಈ ಬಿಲ್ಗೇಟ್ಸ್ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸೋದು ಗ್ಯಾರಂಟಿ...

ಟೈಟಲ್ ಮೂಲಕ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಮೂಡಿಸಿರುವ ಬಿಲ್ ಗೆಟ್ಸ್ ಚಿತ್ರ ಫನ್ ಫಿಲ್ಲಡ್ ಟ್ರೈಲರ್ ರಿಲೀಸ್ ಆಗಿದೆ. ಚಿಕ್ಕಣ್ಣಶಿಶಿರ್ ಶಾಸ್ತ್ರಿ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಈ ಹಿಂದೆ ಬಿಡುಗಡೆಯಾದ ಚಿತ್ರದ ಟೀಸರ್ನಲ್ಲಿ ಚಿಕ್ಕಣ್ಣನ ಯಮನ ಅವತಾರಕಂಡು ನಗೆ ಬೀರಿದ್ದ ಸಿನಿ ಪ್ರೇಕ್ಷಕರು ಟ್ರೈಲರ್ ನೋಡಿ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದಾರೆ.ಕಾಮಿಡಿ ಎಂಟಟೈನ್ಮೆಂಟ್ ಚಿತ್ರಕ್ಕೆ ಹಾರಾರ್ ಟಚ್ ಕೂಡ ನೀಡಲಾಗಿದ್ದು ಕುತೂಹಲ ಉಂಟು ಮಾಡಿದೆ.

ಶ್ರೀ ಪಾಂಚಜನ್ಯ ಸಿನಿ ಕ್ರಿಯೇಷನ್ ಬ್ಯಾನರ್ನಡಿ ಚಿತ್ರ ನಿರ್ಮಾಣವಾಗಿದ್ದು ಶ್ರೀನಿವಾಸ.ಸಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ನೊಬಿಲ್ ಪೌಲ್ ಸಂಗೀತ ನಿರ್ದೇಶನ ಚಿತ್ರಕ್ಕಿದ್ದು ಕುರಿ ಪ್ರತಾಪ್, ಬ್ಯಾಂಕ್ ಜನಾರ್ದನ್, ವಿ.ಮನೋಹರ್, ಗಿರಿ ಚಿತ್ರದ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿಅಕ್ಷರ ರೆಡ್ಡಿ, ರಶ್ಮಿಕ ರೋಜಾ ನಾಯಕಿಯರಾಗಿನಟಿಸಿದ್ದಾರೆ.ಫೆಬ್ರವರಿ 7ಕ್ಕೆ ಬಿಲ್ ಗೇಟ್ಸ್ ಚಿತ್ರ ತೆರೆಗೆ ಬರಲು ರೆಡಿಯಾಗಿದ್ದು ಭರಪೂರ ಮನರಂಜನೆ ನೀಡೋದಂತೂ ಗ್ಯಾರಂಟಿ.

#Bilgates #KannadaMovie #Sandalwood #Balkani #KannadaCinema #Chikkanna #NewMovie

Tags