ಸುದ್ದಿಗಳು

ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ‘ಬಿಲ್ ಗೆಟ್ಸ್’..!

ಇಷ್ಟೆಲ್ಲಾ ಖ್ಯಾತಿ ಪಡೆದಿರುವ ಕಾಮಿಡಿ ಸ್ಟಾರ್ ಚಿಕ್ಕಣ್ಣ ಇದ್ದಕ್ಕಿದ್ದ ಹಾಗೇ 'ಬಿಲ್ ಗೆಟ್ಸ್' ಆಗಿಬಿಟ್ಟಿದ್ದಾರೆ.

ಚಿಕ್ಕಣ್ಣ ಅಂದ್ರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರ ಕಾಮಿಡಿಯನ್ನ ಮಿಸ್ ಮಾಡ್ದೆ ನೋಡುವವರಿದ್ದಾರೆ. ಅವರಿಗೆ ಆದಂತ ದೊಡ್ಡ ಅಭಿಮಾನಿ ಬಳಗವಿದೆ. ತಮ್ಮ ವಿಭಿನ್ನ ಮ್ಯಾನರಿಸಂನಿಂದಲೇ ಇವತ್ತು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಅದರಂತೆ ದೊಡ್ಡ ದೊಡ್ಡ ಸ್ಟಾರ್ ಗಳ ಜೊತೆ ಚಿಕ್ಕಣ್ಣ ಇರಲೇಬೇಕೆನ್ನುವ ಸಮಯ ಇದಾಗಿದೆ. ಇಷ್ಟೆಲ್ಲಾ ಖ್ಯಾತಿ ಪಡೆದಿರುವ ಕಾಮಿಡಿ ಸ್ಟಾರ್ ಚಿಕ್ಕಣ್ಣ ಇದ್ದಕ್ಕಿದ್ದ ಹಾಗೇ ‘ಬಿಲ್ ಗೆಟ್ಸ್’ ಆಗಿಬಿಟ್ಟಿದ್ದಾರೆ.

Image result for bill gates kannada movie"

‘ಬಿಲ್ ಗೆಟ್ಸ್’ ಆಗೋದ್ರಾ, ಅದೇಗೆ ಎಂಬೆಲ್ಲಾ ಪ್ರಶ್ನೆಗಳನ್ನ ತಲೆಯಲ್ಲಿ ಓಡಾಡೋದಕ್ಕೆ ಬಿಡಬೇಡಿ. ಚಿಕ್ಕಣ್ಣ ‘ಬಿಲ್ ಗೆಟ್ಸ್’ ಎಂಬ ಸಿನಿಮಾ ಮೂಲಕ ರಂಜಿಸಲು ಸಿದ್ಧವಾಗಿದ್ದಾರೆ. ಈ ಸಿನಿಮಾದಲ್ಲಿ ಚಿಕ್ಕಣ್ಣ ಲೀಡ್ ರೋಲ್ ನಲ್ಲಿ ಮಾಡಿದ್ದಾರೆ. ಇಷ್ಟು ದಿನಗಳಲ್ಲಿ ಮಾಡಿರುವ ಪಾತ್ರಗಳಿಗಿಂತ ವಿಭಿನ್ನವಾದ ಪಾತ್ರದಲ್ಲಿ ಚಿಕ್ಕಣ್ಣ ಕಾಣಿಸಿಕೊಂಡಿದ್ದಾರೆ. ಚಿತ್ರೀಕರಣದ ಸ್ಡಿಲ್ ಗಳು ಎಲ್ಲೆಡೆ ವೈರಲ್ ಆಗಿದ್ದು, ಚಿಕ್ಕಣ್ಣನ ವೇಷಭೂಷಣಕ್ಕೆ ಜನ ಫಿದಾ ಆಗಿದ್ದಾರೆ.

Image result for bill gates kannada movie"

ಶ್ರೀನಿವಾಸ್ ನಿರ್ದೇಶನದಲ್ಲಿ ಚಿಕ್ಕಣ್ಣ ಮತ್ತು ಶಿಶಿರ್ ಜೊತೆಯಾಗಿ ನಟಿಸಿರೋ ಬಿಲ್ ಗೇಟ್ಸ್ ಸಿನಿಮಾ ಪೋಸ್ಟರ್ನಿಂದಾಗಿಯೇ ದೊಡ್ಡ ಹೈಪ್ ಸೃಷ್ಟಿಸಿತ್ತು. ಕಾಮಿಡಿ ಕಥಾ ಹಂದರ ಹೊಂದಿರೋ ಸಿನಿಮಾ ಇದಾಗಿದೆ. ಸದ್ಯ ಕಾಮಿಡಿ ಕಿಂಗ್ ಚಿಕ್ಕಣ್ಣನ ಹೊಸ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಶುಭಹಾರೈಸಿದ್ದಾರೆ.

Image result for bill gates kannada movie"

ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜರ್ನಾರ್ಧನ್, ವಿ. ಮನೋಹರ್ ಸೇರಿದಂತೆ ಬಹುತೇಕರು ತಾರಾಗಣದಲ್ಲಿದ್ದಾರೆ. ಶ್ರೀ ಪಾಂಚಜನ್ಯ ಸಿನಿ ಕ್ರಿಯೆಷನ್ಸ್ ಅಡಿಯಲ್ಲಿ ಸ್ನೇಹಿತರೇ ಸೇರಿ ನಿರ್ಮಿಸಿರುವ ‘ಬಿಲ್ ಗೇಟ್ಸ್’ ಸಿನಿಮಾವನ್ನು ಶ್ರೀನಿವಾಸ್ ಮಂಡ್ಯ ನಿರ್ದೇಶಿಸಿದ್ದಾರೆ.

ಜಂಟಲ್ ಮ್ಯಾನ್’ ಸೆಟ್ ನಲ್ಲಿ ಇಬ್ಬರು ನಿರ್ದೇಶಕರು: ಬ್ರೇಕ್ ಸಿಗುವ ನಿರೀಕ್ಷೆಯಲ್ಲಿ ಪ್ರಜ್ವಲ್, ನಿಶ್ವಿಕಾ..!

#Balkaninewskannada #chikkanna #comedyactor #billgetes #srinivas #shishira #challengingstar #darshan #kuripratap

Tags