ಸುದ್ದಿಗಳು

ಸಾಲು ಸಾಲು ಸಿನಿಮಾದಲ್ಲಿ ನಟಿಸಿದ ಕಾಮಿಡಿ ಸ್ಟಾರ್ ಚಿಕ್ಕಣ್ಣ ಇದೀಗ ‘ಬಿಲ್ ಗೆಟ್ಸ್’..!

ಶಿಶಿರ್ ಬಿಲ್ ಆದ್ರೆ ಚಿಕ್ಕಣ್ಣ ಗೆಟ್ಸ್ ಅಂತೆ. ಈ ಹೆಸರೇ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದೆ.

ಸ್ಯಾಂಡಲ್ವುಡ್ನಲ್ಲಿ ತಮ್ಮ ಕಾಮಿಡಿಯಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದವರಲ್ಲಿ ಚಿಕ್ಕಣ್ಣ ಕೂಡ ಒಬ್ರು. ತಮ್ಮ ವಿಭಿನ್ನ ಮ್ಯಾನರಿಸಂ ಕ್ಯಾರೆಕ್ಟರ್ನಿಂದಾಗಿಯೇ ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸೋ ಅವಕಾಶಗಳನ್ನು ಚಿಕ್ಕಣ್ಣ ಗಿಟ್ಟಿಸಿಕೊಂಡಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿ ಚಿಕ್ಕಣ್ಣ ‘ಬಿಲ್ ಗೇಟ್ಸ್’ ಆಗಿದ್ದಾರೆ.
Image result for bill gates kannada movie"

ಸಿನಿಮಾದಲ್ಲಿ ಸೋಷಿಯಲ್ ಮೆಸೇಜ್ ಒಂದನ್ನ ಕ್ಯಾರಿ ಮಾಡಲಾಗಿದೆ. ಅದನ್ನ ಮನರಂಜನೆಯ ಮೂಲಕ ಜನರಿಗೆ ಉಣಬಡಿಸುವ ಪ್ರಯತ್ನವೇ ಈ ‘ಬಿಲ್ ಗೆಟ್ಸ್’. ಬಿಲ್ ಗೆಟ್ಸ್ ಅಂದ್ರೆ ನಮ್ಮ ಥಿಂಕಿಂಗ್ ಬೇರೆ ಕಡೆಯೇ ಹೋಗುತ್ತೆ ಅಲ್ವಾ. ಆದ್ರೆ ಆ ಬಿಲ್ ಗೇಟ್ಸ್ ಗೂ ಈ ‘ಬಿಲ್ ಗೆಟ್ಸ್’ ಗೂ ಯಾವುದೇ ಸಂಬಂಧ ಇಲ್ಲ. ಇದ್ರಲ್ಲಿ ಶಿಶಿರ್ ಮತ್ತು ಚಿಕ್ಕಣ್ಣ ನಟಿಸಿದ್ದಾರೆ. ಶಿಶಿರ್ ಬಿಲ್ ಆದ್ರೆ ಚಿಕ್ಕಣ್ಣ ಗೆಟ್ಸ್ ಅಂತೆ. ಈ ಹೆಸರೇ ಸಿಕ್ಕಾಪಟ್ಟೆ ಕುತೂಹಲಕ್ಕೆ ಕಾರಣವಾಗಿದೆ. ಸಿನಿಮಾದಲ್ಲಿ ಚಿಕ್ಕಣ್ಣ ಯಮನಾಗಿರುವುದು ನೋಡುಗರಿಗೆ ಮತ್ತಷ್ಟು ಮನರಂಜನೆ ನೀಡಲಿದೆ.

Image result for bill gates kannada movie"

ಈ ಸಿನಿಮಾವನ್ನ ಸ್ನೇಹಿತರೇ ಸೇರಿಕೊಂಡು ನಿರ್ಮಾಣ ಮಾಡಿದ್ದಾರೆ. ಒಟ್ಟು 11 ಜನ ನಿರ್ಮಾಪಕರು ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಈಗಾಗಲೆ ಸ್ಟಾರ್ ಗಳು ಈ ಸಿನಿಮಾವನ್ನ ಒಪ್ಪಿಕೊಂಡಿದ್ದಾರೆ. ಬಿಲ್ ಗೆಟ್ಸ್’ ಸಿನಿಮಾದ ಸಿಜಿ ವರ್ಕ್ ನೋಡಿರುವ ನಟ ರವಿಚಂದ್ರನ್ ಚಿತ್ರತಂಡದ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಇತ್ತ ನಟ ದರ್ಶನ್ ಸಹ ಸಿನಿಮಾದ ಟೀಸರ್ ನೋಡಿ ಇಷ್ಟ ಪಟ್ಟಿದ್ದಾರೆ. ಈ ರೀತಿ ಸೂಪರ್ ಸ್ಟಾರ್ ಗಳ ಬೆಂಬಲ ಸಿನಿಮಾಗೆ ಸಿಕ್ಕಿದೆ.

Image result for bill gates kannada movie"

ಅಕ್ಷರಾ ಮತ್ತು ರೋಜಾ ಸಿನಿಮಾದ ನಾಯಕಿಯರಾಗಿದ್ದಾರೆ. ‘ಮಜಾ ಟಾಕೀಸ್’ ಕಾರ್ಯಕ್ರಮ ಹಾಗೂ ‘ರಾಬರ್ಟ್’ ಚಿತ್ರದ ಸಂಭಾಷಣೆಗಾರ ರಾಜಶೇಖರ್ ಈ ಸಿನಿಮಾದ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಿವಾಸ್ ನಿರ್ದೇಶನ ಮಾಡಿದ್ದು, ಕುರಿ ಪ್ರತಾಪ್, ರಾಜಾಹುಲಿ ಗಿರಿ, ಬ್ಯಾಂಕ್ ಜರ್ನಾರ್ಧನ್, ವಿ ಮನೋಹರ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಜಂಟಲ್ ಮ್ಯಾನ್’ ಸೆಟ್ ನಲ್ಲಿ ಇಬ್ಬರು ನಿರ್ದೇಶಕರು: ಬ್ರೇಕ್ ಸಿಗುವ ನಿರೀಕ್ಷೆಯಲ್ಲಿ ಪ್ರಜ್ವಲ್, ನಿಶ್ವಿಕಾ..!

#Balkaninewskannada #chikkanna #comedyactor #billgetes #srinivas #shishira #challengingstar #darshan #kuripratap

Tags