ಸುದ್ದಿಗಳು

ಪ್ರಾನ್ಸ್ ಫಿಲಮ್ ಫೆಸ್ಟಿವಲ್ ನಲ್ಲಿ ಪ್ರಶಸ್ತಿ ಬಾಚಿಕೊಳ್ಳುತ್ತಾ ಕನ್ನಡದ ‘ಬಿಂಬ’

ನಾಟಕಕಾರ ಮತ್ತು ಸಾಹಿತಿ ಸಂಸ ಅವರ ಬದುಕಿನ ಚಿತ್ರಣ ಸಿನಿಮಾ

ಬೆಂಗಳೂರು.ಮಾ.18: ಶ್ರೀನಿವಾಸ್ ಪ್ರಭು ನಟನೆಯ ‘ಬಿಂಬ.. ಆ ತೊಂಭತ್ತು ನಿಮಿಷಗಳು’ ಚಿತ್ರವು ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿದೆ. ವಿಶೇಷವೆಂದರೆ ಈ ಚಿತ್ರದಲ್ಲಿ ಶ್ರೀನಿವಾಸ್ ಒಬ್ಬರೇ ನಟಿಸಿದ್ದು, ಇವರೊಂದಿಗೆ ಜಿ ಮೂರ್ತಿ ನಿರ್ದೇಶನ ಮಾಡಿದ್ದಾರೆ.

ಚಿತ್ರದಲ್ಲಿ ಸಂಸರ ಪಾತ್ರವನ್ನು ಶ್ರೀನಿವಾಸ್ ಪ್ರಭು ನಿರ್ವಹಿಸಿದ್ದು, ಇದೊಂದು ನಾಟಕಕಾರ ಮತ್ತು ಸಾಹಿತಿ ಸಂಸ ಅವರ ಬದುಕಿನ ಚಿತ್ರಣ ಸಿನಿಮಾವಾಗಿದೆ. ಚಿತ್ರದಲ್ಲಿ ಸಂಸರು ಆತ್ಮಹತ್ಯೆಗೆ ಮುನ್ನ ಒಂದಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾರೆ.

ಸಂಸರು ಚಿತ್ರದಲ್ಲಿ ಕನ್ನಡಿ ಮುಂದೆ ನಿಂತು ಸಂಸರು ಸ್ವಗತದಲ್ಲಿ ಒಂದಷ್ಟು ಮಾತನಾಡಿಕೊಳ್ಳುತ್ತಾರೆ. ಅದನ್ನೇ ಇಲ್ಲಿ ಒಂದೇ ಶಾಟ್, ಒಂದೇ ಸ್ಥಳದಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಪಾತ್ರಗಳು ಕಾಣಿಸದೇ ತೆರೆಯ ಮೇಲೆ ಉಳಿದವರ ಮಾತುಗಳು ಮಾತ್ರ ಕೇಳಿ ಬರುತ್ತವೆ.

ಚಿತ್ರಕ್ಕೆ ಶ್ರೀನಿವಾಸ್ ಪ್ರಭು ಅವರೇ ಕೇಂದ್ರ ಬಿಂದುವಾಗಿದ್ದು, ಇಡೀ ಚಿತ್ರದಲ್ಲಿ ಅವರೊಬ್ಬರೇ ಕಲಾವಿದರಾಗಿದ್ದಾರೆ. ಇದು ಸ್ವಾತಂತ್ರ್ಯ ಪೂರ್ವದಲ್ಲಿದ್ದಂತಹ ಕನ್ನಡದ ಶ್ರೇಷ್ಟ ನಾಟಕಕಾರ, ಸಾಹಿತಿಗಳಾದ ‘ಸಂಸ’ರ ಬದುಕಿನ ಚಿತ್ರಣವನ್ನು ಒಳಗೊಂಡಿದೆ. ಇವರ ಪೂರ್ಣ ಹೆಸರು ಸಾಮಿ ವೆಂಕಟಾದ್ರಿ ಐಯ್ಯರ್, ಸಂಸರದ್ದೇ ಇಲ್ಲಿ ಗಮನಾರ್ಹ ಪಾತ್ರವಾಗಿದೆ.

ಅಂದ ಹಾಗೆ ಮೂಲ ನಾಟಕವನ್ನು ಇಲ್ಲಿ ಯಥಾವತ್ ಆಗಿ ಮಾಡದೆ ಚಿತ್ರಕ್ಕಾಗಿ ಕೆಲವು ತಿದ್ದುಪಡಿ ಮಾಡಲಾಗಿದೆ. 90 ನಿಮಿಷದಲ್ಲಿ ಸಂಸರ ಬದುಕು ಅನಾವರಣಗೊಳಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ಚಿತ್ರಕ್ಕೆ ಪಿ.ಕೆ.ಎಚ್. ದಾಸ್ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಹಿನ್ನೆಲೆ ಸಂಗೀತವಿದೆ.

ಇನ್ನು ಈ ಸಿನಿಮಾ ಇತ್ತೀಚೆಗಷ್ಟೇ ರಾಜಸ್ಥಾನ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ‘ಶ್ರೇಷ್ಠ ಪ್ರಾದೇಶಿಕ ಚಿತ್ರ’ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಇದೀಗ ಮತ್ತೆ ಪ್ರಶಸ್ತಿ ಬಾಚಿಕೊಳ್ಳಲು ಫ್ರಾನ್ಸ್ ದೇಶದ ನೈಸ್ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆಯಾಗಿದೆ. ಈ ಫೆಸ್ಟಿವಲ್ ಕಾರ್ಯಕ್ರಮವು ಮೇ 11 ರಿಂದ 18 ರವರೆಗೆ ನಡೆಯಲಿದೆ.

ರಾಯರ ಸನ್ನಿಧಾನದಲ್ಲಿ ಜಗ್ಗೇಶ್ ಹಾಗೂ ಪರಿಮಳ

#bimba, #telecost, #balkaninews #shrinivasaprabhu, #kannadasuddigalu

Tags

Related Articles