ಸುದ್ದಿಗಳು

ಮಜಾ ಟಾಕೀಸ್ ನಲ್ಲಿ ‘ಬಿಂದಾಸ್ ಗೂಗ್ಲಿ’ ಚಿತ್ರತಂಡ

ಕಲರ್ಸ್ ಸೂಪರ್ ಕನ್ನಡ ವಾಹಿನಿಯು ಪ್ರಸಾರ ಮಾಡುತ್ತಿರುವ ಜನಪ್ರಿಯ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ‘ಬಿಂದಾಸ್ ಗೂಗ್ಲಿ’ ಚಿತ್ರತಂಡದವರು ಭಾಗವಹಿಸಲಿದ್ದಾರೆ.

ಬೆಂಗಳೂರು, ಆ. 10: ಇಂದು ಸಂಜೆ ‘ಮಜಾ ಟಾಕೀಸ್’ ಕಾರ್ಯಕ್ರಮದಲ್ಲಿ ‘ಬಿಂದಾಸ್ ಗೂಗ್ಲಿ’ಚಿತ್ರತಂಡದ ನಾಯಕ ಆಕಾಶ್ ಅನ್ವೇಕರ್ , ಧರ್ಮ ಕೀರ್ತಿರಾಜ್, ನಾಯಕಿಯರಾದ ಮಮತಾ ರಾಹುತ್, ನಿಮಿಕಾ ರತ್ನಾಕರ್, ಶೃತಿ ರಾಮಕೃಷ್ಣ, ನಿರ್ದೇಶಕ ಸಂತೋಷ್ ಹಾಗೂ ನಿರ್ಮಾಪಕ ವಿಜಯ್ ಕುಮಾರ್ ಅನ್ವೇಕರ್ ಅವರುಗಳು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಇಂದು ರಾತ್ರಿ 08 ಗಂಟೆಗೆ ಕಲರ್ಸ್ ಸೂಪರ್ ಕನ್ನಡ ವಾಹಿನಿಯು ಪ್ರಸಾರ ಮಾಡುತ್ತಿರುವ ‘ಮಜಾ ಟಾಕೀಸ್’ ಕಾರ್ಯಕ್ರಮಕ್ಕೆ ಕನ್ನಡ ಪ್ರೇಕ್ಷಕರು ಉತ್ಸುಕರಾಗಿ ಕಾಯುತ್ತಿದ್ದಾರೆ.

ಈಗಾಗಲೇ ‘ಬಿಂದಾಸ್ ಗೂಗ್ಲಿ’ ಚಿತ್ರದ ಹಾಡುಗಳು ಬಿಡುಗಡೆಗೊಂಡು ಸಿನಿ ರಸಿಕರಿಂದ ಮೆಚ್ಚುಗೆ ಗಳಿಸಿವೆ. ಈ ಚಿತ್ರವು ಮುಂದಿನ ತಿಂಗಳ ಮೊದಲ ವಾರ (ಸೆಪ್ಟಂಬರ್ 07) ತೆರೆಗೆ ಬರಲು ಸಿದ್ದತೆ ನಡೆಸಿದ್ದು, ಈಗಾಗಲೇ ಚಿತ್ರತಂಡವು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ.

ಜೀವನದಲ್ಲಿ ಶಿಕ್ಷಣ ಎಷ್ಟು ಮುಖ್ಯವಾಗಿರುತ್ತೋ, ಅಷ್ಟೇ ಪ್ರಾಮುಖ್ಯತೆ ಕಲೆಗೂ ನೀಡಬೇಕು. ಆಗ ಮಾತ್ರ ನಮ್ಮ ಆಸೆ ಫಲಿಸಿ ನಮ್ಮ ಭವಿಷ್ಯ ನಿರ್ಧಾರಿತ ಗುರಿಯತ್ತ ಕರೆದುಕೊಂಡು ಹೋಗುತ್ತದೆ. ಚಿತ್ರದ ಕಥಾ ಸಾರಾಂಶ : ವಿದ್ಯಾರ್ಥಿಗಳು ನೃತ್ಯ ಮಾಡುವುದನ್ನು ನೋಡಿದ ಪ್ರಾಂಶುಪಾಲರು ಕೋಚ್ ಮೂಲಕ ಅವರಿಗೆ ಸೂಕ್ತ ತರಭೇತಿ ಕೊಡಿಸಿ, ಚಾಂಪಿಯನ್ ಆಗುವಂತೆ ಮಾಡುವುದು ಒಂದು ಎಳೆಯಾದರೆ, ಇದರ ಜೊತೆಗೆ ಓರಗೆಯವರಲ್ಲಿ ಗೆಳೆತನ, ಅರಿವಿಲ್ಲದೇ ಹುಟ್ಟುವ ಪ್ರೀತಿಯನ್ನು ತೋರಿಸುವ ಪ್ರಯತ್ನವನ್ನು ಚಿತ್ರದಲ್ಲಿ ತೋರಿಸಲಾಗಿದೆ.

ವಿಜಯ್ ಕುಮಾರ್ ಸ್ಟಾರ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ,ಕುಂದಾನಗರಿ , ಬೆಳಗಾವಿ ಮೂಲದ ನಿರ್ಮಾಪಕ ವಿಜಯ್ ಅನ್ವೇಕರ್ ‘ಬಿಂದಾಸ್ ಗೂಗ್ಲಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಹಿಂದೆ ‘ಸ್ಟೂಡೆಂಟ್’ ಎಂಬ ಚಿತ್ರವನ್ನು ದಿಗ್ದರ್ಶಿಸಿದ್ದ ನಿರ್ದೇಶಕ ಸಂತೋಷ್ ಕುಮಾರ್ ಈ ಚಿತ್ರಕ್ಕೂ ನಿರ್ದೇಶನ ಮಾಡಿದ್ದಾರೆ.

 

ಇನ್ನು, ಚಿತ್ರದಲ್ಲಿ ನಾಯಕನಷ್ಟೇ ಮಹತ್ವದ ಪಾತ್ರವಾದ ನೃತ್ಯ ತರಬೇತು ಪಾತ್ರಧಾರಿಯಾಗಿ ನಟ ಧರ್ಮ ಕೀರ್ತಿರಾಜ್ ನಿಭಾಯಿಸಿದ್ದಾರೆ. ಚಿತ್ರಕ್ಕೆ ಮಮತಾ ರಾಹುತ್, ನಿಮಿತಾ ರತ್ನಾಕರ್, ಶಿಲ್ಪಾ, ಶೃತಿ ರಾಮಕೃಷ್ಣ ಸೇರಿದಂತೆ ಅನೇಕರು ನಟಿಸಿದ್ದು, ಮ್ಯಾಥ್ಯೂ ರಾಜನ್ ಛಾಯಾಗ್ರಹಣ, ವಿನು ಮನಸು ಸಂಗೀತ, ಸುಜಿ, ಹೈಟ್ ಮಂಜು ಕೋರಿಯೋಗ್ರಫಿ ಮಾಡಿದ್ದಾರೆ.

Tags

Related Articles