ಸುದ್ದಿಗಳು

2019: ಇಯರ್ ಆಫ್ ಬಯೋಪಿಕ್ಸ್ ಎಂದರೆ ತಪ್ಪಾಗಲಾರದೇನೋ..?

ಬೆಂಗಳೂರು, ಜ.12: ಸುಖಾಸುಮ್ಮನೆ ಒಬ್ಬರ ಜೀವನಕಥೆಯನ್ನು ತೆರೆ ಮೇಲೆ ಮೂಡಿಸಲು ಸಾಧ್ಯವಿಲ್ಲ. ಒಬ್ಬ ಮಹಿಳೆ ಅಥವಾ ಪುರುಷ ಏನಾದರೂ ವಿಶೇಷವಾಗಿದ್ದನ್ನೂ ಸಾಧಿಸಿದಾಗ ಮಾತ್ರ ಅವರು ಇತಿಹಾಸದ ಪುಟ ಸೇರುತ್ತಾರೆ. ಇಲ್ಲ ಸಾಧಕರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾರೆ. ಹೀಗೆ ಸಮಾಜಕ್ಕೆ ಮಾದರಿಯಾಗಬಲ್ಲಂತಹ ಕೆಲವೊಂದು ವ್ಯಕ್ತಿಗಳ, ಸಿನಿಮಾ ನಟ-ನಟಿಯರ ಜೀವನಕಥೆ ಇದೀಗ ಬಯೋಪಿಕ್ ಮೂಲಕ ತೆರೆಗೆ ಬರುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಯೋಪಿಕ್ ಒಂದು ಟ್ರೆಂಡ್ ಆಗಿ ಬದಲಾಗಿದೆ. ಒಂದು ವೇಳೆ ನೀವು ಬಯೋಪಿಕ್ ಬಗ್ಗೆ ಹೆಚ್ಚಿನ ಗಮನ ಹರಿಸುವವರಾದರೆ, ನಿಮಗೆ ಇಲ್ಲಿದೆ ಸಂತಸದ ಸುದ್ದಿ. ಈ ವರ್ಷ ತೆರೆಕಾಣಲಿರುವ ಕೆಲವೊಂದಿಷ್ಟು ಬಯೋಪಿಕ್ ಗಳ ಕುರಿತಂತೆ ನಾವು ನಿಮಗೆ ಹೇಳುತ್ತೇವೆ ನೋಡಿ.

ಕಥಾನಾಯಕುಡು – ಮಹಾನಾಯಕುಡು

ತೆಲುಗು ಚಿತ್ರರಂಗ ಕಂಡ ಮಹಾನ್ ನಟ, ಹಾಗೂ ರಾಜಕಾರಣಿ ಎನ್ ಟಿಆರ್ ಅವರ ಬಯೋಪಿಕ್ ಎರಡು ಕಂತುಗಳಲ್ಲಿ ರೆಡಿಯಾಗುತ್ತಿದ್ದು, ಮೊದಲ ಭಾಗ ಜನವರಿ 9ರಂದು ಬಿಡುಗಡೆಯಾಗಿದ್ದು, ಮಹಾನಾಯಕುಡು ಎಂಬ ಎರಡನೇ ಭಾಗ ಫೆಬ್ರವರಿ 7ರಂದು ತೆರೆಕಾಣಲಿದೆ. ಎನ್ ಟಿ ಆರ್ ಪಾತ್ರದಲ್ಲಿ ಅವರ ಪುತ್ರ ಬಾಲಕೃಷ್ಣ ನಟಿಸಿದ್ದು, ಈಗಾಗಲೇ ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ.ಯಾತ್ರಾ

ವೈ ಎಸ್ ರಾಜಶೇಖರ್ ರೆಡ್ಡಿ ಅವರ ಬಯೋಪಿಕ್ ಯಾತ್ರಾ ಹೆಸರಿನಲ್ಲಿ ತೆರೆ ಮೇಲೆ ಮೂಡಿಬರುತ್ತಿದೆ. ಅಂದಹಾಗೆ ಈ ಯಾತ್ರಾದಲ್ಲಿ ರಾಜಶೇಖರ್ ಅವರ ಇಡೀ ಬದುಕಿನ ಕುರಿತ ಕಥೆಯನ್ನು ಒಳಗೊಂಡಿಲ್ಲ. ಕೇವಲ ಪಾದಯಾತ್ರೆಯನ್ನು ಒಳಗೊಂಡ ವಿಚಾರಗಳನ್ನು, ಘಟನೆಗಳನ್ನು ಒಳಗೊಂಡಿದ್ದು ಚಿತ್ರ ಫೆಬ್ರವರಿ 8ರಂದು ತೆರೆಕಾಣುತಿದೆ.ಮಣಿಕಾರ್ಣಿಕಾ

ಇತಿಹಾಸದ ಕಥೆಯನ್ನು ಒಳಗೊಂಡ ಚಿತ್ರ ‘ಮಣಿಕಾರ್ಣಿಕಾ’, ಜಾನ್ಸಿ ಕಿ ರಾಣಿ ಲಕ್ಷ್ಮೀ ಬಾಯ್ ಅವರ ಕಥೆ ತೆರೆ ಮೇಲೆ ಮಣಿಕಾರ್ಣಿಕಾ ಹೆಸರಿನಲ್ಲಿ ಮೂಡಿಬರುತ್ತಿದ್ದು, ಕಂಗನಾರಾಣಾವತ್ ಜಾನ್ಸಿಯಾಗಿ ನಟಿಸಿದ್ದಾರೆ, ವಿಜಯೇಂದ್ರ ಪ್ರಸಾದ್ (ರಾಜಮೌಳಿ ತಂದೆ) ಚಿತ್ರಕ್ಕೆ ಕಥೆ ಬರೆದಿದ್ದು, ಈಗಾಗಲೇ ಚಿತ್ರ ಕುತೂಹಲ ಮೂಡಿಸಿದೆ.83

ಕ್ರಿಕೆಟಿಗ ಕಪಿಲ್ ದೇವ್ ಅವರ ಬಯೋಪಿಕ್ ‘83’. ರಣ್ವೀರ್ ಸಿಂಗ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಈ ವರ್ಷ ಚಿತ್ರ ತೆರೆಗೆ ಬರುತ್ತಿದೆ. 1983ರಲ್ಲಿ ಕಪಿಲ್ ದೇವ್ ಕ್ಯಾಪ್ಟನ್ ಆಗಿದ್ದಾಗ ಭಾರತೀಯ ಕ್ರಿಕೆಟ್ ತಂಡ 1983ರ ವಿಶ್ವಕಪ್ ಗೆದ್ದಿತ್ತು. ಇದೇ ಕಥೆ 83 ಚಿತ್ರದಲ್ಲಿ ಮೂಡಿಬರಲಿದೆ.ಸೂಪರ್ 30

ಗಣಿತಶಾಸ್ತ್ರಜ್ಞ ಆನಂದ್ ಕುಮಾರ್ ಅವರ ಜೀವನಕಥೆಯನ್ನು ಸೂಪರ್ 30 ಹೆಸರಿನಲ್ಲಿ ವಿಕಾಸ್ ಬಾಹ್ಲ್ ನಿರ್ದೇಶಿಸುತ್ತಿದ್ದು, ಆನಂದ್ ಕುಮಾರ್ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸುತ್ತಿದ್ದಾರೆ. ಸೈರಾ

ಸ್ವಾತಂತ್ರ್ಯಹೋರಾಟಗಾರ ಉಯ್ಯಾಲವಾಡ ನರಸಿಂಹರೆಡ್ಡಿ ಅವರ ಜೀವನಕಥೆಯನ್ನು ಒಳಗೊಂಡ ಚಿತ್ರದಲ್ಲಿ ಚಿರಂಜೀವಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಚಿತ್ರಕ್ಕೆ ಸುರೇಂದ್ರ ರೆಡ್ಡಿ ಆಕ್ಷನ್ ಕಟ್ ಹೇಳುತ್ತಿದ್ದು, ರಾಮ್ ಚರಣ್ ತೇಜಾ ಅವರು ನಿರ್ಮಾಣ ಮಾಡುತ್ತಿದ್ದಾರೆ.ತಿರುನಲ್ ಮರ್ತಾಂಡ ವರ್ಮಾ : ದಿ ಕಿಂಗ್ ಆಫ್ ಟ್ರಾವಂಕೂರ್

ರಾಣಾ ದಗ್ಗುಬಾಟಿ ಅಭಿನಯದ ತಿರುನಲ್ ಮಾರ್ತಾಂಡ ವರ್ಮಾ ಚಿತ್ರ ಮಲೆಯಾಳಂನಲ್ಲಿ ಮೂಡಿಬರುತ್ತಿದ್ದು, ಇತರ ಭಾಷೆಗಳಿಗೂ ಡಬ್ ಆಗಲಿದೆ. ಈ ಚಿತ್ರದ ಮೂಲಕ ರಾಣಾ ಮಲೆಯಾಳಂ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ ಎಂಬುದು ಮತ್ತೊಂದು ವಿಶೇಷ.

#ranadaggubatti #syra #yatra #biopics #balkaninews

Tags