ಸುದ್ದಿಗಳು

ಬಿಡುಗಡೆಗೂ ಮುನ್ನವೇ ‘ಬೀರಬಲ್’ ಹಿಂದಿಗೆ ರಿಮೇಕ್!!?!!

ಬೆಂಗಳೂರು,ಜ.11: ಚಮಕ್‌’, “ಅಯೋಗ್ಯ’ ಚಿತ್ರಗಳನ್ನು ನಿರ್ಮಿಸಿರುವ ಟಿ.ಆರ್‌.ಚಂದ್ರಶೇಖರ್‌ “ಬೀರಬಲ್‌’ ಚಿತ್ರವನ್ನು ಮಾಡಿ, ಈಗ ಅದು ಬಿಡುಗಡೆ ಹಂತಕ್ಕೆ ತಲುಪಿದೆ. ಈಗ ಆ ಚಿತ್ರದ ಚಿತ್ರೀಕರಣ ಮುಗಿದಿದ್ದು, ಈ ಹಿಂದೆ “ಟೋಪಿವಾಲಾ’, “ಶ್ರೀನಿವಾಸ ಕಲ್ಯಾಣ’ ಚಿತ್ರಗಳನ್ನು ನಿರ್ದೇಶಿಸಿದ್ದ ಎಂ.ಜೆ.ಶ್ರೀನಿವಾಸ್‌ ಈ ಚಿತ್ರದ ನಿರ್ದೇಶಕರು. ಕೇವಲ ನಿರ್ದೇಶನವಷ್ಟೇ ಅಲ್ಲ, ನಾಯಕರಾಗಿಯೂ ನಟಿಸಿದ್ದಾರೆ.

‘ಬೀರಬಲ್’  ಹಿಂದಿಗೆ  ರಿಮೇಕ್?

ಇದೇ ತಿಂಗಳ 18 ರಂದು ಬಿಡುಗಡೆಯಾಗಲಿದೆ.. ಇನ್ನು ಚಿತ್ರ ಬಿಡುಗಡೆಗೂ ಮುನ್ನವೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ..  ಹೌದು ‘ಬೀರಬಲ್’  ಹಿಂದಿಗೆ  ರಿಮೇಕ್  ಆಗಲಿದೆ ಎಂಬ ಗುಸುಗುಸು ಸುದ್ದಿ ಕೇಳಿಬರುತ್ತಿದೆ..

Image result for birbal kannadamovie poster

ಟ್ರೈಲರ್ ಗೆ ಇತ್ತೀಗೆ ಉತ್ತಮ ಪ್ರತಿಕ್ರಿಯೆ!

ಚಿತ್ರನಿರ್ಮಾಪಕ ಮತ್ತು ನಟ ಎಂ.ಜಿ.ಶ್ರೀನಿವಾಸ್  ಹೇಳುವಂತೆ ಚಿತ್ರ ಟ್ರೈಲರ್ ಇತ್ತೀಚೆಗೆ ಬಿಡುಗಡೆಯಾಗಿತ್ತು. ಉತ್ತಮ ಪ್ರತಿಕ್ರಿಯೆ ಕೂಡ ಗಳಿಸಿತ್ತು..  ಹಾಗಾಗಿ ಈ ಚಿತ್ರದ ಹಿಂದಿ ರಿಮೇಕ್ ಹಕ್ಕುಗಳಿಗಾಗಿ ಸಂಪರ್ಕಿಸಿದ್ದೇವೆ ಎಂದು ಹೇಳಿದ್ದಾರೆ. ಅದೇ ಪ್ರಕ್ರಿಯೆ ನಡೆಯುತ್ತಿದೆ ಮತ್ತು ಒಂದು ತಿಂಗಳ ಸಮಯದಲ್ಲಿ ಹೆಚ್ಚು ಸ್ಪಷ್ಟತೆ ಲಭ್ಯವಾಗುತ್ತದೆ ಎಂದು ಹೇಳಿದ್ದಾರೆ

#birbal #balkaninews

Tags