ಸುದ್ದಿಗಳು

‘ಬೀರ್ ಬಲ್’ ನಲ್ಲಿ ಬಿಗ್ ಬಾಸ್ ಕವಿತಾ ಚಿನ್ನು

ಮೂರು ಸರಣಿಗಳಲ್ಲಿ ಬರಲಿರುವ ಸಿನಿಮಾ

ಬೆಂಗಳೂರು, ನ.29: ‘ಟೋಪಿವಾಲಾ’ ಚಿತ್ರದಲ್ಲಿ ನಿರ್ದೇಶಕರಾದ ಶ್ರೀನಿ ಆನಂತರ ‘ಶ್ರೀನಿವಾಸ ಕಲ್ಯಾಣ’ ಮೂಲಕ ನಿರ್ದೇಶಕ ಕಮ್ ನಟರಾದರು. ಇದೀಗ ‘ಬೀರ್ಬಲ್; ಕೇಸ್ ನಂ.1-ಫೈಂಡಿಂಗ್ ವಜ್ರಮುನಿ’ ಚಿತ್ರ ಕೈಗೆತ್ತಿಕೊಂಡು ಹಲವು ತಿಂಗಳುಗಳೇ ಆಗಿವೆ. ಬರೀ ಟೈಟಲ್ ನಿಂದ ಎಲ್ಲರ ಗಮನ ಸೆಳೆದಿರುವ ಈ ಸಿನಿಮಾ ಸದ್ಯದಲ್ಲಿಯೇ ತೆರೆಗೆ ಬರಲಿದೆ.

ಕವಿತಾ ಚಿನ್ನು

ಸದ್ಯ ಕನ್ನಡ ಬಿಗ್ ಬಾಸ್- 6 ನಲ್ಲಿ ಸ್ಪರ್ಧಿಯಾಗಿರುವ ಕವಿತಾ ಚಿನ್ನು ‘ಬೀರ್ ಬಲ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹಾಗಂತಾ ಅವರು ಇಲ್ಲಿ ನಾಯಕಿಯಲ್ಲಾ, ಬದಲಿಗೆ ಮಹತ್ವದ ಅತಿಥಿ ಪಾತ್ರದಲ್ಲಿ ಕಂಡು ಬರುತ್ತಾರೆ. ಈಗಾಗಲೇ ಇವರು ಸಿನಿಮಾದಲ್ಲಿ ನಟಿಸಿದ್ದಾರೆ.

ಚಿತ್ರದ ಬಗ್ಗೆ

ಅಂದ ಹಾಗೆ ಇದೊಂದು ಮೂರು ಸರಣಿಗಳಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಮೊದಲ ಸರಣಿ ಈಗ ಸಿದ್ದಗೊಳ್ಳುತ್ತಿದೆ. ಈ ಚಿತ್ರದಲ್ಲಿ ಕವಿತಾ ಚಿನ್ನು ಅತಿಥಿಯಾಗಿ ನಟಿಸಿದರೂ ಸಹ ಅವರ ಪಾತ್ರದಿಂದಲೇ ಚಿತ್ರಕ್ಕೊಂದು ತಿರುವು ಸಿಗಲಿದೆ. ಇನ್ನು ಮೊದಲ ಸರಣಿಗೆ ‘ಕೇಸ್ ನಂ.1-ಫೈಂಡಿಂಗ್ ವಜ್ರಮುನಿ’ ಎಂಬ ಹೆಸರನ್ನು ಇಟ್ಟಿರುವುದರಿಂದ ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ಕುತೂಹಲಗಳು ಹೆಚ್ಚಾಗುತ್ತಿವೆ.

ವಜ್ರಮುನಿಯನ್ನು ಹುಡುಕಬೇಕು

ಈ ಚಿತ್ರದಲ್ಲಿ ನಾಯಕ ಶ್ರೀನಿ ಅವರು ಲಾಯರ್ ಆದರೂ ಸಹ ಇಲ್ಲಿ ವಾದ-ವಿವಾದಕ್ಕಿಂತ ಹೆಚ್ಚಾಗಿ ತನಿಖೆಯ ಮೇಲೆಯೇ ಕಥೆ ಸಾಗುತ್ತದೆ. ತಾಂತ್ರಿಕವಾಗಿಯೂ ಈ ಸಿನಿಮಾ ಸೌಂಡ್ ಮಾಡಲಿದೆ. ಇನ್ನು ಈ ಚಿತ್ರಕ್ಕೆ ನಾಯಕಿಯಾಗಿ ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಕರ್ನಲ್ ವಸಂತ್ ಹಾಗೂ ಸುಭಾಷಿಣಿ ವಸಂತ್ ಅವರ ಪುತ್ರಿಯಾಗಿರುವ ಇವರು ಈ ಸಿನಿಮಾ ಮೂಲಕ ಇದೇ ಮೊದಲ ಬಾರಿಗೆ ಬೆಳ್ಳಿತೆರೆಯ ಮೇಲೆ ನಾಯಕಿಯಾಗಿ ಕಾಣಿಸಿ ಕೊಳ್ಳಲಿದ್ದಾರೆ.

ಬೀರ್ ಬಲ್ ಕೇಸ್-1 ಪೂರ್ಣಗೊಂಡು ಬಿಡುಗಡೆ ಆದ ಬಳಿಕ ‘ಕೇಸ್ 2’ ಮತ್ತು ‘ಕೇಸ್ 3’ ಅರ್ಥಾತ್ ‘ಅವ್ರನ್ ಬಿಟ್ ಇವ್ರನ್ ಬಿಟ್ ಅವರ್ ಯಾರು?’ ಹಾಗೂ ‘ತುರೆಮಣೆ’ ಚಿತ್ರಗಳು ಒಂದೊಂದು ವರ್ಷದ ಅಂತರದಲ್ಲಿ ಬಿಡುಗಡೆ ಆಗಲಿವೆ.

Tags