
ಬೆಂಗಳೂರು.ಫೆ.12
‘ಚಮಕ್’, ‘ಅಯೋಗ್ಯ’ ಚಿತ್ರಗಳ ನಂತರ ನಿರ್ಮಾಪಕ ಟಿ. ಆರ್ ಚಂದ್ರಶೇಖರ್ ನಿರ್ಮಾಣದ ಮೂರನೇ ಸಿನಿಮಾ ‘ಬೀರ್ ಬಲ್’ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಈ ಮೂಲಕ ಅವರು ಹ್ಯಾಟ್ರಿಕ್ ನಿರ್ಮಾಪಕರಾಗಿದ್ದಾರೆ.
‘ಬೀರ್ ಬಲ್’ ನಿಗೆ 25 ದಿನಗಳು
‘ಟೋಪಿವಾಲಾ’ ಹಾಗೂ ‘ಶ್ರೀನಿವಾಸ ಕಲ್ಯಾಣ’ ಚಿತ್ರಗಳ ನಂತರ ನಿರ್ದೇಶಕ ಶ್ರೀನಿ, ನಟನೆ ಮತ್ತು ನಿರ್ದೇಶನ ಮಾಡಿರುವ ‘ಬೀರ್ ಬಲ್’ ಚಿತ್ರವು ಕ್ರೈಂ ಮತ್ತು ಸಸ್ಪೆನ್ಸ್ ಕಥಾಹಂದರವನ್ನು ಒಳಗೊಂಡಿದ್ದು, ಸದ್ಯ ಯಶಸ್ವಿ ನಾಲ್ಕನೆಯ ವಾರಕ್ಕೆ ಕಾಲಿಟ್ಟಿದೆ. ಈ ಚಿತ್ರದ ಮೂಲಕ ರುಕ್ಮಿಣಿ ಭರವಸೆಯ ನಾಯಕಿಯಾಗಿ ಹೊರ ಹೊಮ್ಮಿದ್ದು, ಅವರಿಗೆ ಅವಕಾಶಗಳು ಸಿಗುತ್ತಿವೆ.
ಕಥಾಹಂದರ
‘ಬೀರ್ ಬಲ್- ಫೈಡಿಂಗ್ ಆಫ್ ವಜ್ರಮುನಿ’ ಸಿನಿಮಾ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ರೀತಿಯಲ್ಲಿ ಮೂಡಿ ಬಂದಿದ್ದು, ನಟ ಕಮ್ ನಿರ್ದೇಶಕ ಶ್ರೀನಿ, ನೋಡುಗರಿಗೆ ಸಖತ್ ಥ್ರಿಲ್ ಕೊಟ್ಟಿದ್ದಾರೆ. ಈ ರೀತಿಯ ಸಿನಿಮಾಗಳು ಈ ಹಿಂದೆ ಹತ್ತು ಹಲವು ಬಂದಿದ್ದರೂ ಸಹ ಇದು ಮಾತ್ರ ಅವೆಲ್ಲವುಗಳಿಗಿಂತ ವಿಭಿನ್ನವಾಗಿದೆ ಮತ್ತು ವಿನೂತನವಾಗಿದೆ. ನೆನಪಲ್ಲಿ ಉಳಿಯುವಂತಹ ಸಿನಿಮಾ ಅನಿಸಿಕೊಂಡಿದೆ.
ಚಿತ್ರದಲ್ಲಿ ಯಾರೋ ಮಾಡಿರುವ ಕೊಲೆ, ಇನ್ನೊಬ್ಬನ ಮೇಲೆ ಬರುವ ಕಥೆಯನ್ನು ಅಚ್ಚುಕಟ್ಟಾಗಿ ತೆರೆಯ ಮೇಲೆ ಪ್ರಸ್ತುತಪಡಿಸಲಾಗಿದೆ. ಇನ್ನು ಆ ಕೊಲೆಯ ಅಪವಾದದಿಂದ ತಪ್ಪಿಸಿಕೊಳ್ಳಲು ಮಾಡುವ ತಂತ್ರ ಅದ್ಭುತವಾಗಿದೆ. ವಕೀಲರ ಚಾಣಾಕ್ಷತನ ಇದರಲ್ಲಿ ಎದ್ದು ಕಾಣುತ್ತದೆ.
#birbale, #balkaninews #balkaninews #srini, #sathishninasam, #rukmini # #kannadasuddigalu